ಮೈಸೂರು

ಹಜ್ ಭವನಕ್ಕೆ ಡಾ. ಕಲಾಂ ಹೆಸರಿಡಲು ಮನವಿ
ಮೈಸೂರು

ಹಜ್ ಭವನಕ್ಕೆ ಡಾ. ಕಲಾಂ ಹೆಸರಿಡಲು ಮನವಿ

June 28, 2018

ಮೈಸೂರು: ಹಜ್ ಭವನಕ್ಕೆ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿಡಬೇಕೆಂದು ಡಾ. ಕಲಾಂ ಅಭಿಮಾನಿ ಬಳಗದ ಜಯಪ್ರಕಾಶ್ ರಾವ್ ಮನವಿ ಮಾಡಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಲಾಂ ಅವರ ಪ್ರೀತಿಯ ಡಿಆರ್‍ಡಿಓ ಸಂಸ್ಥೆಯು ರಾಮೇಶ್ವರಂನಲ್ಲಿ ಕಲಾಂ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಿರುವುದನ್ನು ಬಿಟ್ಟರೆ ದೇಶದ ಎಲ್ಲಿಯೂ ಅವರ ಸ್ಮಾರಕಗಳು ನಿರ್ಮಾಣವಾಗಿಲ್ಲ. ಆದ್ದರಿಂದ ಹಜ್ ಭವನಕ್ಕೆ ಕಲಾಂ ಅವರ ಹೆಸರಿಡಲು ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಮನವಿ…

ಬಿ.ಎಂ.ರಾಮಚಂದ್ರ, ಹೆಚ್.ಬಿ.ಯಶೋಧಗೆ ಸಿಜಿಕೆ ರಂಗ ಪುರಸ್ಕಾರ
ಮೈಸೂರು

ಬಿ.ಎಂ.ರಾಮಚಂದ್ರ, ಹೆಚ್.ಬಿ.ಯಶೋಧಗೆ ಸಿಜಿಕೆ ರಂಗ ಪುರಸ್ಕಾರ

June 28, 2018

ಮೈಸೂರು: ಹಿರಿಯ ರಂಗಕರ್ಮಿಗಳಾದ ಬಿ.ಎಂ.ರಾಮಚಂದ್ರ ಹಾಗೂ ಹೆಚ್.ಬಿ.ಯಶೋಧ ಅವರಿಗೆ ರಂಗಾಯಣ ಮಾಜಿ ನಿರ್ದೇಶಕ ಹೆಚ್.ಜನಾರ್ಧನ್ ಹಾಗೂ ಚಿಂತಕ ಪ್ರೊ.ನಟರಾಜ್ ಹುಳಿಯಾರ್ ‘ಸಿಜಿಕೆ ರಂಗ ಪುರಸ್ಕಾರ’ ನೀಡಿ ಗೌರವಿಸಿದರು. ಮೈಸೂರಿನ ಕಲಾಮಂದಿರ ಆವರಣದಲ್ಲಿ ನೆಲೆ ಹಿನ್ನೆಲೆ ವತಿಯಿಂದ ಆಯೋಜಿಸಿದ್ದ ಸಿಜಿಕೆ (ಸಿ.ಜಿ.ಕೃಷ್ಣಸ್ವಾಮಿ) ರಂಗ ಪುರಸ್ಕಾರ ಪ್ರಶಸ್ತಿಯನ್ನು ಬುಧವಾರ ನೀಡಿ ಗೌರವಿಸಿದರು. ನಂತರ ರಂಗಾಯಣ ಮಾಜಿ ನಿರ್ದೇಶಕ ಹೆಚ್.ಜನಾರ್ಧನ್(ಜನ್ನಿ) ಮಾತನಾಡಿ, ಕಲೆ ಎಂಬುದು ವಾಸ್ತವ. ರಂಗಭೂಮಿಯನ್ನು ಯಾರೂ ದುರುಪಯೋಗ ಪಡಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ಕೆಲಸಕ್ಕೆ ಮುಂದಾದರೆ, ಅದಕ್ಕಿಂತ ದೊಡ್ಡ ದುರಂತ…

ನೀರು ಸರಬರಾಜಿನಲ್ಲಿ ವ್ಯತ್ಯಯ
ಮೈಸೂರು

ನೀರು ಸರಬರಾಜಿನಲ್ಲಿ ವ್ಯತ್ಯಯ

June 28, 2018

ಮೈಸೂರು: ನಂಜನಗೂಡು ನಗರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ದೇಬೂರಿನಲ್ಲಿರುವ ಜಾಕ್‍ವೆಲ್ಲಿನಿಂದ ಕಬಿನಿ ನದಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಕಳೆದ ಒಂದು ವಾರದಿಂದ ಅತಿ ಹೆಚ್ಚು ಮಳೆ ಬಂದ ಕಾರಣ ಹಾಗೂ ಕಬಿನಿ ಜಲಾಶಯದಿಂದ ನೀರನ್ನು ಹೊರಬಿಟ್ಟಿದ್ದರಿಂದ ನದಿಯಲ್ಲಿ ನೀರಿನ ಹೊರ ಹರಿವು ಹೆಚ್ಚಾಗಿದ್ದು, ಕಸ ಕಡ್ಡಿಗಳು ಹಾಗೂ ಇನ್ನಿತರೆ ನೀರಿನ ತ್ಯಾಜ್ಯಗಳು ಜಾಕ್‍ವೆಲ್ಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದು, ಮೋಟಾರುಗಳಿಂದ ಅಗತ್ಯ ನಿಗದಿತ ಪ್ರಮಾಣದ ನೀರು ಪಂಪ್ ಆಗುತ್ತಿಲ್ಲ. ನಂಜನಗೂಡು ನಗರದ ಸಾರ್ವಜನಿಕರಿಗೆ ನಿಗದಿತ ಪ್ರಮಾಣದ ನೀರನ್ನು ನಿಯಮಿತವಾಗಿ ಪೂರೈಸಲು ಆಗುತ್ತಿರುವುದಿಲ್ಲ. ಹಾಗೂ…

ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ನಾಯಕರ ಹಿತರಕ್ಷಣಾ ವೇದಿಕೆ ಆಗ್ರಹ
ಮೈಸೂರು

ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ನಾಯಕರ ಹಿತರಕ್ಷಣಾ ವೇದಿಕೆ ಆಗ್ರಹ

June 28, 2018

ಮೈಸೂರು: ಪರಿಶಿಷ್ಟ ಪಂಗಡಕ್ಕೆ ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ದೊರಕಿಸಿಕೊಡುವ ನಿಟ್ಟಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಬೇಕೆಂದು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ, ರಾಜ್ಯದಲ್ಲಿ ಸುಮಾರು 52 ಜಾತಿಗಳು ಪರಿಶಿಷ್ಟ ಪಂಗಡ ವ್ಯಾಪ್ತಿಗೆ ಬರಲಿದ್ದು, 60ರಿಂದ 65 ಲಕ್ಷ ಜನಸಂಖ್ಯೆ ಹೊಂದಿದೆ. ಇದರಲ್ಲಿ ಶೇ.90ರಷ್ಟು ಜನಸಂಖ್ಯೆ ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿದೆ. ಈ ವರ್ಗಕ್ಕೆ ಮೂಲಸೌಲಭ್ಯ ಹಾಗೂ…

ಶಾಲಾ ಮಕ್ಕಳಲ್ಲಿ ಸಮನ್ವಯತೆ ತರಲು ‘ಹಾರ್ಮೊನಿ ಕ್ವಿಜ್’ ವಿಶೇಷ ಕಾರ್ಯಕ್ರಮ
ಮೈಸೂರು

ಶಾಲಾ ಮಕ್ಕಳಲ್ಲಿ ಸಮನ್ವಯತೆ ತರಲು ‘ಹಾರ್ಮೊನಿ ಕ್ವಿಜ್’ ವಿಶೇಷ ಕಾರ್ಯಕ್ರಮ

June 28, 2018

ಮೈಸೂರು: ಸರ್ಕಾರಿ, ಖಾಸಗಿ ಹಾಗೂ ವಿಶೇಷ ಶಾಲೆಗಳ ಮಕ್ಕಳ ನಡುವೆ ಸಾಮರಸ್ಯ ಮೂಡಿಸಲು ಮೈಸೂರು ಅಮಿಟಿ ರೌಂಡ್ ಟೇಬಲ್ (ಮಾರ್ಟ್-156) ವತಿಯಿಂದ `ಹಾರ್ಮೊನಿ ಕ್ವಿಜ್ (ಸಾಮರಸ್ಯ ರಸಪ್ರಶ್ನೆ)’ ವಿಶೇಷ ಕಾರ್ಯಕ್ರಮ ರೂಪಿಸಲಾಗಿದ್ದು, ಜೂ.30ರಂದು ಈ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ ಎಂದು ಮಾರ್ಟ್-156ರ ನಿಕಟಪೂರ್ವ ಅಧ್ಯಕ್ಷ ಕಿರಣ್ ರಂಗ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಎಕ್ಸೆಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸ್ಪರ್ಧೆ ನಡೆಯಲಿದೆ. ಒಂದು ತಂಡದಲ್ಲಿ ಸಿಬಿಎಸ್‍ಸಿ ಪಠ್ಯಕ್ರಮದ ಖಾಸಗಿ…

ಪ್ರಾಂಶುಪಾಲರ ಅವ್ಯವಹಾರಕ್ಕೂ  ನಮಗೂ ಸಂಬಂಧವಿಲ್ಲ: ಶ್ರೀಕಾಂತ ವಿದ್ಯಾ ಸಂಸ್ಥೆ ಸ್ಪಷ್ಟನೆ
ಮೈಸೂರು

ಪ್ರಾಂಶುಪಾಲರ ಅವ್ಯವಹಾರಕ್ಕೂ  ನಮಗೂ ಸಂಬಂಧವಿಲ್ಲ: ಶ್ರೀಕಾಂತ ವಿದ್ಯಾ ಸಂಸ್ಥೆ ಸ್ಪಷ್ಟನೆ

June 28, 2018

ಮೈಸೂರು: ವಿದೇಶಿ ವಿದ್ಯಾರ್ಥಿಗಳಿಗೆ ವೀಸಾ ವಿಸ್ತರಣೆಗಾಗಿ ನಕಲಿ ಡಿಪ್ಲೋಮಾ ಪ್ರಮಾಣ ಪತ್ರ ನೀಡಿದ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಶ್ರೀಕಾಂತ ವಿದ್ಯಾ ಸಂಸ್ಥೆಗಳ ಆಡಳಿತ ವರ್ಗ ಸ್ಪಷ್ಟಪಡಿಸಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಸಂಸ್ಥೆಯ ಅಧ್ಯಕ್ಷರು, ಶ್ರಿಕಾಂತ ಪ್ರಥಮ ದರ್ಜೆ ಕಾಲೇಜನ್ನು 2010ರಿಂದಲೂ ವೇದ ಚಾರಿಟಬಲ್ ಅಂಡ್ ವೆಲ್‍ಫೇರ್ ಟ್ರಸ್ಟ್‍ನವರೇ ಶ್ರೀಕಾಂತ ವಿದ್ಯಾ ಸಂಸ್ಥೆಗಳ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದ್ದು, ಪ್ರಕರಣದಲ್ಲಿ ಪೊಲೀಸರು ಪ್ರಾಂಶುಪಾಲರ ವಿರುದ್ಧ ಎಫ್‍ಐಆರ್ ದಾಖಲಿಸಿರುವ ಆಧಾರದ ಮೇರೆಗೆ ಶ್ರೀಕಾಂತ…

ವಿದ್ಯಾರ್ಥಿನಿಲಯಕ್ಕೆ ಅರ್ಜಿ ಆಹ್ವಾನ
ಮೈಸೂರು

ವಿದ್ಯಾರ್ಥಿನಿಲಯಕ್ಕೆ ಅರ್ಜಿ ಆಹ್ವಾನ

June 28, 2018

ಮೈಸೂರು:  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ರುವ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ಸಾಮಾನ್ಯ ಹಾಗೂ ಮಾದರಿ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ 2018-19 ನೇ ಸಾಲಿಗೆ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3 ಬಿ, ಪ.ಜಾ/ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಪ್ರವರ್ಗ-1 ಪ.ಜಾ/ಪ.ವರ್ಗ ಅಭ್ಯರ್ಥಿಗಳ ವಾರ್ಷಿಕ ಆದಾಯ ಮಿತಿ 2.50 ಲಕ್ಷದೊಳಗಿರಬೇಕು, ಪ್ರವರ್ಗ2ಎ, 2ಬಿ, 3ಎ, 3 ಬಿ, ಇತರೆ…

ವ್ಯಕ್ತಿ ನಾಪತ್ತೆ
ಮೈಸೂರು

ವ್ಯಕ್ತಿ ನಾಪತ್ತೆ

June 28, 2018

ಮೈಸೂರು: ಮೈಸೂರಿನ ಸುಭಾಷ್ ನಗರದಲ್ಲಿ ವ್ಯಕ್ತಿಯೋರ್ವ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಅಲ್ಲಿನ ಚಿಕ್ಕಲಿಂಗಯ್ಯ ಎಂಬುವವರ ಪುತ್ರ ಸೋಮಶೇಖರ್ (32) ಜೂ.21ರಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಮನೆಯಿಂದ ಹೊರ ಹೋದವರು ಈವರೆಗೆ ವಾಪಸ್ಸಾಗಲಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎನ್.ಆರ್.ಪೊಲೀಸರು ಈತನ ಬಗ್ಗೆ ಮಾಹಿತಿ ಇರುವವರು ನಗರ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 0821-2418339 ಅನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

ನಾಳೆ ಸೀಳು ತುಟಿ ಮಕ್ಕಳಿಗೆ ಉಚಿತ ಚಿಕಿತ್ಸಾ ಶಿಬಿರ
ಮೈಸೂರು

ನಾಳೆ ಸೀಳು ತುಟಿ ಮಕ್ಕಳಿಗೆ ಉಚಿತ ಚಿಕಿತ್ಸಾ ಶಿಬಿರ

June 28, 2018

ಮೈಸೂರು:  ಲವ್ ವಿತೌಟ್ ರೀಸನ್ ಫೌಂಡೇಶನ್ ವತಿಯಿಂದ ಜೂ.29ರಂದು ನಾಚನಹಳ್ಳಿಪಾಳ್ಯದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೀಳುತುಟಿ ಸಮಸ್ಯೆಯ ಮಕ್ಕಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ ಎಂದು ಶಿಬಿರದ ಸಂಚಾಲಕ ಯು.ಧನಂಜಯ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಈ ಶಿಬಿರ ಹಮ್ಮಿಕೊಂಡಿದ್ದು, ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಯಲಿದೆ ಎಂದು…

ಮೈಸೂರಲ್ಲಿ ಬೀದಿ ನಾಟಕ ತಂಡಗಳ ಒಕ್ಕೂಟದಿಂದ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ಬೀದಿ ನಾಟಕ ತಂಡಗಳ ಒಕ್ಕೂಟದಿಂದ ಪ್ರತಿಭಟನೆ

June 28, 2018

ಜಾರ್ಖಂಡ್‍ನಲ್ಲಿ ಬೀದಿ ನಾಟಕ ಕಲಾವಿದರ ಮೇಲಿನ ಅತ್ಯಾಚಾರಕ್ಕೆ ಖಂಡನೆ ಮೈಸೂರು: ಜಾರ್ಖಂಡ್‍ನಲ್ಲಿ ಬೀದಿ ನಾಟಕ ಕಲಾವಿದೆಯರ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಮೈಸೂರಿನ ಗಾಂಧಿ ವೃತ್ತದ ಗಾಂಧಿ ಪ್ರತಿಮೆ ಬಳಿ ರಾಜ್ಯ ಬೀದಿ ನಾಟಕ ತಂಡಗಳ ಒಕ್ಕೂಟದ ಕಲಾವಿದರು ಪ್ರತಿಭಟನೆ ನಡೆಸಿದರು. ಮಾನವ ಕಳ್ಳಸಾಗಾಣೆ ಕುರಿತಂತೆ ಜನಜಾಗೃತಿ ಮೂಡಿಸಲು ಎನ್‍ಜಿಓ ಸಂಘಟನೆಯೊಂದು ಜಾರ್ಖಂಡ್ ಜಿಲ್ಲೆಯ ಗ್ರಾಮವೊಂದರಲ್ಲಿ ಇತ್ತೀಚೆಗೆ ಬೀದಿ ನಾಟಕ ನಡೆಸುತ್ತಿದ್ದ ವೇಳೆ ಪಾತಾಳ ಗರಡಿ ಎಂಬ ಸಂಘಟನೆಯ ಕೆಲವರು ಬೀದಿ ನಾಟಕ ಪ್ರದರ್ಶಿಸುತ್ತಿದ್ದ ಐವರು ಮಹಿಳಾ…

1 1,521 1,522 1,523 1,524 1,525 1,611
Translate »