ರವಿವರ್ಮ ಚಿತ್ರಕಲಾ ಶಾಲೆಯಲ್ಲಿ  ಮುರಳಿಯವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ಮೈಸೂರು

ರವಿವರ್ಮ ಚಿತ್ರಕಲಾ ಶಾಲೆಯಲ್ಲಿ  ಮುರಳಿಯವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

July 12, 2018

ಮೈಸೂರು:  ಮೈಸೂರಿನ ಚಾಮುಂಡಿಪುರಂನಲ್ಲಿರುವ ರವಿವರ್ಮ ಚಿತ್ರಕಲಾ ಶಾಲೆಯಲ್ಲಿ ಟಿ.ಎಸ್.ಮುರಳಿಯವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಪ್ರದರ್ಶನವನ್ನು ಉದ್ಘಾಟಿಸಿದ ಸಂಸದ ಪ್ರತಾಪ್ ಸಿಂಹ, ಕಲೆ ಮತ್ತು ಸಾಹಿತ್ಯ ಎಲ್ಲರಿಗೂ ಒಲಿಯುವುದಿಲ್ಲ. ಅದಕ್ಕೆ ಕಠಿಣ ಪರಿಶ್ರಮ ಅಗತ್ಯವಾಗಿದ್ದು, ಏಕಚಿತ್ತದಿಂದ ಕಲಿತರೆ ಮಾತ್ರ ಸಾಧ್ಯವಾಗುತ್ತದೆ. ಕಲ್ಪನೆಯಲ್ಲಿ ಮೂಡುವ ಅಮೂರ್ತ ರೂಪದ ಸ್ಥಳಗಳನ್ನು ಮೂರ್ತರೂಪಕ್ಕೆ ತರುವ ಕೆಲಸ ಟಿ.ಎಸ್.ಮುರಳಿಯವರಿಂದ ಮಾತ್ರ ಸಾಧ್ಯವಾಗಿದೆ ಮೈಸೂರಿನ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಚಿತ್ರಿಸಿರುವುದು ಶ್ಲಾಘನೀಯ ಎಂದು ಕಲಾವಿದ ಟಿ.ಎಸ್.ಮುರುಳಿಯವರನ್ನು ಅಭಿನಂದಿಸಿದರು.
40 ಬಗೆಯ ಕಲಾಕೃತಿಗಳು- 5 ದಿನಗಳು ನಡೆಯುವ ಪ್ರದರ್ಶನದಲ್ಲಿ ರಚಿಸಿರುವ ಕಲಾಕೃತಿಗಳು ಮೈಸೂರಿನ ಸುತ್ತಮುತ್ತಲಿನ ದೃಶ್ಯಗಳಾಗಿದ್ದು, ಮೇಲುಕೋಟೆ, ಮಡಿಕೇರಿ ಮತ್ತು ಮಾಗಡಿಯ ಪ್ರಮುಖ ಪ್ರದೇಶಗಳನ್ನು ಒಳಗೊಂಡಿದೆ. ಕಲಾವಿದನಿಗೆ ಯಾವಾಗಲು ಮುದನೀಡುವ ನಿಸರ್ಗ ಕಲಾಕೃತಿಗಳಾಗಿದ್ದು, ಬಂಡೆಕಲ್ಲುಗಳು ಪ್ರಕೃತಿಯೇ ನಿರ್ಮಿಸಿದ ಶಿಲ್ಪಗಳಂತೆ ಕಾಣುತ್ತವೆ. ಇನ್ನೂ ಕೆಲವು ಮನುಷ್ಯನ ಊಹೆಗೂ ನಿಲುಕದಂತೆ ತನ್ನ ನಿಲುವನ್ನು ಹೊಂದಿವೆ. ಜಲವರ್ಣ ಮತ್ತು ಅರ್ಕಲಿಕ್ ಮಾಧ್ಯಮದಿಂದ ಕಲಾಕೃತಿಗಳು ಮೂಡಿಬಂದಿವೆ.

ವಕೀಲ ಅರುಣ್ ಕುಮಾರ್, ಕಿರುತೆರೆ ನಟ ಗೌತಮ್ ಘಾಟ್ಕೆ, ಉದ್ಯಮಿ ಎಂ.ಜೆ.ಮಂಜುನಾಥ್, ರವಿವರ್ಮ ಚಿತ್ರಕಲಾ ಶಾಲೆ ಪ್ರಾಶುಪಾಲ ಶಿವಕುಮಾರ ಕೆಸರಮಡು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »