ಗುಂಡ್ಲುಪೇಟೆ ಸಾರಿಗೆ ಬಸ್ ನಿಲ್ದಾಣದಲ್ಲಿ ಕೊಳಚೆ ನೀರಿನ ಕಿರಿಕಿರಿ
ಚಾಮರಾಜನಗರ

ಗುಂಡ್ಲುಪೇಟೆ ಸಾರಿಗೆ ಬಸ್ ನಿಲ್ದಾಣದಲ್ಲಿ ಕೊಳಚೆ ನೀರಿನ ಕಿರಿಕಿರಿ

July 4, 2018

ಗುಂಡ್ಲುಪೇಟೆ: ಪಟ್ಟಣದ ವಿವಿಧ ಬಡಾವಣೆಗಳ ಒಳ ಚರಂಡಿಯ ಕೊಳಚೆ ನೀರು ಸಾರಿಗೆ ಬಸ್ ನಿಲ್ದಾಣ ದೊಳಗೆ ಹರಿದು ಬಂದು ಪ್ರಯಾಣಿಕರು ಕಿರಿಕಿರಿಯನ್ನು ಅನುಭವಿಸುವಂತಾಗಿದೆ.

ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಸುವಾಗ ಚರಂಡಿ ಗಳನ್ನು ನಿರ್ಮಿಸದ ಪರಿಣಾಮ ಸ್ವಲ್ಪ ಮಳೆ ಬಿದ್ದರೂ ಒಳಚರಂಡಿಯ ನೀರೆಲ್ಲಾ ತಗ್ಗು ಪ್ರದೇಶದಲ್ಲಿರುವ ಸಾರಿಗೆ ಬಸ್ ನಿಲ್ದಾಣದೊಳಗೆ ಹರಿದುಬರುತ್ತಿದೆ. ಆದರೂ ಸಹ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಶ್ವೇತಾದ್ರಿಗಿರಿ ಬಡಾವಣೆಯ ಚರಂಡಿ ನೀರು ಹೆದ್ದಾರಿ ಬದಿಗಳಲ್ಲಿ ಅಳ ವಡಿಸಿರುವ ಪೈಪ್ ಲೈನಿಗೆ ಹರಿದು ಬರುತ್ತಿದ್ದು, ಮೋರಿಗೆ ಸೇರಲು ಸಾಧ್ಯವಾಗದೆ ಬಸ್ ನಿಲ್ದಾಣದ ಒಳಗೆ ಪ್ರವೇಶಿಸುತ್ತಿದೆ. ಅಲ್ಲದೆ ಸಮೀಪದ ಮಡಹಳ್ಳಿ ರಸ್ತೆಯಲ್ಲಿ ಹಿಂದೆ ಇದ್ದ ಸಣ್ಣ ಸೇತುವೆಯನ್ನು ತೆರವುಗೊಳಿಸಿದ್ದರಿಂದ ಕ್ರೀಡಾಂಗಣ ಹಾಗೂ ಮಡಹಳ್ಳಿ ರಸ್ತೆಯಿಂದಲೂ ಹರಿದು ಬರುವ ನೀರು ನಿಲ್ದಾಣದೊಳಗೆ ನುಗ್ಗುತ್ತಿದೆ. ಈ ಸಂದರ್ಭದಲ್ಲಿ ನಿಲ್ದಾಣವು ಕೆರೆಯಂತಾಗಿ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ.

ಕಳೆದ ತಿಂಗಳು ನೂತನ ಶಾಸಕ ಸಿ.ಎಸ್. ನಿರಂಜನಕುಮಾರ್ ಹೆದ್ದಾರಿ, ಸಾರಿಗೆ, ಲೋಕೋಪಯೋಗಿ ಹಾಗೂ ಪುರಸಭೆ ಅಧಿಕಾರಿಗಳ ಸಭೆ ನಡೆಸಿ ಮಳೆನೀರು ನಿಲ್ದಾಣದೊಳಗೆ ಪ್ರವೇಶಿಸ ದಂತೆ ಹೊಸದಾಗಿ ಪೈಪ್‍ಲೈನ್ ಅಳವಡಿ ಸುವಂತೆ ಸೂಚನೆ ನೀಡಿದ್ದರೂ ಸಹ ಇನ್ನೂ ಸಾಧ್ಯವಾಗಿಲ್ಲ. ಇದರಿಂದ ನಿಲ್ದಾಣದೊಳಗೆ ಪ್ರವೇಶಿಸುವ ಪ್ರಯಾಣಿಕರು, ಸಾರ್ವಜನಿಕರು ಕೊಳಚೆಯ ನೀರನ್ನು ಹಾದುಕೊಂಡೇ ನಿಲ್ದಾಣ ಒಳಗೆ ಹೋಗ ಬೇಕಾಗಿದೆ. ಇನ್ನಾದರೂ ಸಂಬಂಧಪಟ್ಟ ವರು ಈ ಸಮಸ್ಯೆಗೆ ಪರಿಹಾರ ನೀಡ ಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Translate »