ವಿದ್ಯಾರ್ಥಿಯಿಂದಲೇ ಕಾನೂನಿನ ಅರಿವು ಅಗತ್ಯ
ಚಾಮರಾಜನಗರ

ವಿದ್ಯಾರ್ಥಿಯಿಂದಲೇ ಕಾನೂನಿನ ಅರಿವು ಅಗತ್ಯ

July 4, 2018

ಚಾಮರಾಜನಗರ: ವಿದ್ಯಾರ್ಥಿ ದೆಸೆಯಿಂದಲೇ ಕಾನೂನಿನ ಅರಿವು ಅಗತ್ಯ ವಾಗಿದ್ದು, ಇದರಿಂದ ಸಮಾಜದಲ್ಲಿ ಉತ್ತಮ ಜೀವನ ನಡೆಸಬಹುದು ಎಂದು ಚಾಮ ರಾಜನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ ತಿಳಿಸಿದರು.

ತಾಲೂಕಿನ ಅಮಚವಾಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಫಾಟಿಸಿ ಅವರು ಮಾತನಾಡುತ್ತಿದ್ದರು. ಸಂವಿಧಾನದಲ್ಲಿ ತಿಳಿಸಿರುವಂತೆ ಸಮಾಜ ದಲ್ಲಿರುವ ಪ್ರತಿಯೆÁಬ್ಬರು ಕಾನೂನಿ ನಡಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಮೂಲಭೂತ ಹಕ್ಕುಗಳನ್ನು ಅರಿತಿರುವ ನಾಗರಿಕರು ಸೇರಿದಂತೆ ಎಲ್ಲರು ಮೂಲಭೂತ ಕರ್ತವ್ಯಗಳನ್ನು ಕೂಡ ಪಾಲಿಸ ಬೇಕು. ಆಗ ಮಾತ್ರ ಸಂವಿಧಾನಕ್ಕೆ ಗೌರವ ಸಲ್ಲುತ್ತದೆ. ಹಾಗೆಯೇ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿ ಸಬೇಕು ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮ ತ್ತೂರು ಇಂದುಶೇಖರ್ ಮಾತನಾಡಿ, ದೇಶ ದಲ್ಲಿ ಹಲವು ಕಾನೂನುಗಳನ್ನು ಜಾರಿ ಗೊಳಿಸಿದ್ದು, ಪ್ರತಿನಿತ್ಯದ ಸುಗಮ ಜೀವ ನಕ್ಕೆ ಅಗತ್ಯವಾದ ಕಾನೂನುಗಳನ್ನು ಅರಿ ತರೆ ಸಮಾಜದಲ್ಲಿ ಉತ್ತಮ ಬದುಕು ನಡೆಸ ಬಹುದು. ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಮಯ ಪ್ರಙ್ಞ, ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್ ಮಾತನಾಡಿ, ಹಿಂದುಳಿದ ಪ್ರದೇಶಗಳಲ್ಲಿ ಬಾಲ್ಯ ವಿವಾಹ ಹೆಚ್ಚಾಗಿ ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಮತ್ತು ಹೆಣ್ಣಿಗೆ 18, ಗಂಡಿಗೆ 21 ವರ್ಷ ಮೀರದೆ ವಿವಾಹ ಮಾಡಿದರೆ ಅಂತಹವರಿಗೆ ಕಾನೂನಿನಡಿ ಶಿಕ್ಷೆಗೆ ಗುರಿಪಡಿಸಬಹುದು. ಬಾಲ್ಯ ವಿವಾಹ ದಂತಹ ಅನಿಷ್ಟ ಪದ್ಧತಿಗೆ ಯಾರು ಮುಂದಾಗ ಬಾರದು ಎಂದು ಸಲಹೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ನಾಗಮಲ್ಲಪ್ಪ ಅವರು ವಿದ್ಯಾರ್ಥಿಗಳು ಕಾನೂನು ಅರಿವು ನೆರವು ಕಾರ್ಯಕ್ರಮದ ಸದುಪಯೋಗ ಪಡೆಯ ಬೇಕು. ಕಾನೂನಿನ ವಿಚಾರಗಳನ್ನು ಅರಿತು ಸತ್ಪ್ರಜೆಗಳಾಗಿ ಮಾದರಿ ಸಮಾಜದ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.

ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ, ಶ್ರೀಕಂಠ ನಾಯಕ್, ಪ್ರಭು ಸ್ವಾಮಿ , ಮೂರ್ತಿ, ಸಾದsನ ಸಂಸ್ಥೆಯ ಟಿ.ಜೆ. ಸುರೇಶ್, ಓಡಿಪಿ ಸಂಸ್ಥೆಯ ಸಂಗೀತ ಹಾಗೂ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Translate »