ಮೈಸೂರು: ರಿಂಗ್ ರಸ್ತೆಯಲ್ಲಿ ತಲೆ ಎತ್ತಿರುವ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ವೈನ್ ಸ್ಟೋರ್‍ಗಳಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಸಂಸದ ಪ್ರತಾಪ್ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿನಕಲ್ ಬಳಿ ರಿಂಗ್ ರೋಡ್ ಜಂಕ್ಷನ್‍ನಲ್ಲಿ ಫ್ಲೈಓವರ್ ಕಾಮಗಾರಿ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಿಂಗ್ ರಸ್ತೆ ಇರುವುದು ಮೈಸೂರು ನಗರದ ವಾಹನ ದಟ್ಟಣೆ ತಪ್ಪಿಸುವುದಕ್ಕೆ. ಅಪಘಾತಗಳನ್ನು ನಿಯಂತ್ರಿಸಿ ಜನರ ಪ್ರಾಣ ಉಳಿಸಬೇಕೆಂಬ ಉದ್ದೇಶದಿಂದ ನಿರ್ಮಾಣವಾದ ರಿಂಗ್ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಇಲ್ಲಿ ಬಾರ್ ಮತ್ತು…
ವಿಧಾನಸಭೆಯ ಕೊನೇ ಸಾಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಶಿಫ್ಟ್
July 4, 2018ಬೆಂಗಳೂರು: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿಧಾನ ಸಭೆಯಲ್ಲಿ ಕೊನೇ ಸಾಲಿಗೆ ಶಿಫ್ಟ್ ಆಗಿದ್ದಾರೆ. ಸೋಮವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಿಂದೆ ಕೂತು ಇರಿಸು ಮುರಿಸು ಅನುಭವಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇವತ್ತು ವಿಧಾನಸಭೆಯಲ್ಲಿ ಲಾಸ್ಟ್ ಬೆಂಚ್‍ಗೆ ಶಿಫ್ಟ್ ಆಗಿದ್ದಾರೆ. ಸಿದ್ದ ರಾಮಯ್ಯ ಸೋಮವಾರ ಕೂಡ ವಿಧಾನ ಸಭೆಯಲ್ಲಿ 2ನೇ ಸಾಲಿನಲ್ಲಿ ಕುಳಿತಿದ್ದರು. ಈ ಸಂಬಂಧ ಮಾಧ್ಯಮಗಳು ವರದಿ ಮಾಡಿತ್ತು. ಇದರಿಂದ ಮುಜು ಗರಕ್ಕೆ ತುತ್ತಾದ ಸಿದ್ದರಾಮಯ್ಯ ಇವತ್ತು ಹೋಗಿ ಕೊನೆಯ ಸಾಲಿನಲ್ಲಿ ಕುಳಿತ್ತಿ ದ್ದಾರೆ ಎನ್ನಲಾಗಿದೆ….
ಸಚಿವ ಜಿ.ಟಿ.ದೇವೇಗೌಡ ಮಹತ್ವಾಕಾಂಕ್ಷೆಯ ಉಂಡುವಾಡಿ ಕುಡಿಯುವ ನೀರು ಯೋಜನೆ ಬಜೆಟ್‍ನಲ್ಲಿ ಪ್ರಸ್ತಾಪ ನಿರೀಕ್ಷೆ
July 4, 2018ಮೈಸೂರು: ಮೈಸೂರು ನಗರ ಸೇರಿದಂತೆ ಸಮೀಪದ ಹಲವು ಗ್ರಾಮ ಗಳಿಗೆ ಕುಡಿಯುವ ನೀರು ಪೂರೈಸುವ ಉಂಡುವಾಡಿ ಬಳಿಯ ಉದ್ದೇಶಿತ ಯೋಜನೆ, ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಸೇರ್ಪಡೆಯಾಗುವ ನಿರೀಕ್ಷೆ ಇದೆ. ಈ ಮಹತ್ವದ ಯೋಜನೆ ಅನುಷ್ಠಾನ ಕ್ಕಾಗಿ ಹಿಂದಿನಿಂದಲೂ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ಒತ್ತಾಸೆ ಮೇರೆಗೆ, ಬಜೆಟ್‍ನಲ್ಲಿ ಸೇರ್ಪಡೆಯಾಗಿದೆ. ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಜು.5ರಂದು ಮಂಡಿಸಲಿರುವ ಬಜೆಟ್ ನಲ್ಲಿ ಯೋಜನೆ ಸಂಬಂಧ ಪ್ರಸ್ತಾಪಿಸ ಲಿದ್ದಾರೆ…
ಹಾಲಿ ಕುಮಾರಸ್ವಾಮಿಯವರ 12 ವರ್ಷದ ಹಿಂದಿನ ಗ್ರಾಮ ವಾಸ್ತವ್ಯದ ಭರವಸೆ ಈಡೇರುವ ನಿರೀಕ್ಷೆಯಲ್ಲಿ ಬಡ ಜೀವಗಳು
July 4, 2018ಮೈಸೂರು: ಕಳೆದ 12 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿ ಗ್ರಾಮ ವಾಸ್ತವ್ಯ ಮಾಡಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು ತಾವು ನೀಡಿದ್ದ ಭರವಸೆಗಳನ್ನು ಈಗಲಾದರೂ ಈಡೇರಿಸುವರೇ ಎಂದು ಮೈಸೂರಿನ ನೂರಾರು ಕುಟುಂಬ ಕಾದು ಕುಳಿತಿವೆ. 2006ರಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು, ಮೈಸೂರಿನ ಮೇದರ್ ಬ್ಲಾಕ್‍ನ ಕೊಳಗೇರಿಯಲ್ಲಿರುವ ಲಕ್ಷ್ಮಮ್ಮ ಅವರ ಗುಡಿಸಲಲ್ಲಿ ವಾಸ್ತವ್ಯ ಹೂಡಿದ್ದರು. ಮುದ್ದೆ, ಸೊಪ್ಪಿನ ಸಾರು, ವಡೆ ಮತ್ತು ಪಾಯಸ ಸವಿದಿದ್ದ ಅವರು, ಅಲ್ಲಿನ ಜನರ ಸಮಸ್ಯೆ ಗಳನ್ನ ಆಲಿಸಿ, ಗುಡಿಸಲಿನಲ್ಲಿ…
ಲಾರಿ ಚಾಲಕರ ಪೈಪೋಟಿಗೆ ಬಸವೇಶ್ವರ ಗುಡಿ ಧ್ವಂಸ
July 4, 2018ಮೈಸೂರು: ನಾ ಮುಂದು, ತಾ ಮುಂದು ಎಂದು ಪೈಪೋಟಿಗೆ ಬಿದ್ದ ಸಿಮೆಂಟ್ ಲಾರಿಯೊಂದು ಮೈಸೂರು-ನಂಜನ ಗೂಡು ರಸ್ತೆಯಲ್ಲಿ ಬಂಡಿಪಾಳ್ಯ ಬಳಿ ರಿಂಗ್ ರೋಡ್ ಸಿಗ್ನಲ್‍ನಲ್ಲಿ ಗುಡಿಗೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಸಂಜೆ ನಡೆದಿದೆ. ಈ ಘಟನೆಯಿಂದ ಬಸವೇಶ್ವರ ಗುಡಿಯ ಅರ್ಚಕ ಅನ್ನದಾನಪ್ಪ, ಗುಡಿಯ ಮುಂಭಾಗ ಬಸ್ಸಿಗೆ ಕಾಯುತ್ತ ನಿಂತಿದ್ದ ರವಿಚಂದ್ರ ಮತ್ತು ವಿನಾಯಕ ಎಂಬುವವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಡಿಮೊಹಲ್ಲಾದ ನಿವಾಸಿ, ಲಾರಿ ಚಾಲಕ ರಾಘವೇಂದ್ರ, ಮೈಸೂರಿನಿಂದ ನಂಜನಗೂಡು ಕಡೆಗೆ ಸಿಮೆಂಟ್ ತುಂಬಿದ…
ವಿಷ ಸೇವಿಸಿ ಯುವಕ ಆತ್ಮಹತ್ಯೆ
July 4, 2018ಮೈಸೂರು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನೋರ್ವ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.ಮೈಸೂರಿನ ವಿನಾಯಕನಗರ (ಪಡುವಾರಹಳ್ಳಿ)ದಲ್ಲಿರುವ ಅಜ್ಜಿ ಮನೆಯಲ್ಲಿ ಉಳಿದುಕೊಂಡಿದ್ದ ಹೆಚ್.ಡಿ.ಕೋಟೆ ಮೂಲದ ಸತೀಶ್(23) ಮೃತ ಯುವಕ. ಅಜ್ಜಿ ಮನೆಯಲ್ಲಿ ವಾಸವಿದ್ದ ಸತೀಶ್, ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ವಾರದ ಹಿಂದೆ ಮನೆ ಯಲ್ಲೇ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾನೆ. ಸಾಲ ಮಾಡಿಕೊಂಡಿ ದ್ದ ಸತೀಶ್, ಸರಿಯಾಗಿ ಕೆಲಸಕ್ಕೂ ಹೋಗು ತ್ತಿರಲಿಲ್ಲ. ಇದರಿಂದ…
ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿ ಸಾವು
July 4, 2018ಮೈಸೂರು: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಯೋರ್ವ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮೈಸೂರು ತಾಲೂಕಿನ ಸೋಮೇಶ್ವರಪುರದ ಶ್ರೀಕಂಠಪ್ಪ ಅವರ ಪುತ್ರ, ಮನೋಜ್ (16) ಮೃತ ವಿದ್ಯಾರ್ಥಿ. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮನೋಜ್, ಜೂ.22 ರಂದು ಸಹೋದರ ರಾಹುಲ್ ನೊಂದಿಗೆ ಬೈಕ್‍ನಲ್ಲಿ ಜಮೀನಿಗೆ ತೆರಳುತ್ತಿದ್ದಾಗ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ರಾಹುಲ್‍ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಮನೋಜ್ ತೀವ್ರವಾಗಿ ಗಾಯ ಗೊಂಡಿದ್ದ. 10 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಮನೋಜ್‍ಗೆ…
ಕೊಟ್ಟಿಗೆಗೆ ನುಗ್ಗಿ ಸಾಕುಪ್ರಾಣಿಗಳ ಕೊಂದ ಚಿರತೆ
July 4, 2018ಮೈಸೂರು: ಮೈಸೂರು ತಾಲೂಕಿನ ದೊಡ್ಡಕಾನ್ಯ ಗ್ರಾಮ ದಲ್ಲಿ ಚಿರತೆ ಕೊಟ್ಟಿಗೆಗೆ ನುಗ್ಗಿ ಕೋಳಿ, ಕುರಿ ಹಾಗೂ ಮೇಕೆ ಮರಿಯನ್ನು ಕೊಂದಿದೆ. ಗ್ರಾಮದ ಅನಿತಾ ಅವರಿಗೆ ಸೇರಿದ ಕೊಟ್ಟಿಗೆಗೆ ಸೋಮವಾರ ರಾತ್ರಿ ನುಗ್ಗಿ ರುವ ಚಿರತೆ, ಕೋಳಿ, ಕುರಿ, ಮೇಕೆ ಗಳನ್ನು ಕೊಂದು ಪರಾರಿಯಾಗಿದೆ. ಈ ಹಿಂದೆಯೂ ಗ್ರಾಮಕ್ಕೆ ನುಗ್ಗಿದ್ದ ಚಿರತೆ, ನಾಯಿಯನ್ನು ಕೊಂದಿತ್ತು. ಹೀಗೆ ನಿರಂತರ ಚಿರತೆ ದಾಳಿಯಿಂದ ಆತಂಕಗೊಂಡಿರುವ ಗ್ರಾಮಸ್ಥರು, ಬೋನ್ ಇಟ್ಟು ಚಿರತೆಯನ್ನು ಸೆರೆ ಹಿಡಿಯಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಬೀರಿಹುಂಡಿಯಲ್ಲಿ…
ಮೈತ್ರಿ ಸರ್ಕಾರದ ಚೊಚ್ಚಲ ಅಧಿವೇಶನ ಆರಂಭ: ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ ವಾಲಾ ಭಾಷಣ
July 3, 2018ಸಮಗ್ರ ಕರ್ನಾಟಕ ಕಲ್ಯಾಣಕ್ಕೆ ದೋಸ್ತಿ ಸಂಕಲ್ಪ ಹಿಂದಿನ ಸರ್ಕಾರದ ಭಾಗ್ಯಗಳ ಜೊತೆಗೆ ರೈತರ ಸಂಕಷ್ಟಕ್ಕೆ ನೆರವು ಪರಿಶಿಷ್ಟ ಜಾತಿ, ವರ್ಗದ ಕುಟುಂಬಗಳಿಗೆ ಅಡುಗೆ ಅನಿಲ, ಕೌಶಲ್ಯ ಅಭಿವೃದ್ಧಿ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಕ್ಯಾನ್ಸರ್ ಕೇರ್ ಘಟಕ ಆರಂಭ ಪೇದೆಗಳಿಗೆ ಠಾಣಾ ವ್ಯಾಪ್ತಿಯಲ್ಲಿ ಭೌಗೋಳಿಕ ಸರಹದ್ದು ನಿಗದಿ ಬೆಂಗಳೂರು: ಸಮ್ಮಿಶ್ರ ಸರ್ಕಾರದ ಚೊಚ್ಚಲ ಅಧಿವೇಶನದಲ್ಲಿ ಸರ್ಕಾರದ ಮುಂದಿನ ಐದು ವರ್ಷದ ಸ್ಥಿರತೆಯ ಖಾತರಿಯೊಂದಿಗೆ ಆಯ್ದ ಕ್ಷೇತ್ರಗಳ ಅಭಿವೃದ್ಧಿ ಸೇರಿದಂತೆ ಸಮಗ್ರ ಕರ್ನಾಟಕದ ಕಲ್ಯಾಣಕ್ಕೆ ಶ್ರಮಿಸುವುದಾಗಿ ರಾಜ್ಯಪಾಲರ ಮೂಲಕ ಭರವಸೆ…
ಜುಲೈ ತಿಂಗಳು ತಮಿಳುನಾಡಿಗೆ 31 ಟಿಎಂಸಿ ನೀರು ಹರಿಸಬೇಕು
July 3, 2018ನವದೆಹಲಿ: ಸುಪ್ರೀಂ ಕೋರ್ಟ್ ಆದೇಶದಂತೆ ಜುಲೈ ತಿಂಗಳಿನಲ್ಲಿ ತಮಿಳುನಾಡಿಗೆ 31.24 ಟಿಎಂಸಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವ ಹಣಾ ಪ್ರಾಧಿಕಾರ ಸೋಮವಾರ ಕರ್ನಾ ಟಕಕ್ಕೆ ಸೂಚನೆ ನೀಡಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾದ ನಂತರ ಇಂದು ನಡೆದ ಮೊದಲ ಸಭೆಯಲ್ಲಿ ಕಾವೇರಿ ನದಿ ನೀರು ಹಂಚಿಕೆ ಕುರಿತು ಚರ್ಚೆ ನಡೆಸಿ, ಸುಪ್ರೀಂ ಆದೇಶದಂತೆ ಕರ್ನಾಟಕ ಈಗಾಗಲೇ ಜೂನ್ ತಿಂಗಳಿನಲ್ಲಿ ನಿಗದಿಗಿಂತ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸಿದೆ. ಸುಮಾರು 2.5ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಬಿಡಲಾಗಿದೆ….