ಕೊಟ್ಟಿಗೆಗೆ ನುಗ್ಗಿ ಸಾಕುಪ್ರಾಣಿಗಳ ಕೊಂದ ಚಿರತೆ
ಮೈಸೂರು

ಕೊಟ್ಟಿಗೆಗೆ ನುಗ್ಗಿ ಸಾಕುಪ್ರಾಣಿಗಳ ಕೊಂದ ಚಿರತೆ

July 4, 2018

ಮೈಸೂರು:  ಮೈಸೂರು ತಾಲೂಕಿನ ದೊಡ್ಡಕಾನ್ಯ ಗ್ರಾಮ ದಲ್ಲಿ ಚಿರತೆ ಕೊಟ್ಟಿಗೆಗೆ ನುಗ್ಗಿ ಕೋಳಿ, ಕುರಿ ಹಾಗೂ ಮೇಕೆ ಮರಿಯನ್ನು ಕೊಂದಿದೆ.

ಗ್ರಾಮದ ಅನಿತಾ ಅವರಿಗೆ ಸೇರಿದ ಕೊಟ್ಟಿಗೆಗೆ ಸೋಮವಾರ ರಾತ್ರಿ ನುಗ್ಗಿ ರುವ ಚಿರತೆ, ಕೋಳಿ, ಕುರಿ, ಮೇಕೆ ಗಳನ್ನು ಕೊಂದು ಪರಾರಿಯಾಗಿದೆ. ಈ ಹಿಂದೆಯೂ ಗ್ರಾಮಕ್ಕೆ ನುಗ್ಗಿದ್ದ ಚಿರತೆ, ನಾಯಿಯನ್ನು ಕೊಂದಿತ್ತು. ಹೀಗೆ ನಿರಂತರ ಚಿರತೆ ದಾಳಿಯಿಂದ ಆತಂಕಗೊಂಡಿರುವ ಗ್ರಾಮಸ್ಥರು, ಬೋನ್ ಇಟ್ಟು ಚಿರತೆಯನ್ನು ಸೆರೆ ಹಿಡಿಯಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಬೀರಿಹುಂಡಿಯಲ್ಲಿ ಚಿರತೆ: ತಾಲೂಕಿನ ಬೀರಿಹುಂಡಿ ಗ್ರಾಮದಲ್ಲೂ ಚಿರತೆ ಪ್ರತ್ಯಕ್ಷವಾಗಿದ್ದು, ಹಸುವಿನ ಮೇಲೆ ದಾಳಿ ನಡೆಸಿದೆ. ಭಾನುವಾರ ಗ್ರಾಮದ ಹೊರ ಭಾಗದ ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿದ್ದನ್ನು ಕಂಡ ಗ್ರಾಮಸ್ಥರು ಜೋರಾಗಿ ಕೂಗಿ ಕೊಂಡಿದ್ದಾರೆ. ಜನರ ಗದ್ದಲದಿಂದ ಚಿರತೆ, ಹಸುವನ್ನು ಬಿಟ್ಟು ಪರಾರಿ ಯಾಗಿದೆ. ನಂತರ ಸ್ಥಳಕ್ಕಾಗಮಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆ ಪತ್ತೆಗೆ ಶೋಧ ನಡೆಸಿದ್ದಲ್ಲದೆ, ಗ್ರಾಮಸ್ಥರ ಮನವಿ ಮೇರೆಗೆ ಬೋನ್ ಇಟ್ಟಿದ್ದಾರೆ.

Translate »