ನೀರು ಬಿಡದ ಗ್ರಾಪಂ: ಕಲುಷಿತ ನೀರಲ್ಲಿ ಕೈ ತೊಳೆದ ಶಾಲಾ ಮಕ್ಕಳು!
ಚಾಮರಾಜನಗರ

ನೀರು ಬಿಡದ ಗ್ರಾಪಂ: ಕಲುಷಿತ ನೀರಲ್ಲಿ ಕೈ ತೊಳೆದ ಶಾಲಾ ಮಕ್ಕಳು!

July 4, 2018

ಕೊಳ್ಳೇಗಾಲ:  ಮಹದೇಶ್ವಬೆಟ್ಟ ಗ್ರಾಪಂ ಹಾಗೂ ಸಂಬಂಧ ಪಟ್ಟ ವಾಟರ್ ಮೆನ್ ವಿವಾದದಿಂದಾಗಿ ಸರ್ಕಾರಿ ಶಾಲೆಯೊಂದಕ್ಕೆ ನೀರು ಪೂರೈಕೆ ಯಾಗದೆ ಕಲುಷಿತ ನೀರಿನಲ್ಲೇ ವಿದ್ಯಾರ್ಥಿ ಗಳು ಕೈತೊಳೆಯುವಂತಾಗಿದೆ.

ಬಿಸಿಯೂಟ ಸೇವಿಸಿದ ಮಕ್ಕಳು ನೀರು ಪೂರೈಕೆಯಾಗದ ಕಾರಣ ಶಾಲೆಯ ಸಮೀಪದಲ್ಲೇ ಇರುವ ಹಳ್ಳದಲ್ಲಿ ನಿಂತ ಕಲುಷಿತ ನೀರಲ್ಲೇ ಕೈ ತೊಳೆಯುವಂತಾಗಿದ್ದು, ಬಳಿಕ ಅದೇ ನೀರಿನಲ್ಲಿ ತಟ್ಟೆಯನ್ನು ಸಹ ತೊಳೆದ ಘಟನೆ ಮಂಗಳವಾರ ಹನೂರು ಶೈಕ್ಷಣಿಕ ವಲಯದ ಕೊಂಬಡಿಕ್ಕಿ ಸರ್ಕಾರಿ ಶಾಲೆ ಯಿಂದ ವರದಿಯಾಗಿದೆ.

ಕಲುಷಿತ ನೀರಲ್ಲಿ ಕೈತೊಳೆಯುತ್ತಿದ್ದ ಮಕ್ಕ ಳನ್ನು ನಾಗರಿಕರು ಪ್ರಶ್ನಿಸಿದರೇ, ನೀರಿಲ್ಲ ಹಾಗಾಗಿ ಇಲ್ಲಿ ಕೈ ತೊಳೆಯುತ್ತಿದ್ದೇವೆ ಎನ್ನು ತ್ತಾರೆ. ಆದರೆ ಮುಖ್ಯ ಶಿಕ್ಷಕರು ಮಾತ್ರ ನಾವು ಮಕ್ಕಳು ಹೊರಬಂದದ್ದು ತಿಳಿಯ ಲಿಲ್ಲ. ಅವರು ದಿಢೀರ್ ಎಂದು ಹೊರ ಬಂದು ಕೈ ತೊಳೆದಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಶಾಲೆಯಲ್ಲಿ ಸಮರ್ಪಕ ರೀತಿ ನೀರಿ ದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳ ಬೇಕು. ಇಲ್ಲವೇ ಬೇರೆ ಕಡೆಯಿಂದ ಬಿಸಿ ಯೂಟ ಸಿಬ್ಬಂದಿಯಿಂದ ನೀರು ತರಿಸಿ ಕೊಂಡು ಊಟದ ವೇಳೆ ಪೂರೈಸಬೇಕಿತ್ತು. ಈ ವೇಳೆ ನಿರ್ಲಕ್ಷ್ಯ ಪ್ರದರ್ಶಿಸಿದ್ದೇ ಶಾಲಾ ಮಕ್ಕಳು ನಿಂತ ಕಲುಷಿತ ನೀರಲ್ಲೇ ಕೈತೊಳೆಯುವಂತಾಗಿದೆ ಎಂದು ನಾಗರಿ ಕರು ದೂರುತ್ತಿದ್ದಾರೆ. ಸಮರ್ಪಕ ರೀತಿ ನೀರು ಸಂಗ್ರಹಿಸಿಕೊಂಡು ಅಡುಗೆ ಸಿಬ್ಬಂದಿ ಊಟ ಪೂರೈಸದಿರುವುದೇ ಇದಕ್ಕೆ ಕಾರಣ ಎಂತಲೂ ಹೇಳಲಾಗುತ್ತಿದೆ. ಈ ಸಂಬಂಧ ಮುಖ್ಯ ಶಿಕ್ಷಕರು ಮಾತ್ರ ನೀರು ಬಿಡದ ಹಿನ್ನೆಲೆ ಈ ಘಟನೆ ಜರುಗಿದೆ. ನೀರು ಗಂಟಿ ನಾನು ಇನ್ನು ನೀರು ಬಿಡಲ್ಲ. ಬೇಕಿ ದ್ದರೆ ಪಂಚಾಯ್ತಿ ಅಧಿಕಾರಿಗಳನ್ನು ಕೇಳಿಕೊಳ್ಳಿ ಎಂದು ಹೇಳಿ ತೆರಳಿದರು. ಬೀಗ ಕೊಡಿ ಎಂದರು ನೀಡಲಿಲ್ಲ ಎಂದೂ ಅಲವತ್ತುಕೊಂಡಿದ್ದಾರೆ.

ಒಟ್ಟಿನಲ್ಲಿ ಮಹದೇಶ್ವರ ಬೆಟ್ಟ ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಾಟರ್ ಮೆನ್ ಗಳ ತಿಕ್ಕಾಟದಿಂದಾಗಿ ಶಾಲೆಯಲ್ಲಿ ನೀರಿನ ಕೊರತೆ ಎದು ರಾಗಿದೆ. ಈ ಘಟನೆ ಕುರಿತು ಮಹದೇಶ್ವರ ಬೆಟ್ಟ ಗ್ರಾಪಂ ಕಾರ್ಯದರ್ಶಿ ‘ಮೈಸೂರು ಮಿತ್ರ’ನೊಂದಿಗೆ ಪ್ರತಿಕ್ರಿಯಿಸಿ ಕೊಂಬ ಡಿಕ್ಕಿಯಲ್ಲಿ ತಾತ್ಕಾಲಿಕವಾಗಿ ನೀರು ಗಂಟಿ ಯಾಗಿದ್ದ ಗಣೇಶ್ ಎಂಬಾತನನ್ನು ಈಗಾಗಲೇ ಕೆಲಸದಿಂದ ತೆಗೆದು ಹಾಕಲಾಗಿದೆ. ಶಾಲೆಗೆ ಭೇಟಿ ನೀಡಿ, ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ವಹಿಸ ಲಾಗುವುದು ಎಂದಿದ್ದಾರೆ.

Translate »