ಹಜ್ ಭವನಕ್ಕೆ ಡಾ. ಕಲಾಂ ಹೆಸರಿಡಲು ಮನವಿ
ಮೈಸೂರು

ಹಜ್ ಭವನಕ್ಕೆ ಡಾ. ಕಲಾಂ ಹೆಸರಿಡಲು ಮನವಿ

June 28, 2018

ಮೈಸೂರು: ಹಜ್ ಭವನಕ್ಕೆ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿಡಬೇಕೆಂದು ಡಾ. ಕಲಾಂ ಅಭಿಮಾನಿ ಬಳಗದ ಜಯಪ್ರಕಾಶ್ ರಾವ್ ಮನವಿ ಮಾಡಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಲಾಂ ಅವರ ಪ್ರೀತಿಯ ಡಿಆರ್‍ಡಿಓ ಸಂಸ್ಥೆಯು ರಾಮೇಶ್ವರಂನಲ್ಲಿ ಕಲಾಂ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಿರುವುದನ್ನು ಬಿಟ್ಟರೆ ದೇಶದ ಎಲ್ಲಿಯೂ ಅವರ ಸ್ಮಾರಕಗಳು ನಿರ್ಮಾಣವಾಗಿಲ್ಲ. ಆದ್ದರಿಂದ ಹಜ್ ಭವನಕ್ಕೆ ಕಲಾಂ ಅವರ ಹೆಸರಿಡಲು ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Translate »