ನಾಳೆ ಬೆಟ್ಟದಪುರದ ಸ್ವತಂತ್ರ ಸಲೀಲಾಖ್ಯ ವಿರಕ್ತ ಮಠದಲ್ಲಿ ಗಣಾರಾಧನ ಮಹೋತ್ಸವ
ಮೈಸೂರು

ನಾಳೆ ಬೆಟ್ಟದಪುರದ ಸ್ವತಂತ್ರ ಸಲೀಲಾಖ್ಯ ವಿರಕ್ತ ಮಠದಲ್ಲಿ ಗಣಾರಾಧನ ಮಹೋತ್ಸವ

June 28, 2018

ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸ್ವತಂತ್ರ ಸಲೀಲಾಖ್ಯ ವಿರಕ್ತಮಠದಲ್ಲಿ ಜೂ.29ರಂದು ಗಣಾರಾಧನಾ ಮಹೋತ್ಸವ ಹಾಗೂ ಶಾಖಾ ಮಠವಾದ ಕನ್ನಡ ಮಠದ 209ನೇ ವರ್ಷಾಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಶ್ರೀಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಠದ ಶ್ರೀ ಚಿಕ್ಕವೀರದೇಶಿಕೇಂದ್ರ ಸ್ವಾಮೀಜಿ ಅವರ 90ನೇ ಹಾಗೂ ಶ್ರೀ ಚೆನ್ನವೀರದೇಶಿಕೇಂದ್ರ ಸ್ವಾಮೀಜಿ ಅವರ 37ನೇ ವರ್ಷದ ಗಣಾರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಜೊತೆಗೆ ಕೊಡಗು ಜಿಲ್ಲೆಯ ವೀರಾಜಪೇಟೆಯಲ್ಲಿರುವ ಕನ್ನಡ ಮಠದ (ಶಾಖಾ ಮಠ) 209ನೇ ವರ್ಷಾಚರಣೆ ಹಾಗೂ ಕನ್ನಡ ಮಠದಲ್ಲಿ ಪ್ರತಿ ತಿಂಗಳ ಬೆಳಕು ಕಾರ್ಯಕ್ರಮದ ಪ್ರಾರಂಭೋತ್ಸವದ ಉದ್ಘಾಟನೆ, ಹಿರಿಯ ಹಾಗೂ ಕಿರಿಯ ಸಾಧಕರಿಗೆ ಸನ್ಮಾನ, ಎಸ್‍ಸಿವಿಡಿಎಸ್ ವಿದ್ಯಾಸಂಸ್ಥೆಗಳ 27ನೇ ವರ್ಷಾಚರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

ಅಂದು ಬೆಳಿಗ್ಗೆ 10.30ಕ್ಕೆ ನಡೆಯುವ ಸಮಾರಂಭದ ಸಾನಿಧ್ಯವನ್ನು ಶಿರಹಟ್ಟಿಯ ಶ್ರೀ ಪಕೀರಸಿದ್ದರಾಮ ಸ್ವಾಮೀಜಿ ಅವರು ವಹಿಸಲಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಅರಮೇರಿ ಶ್ರೀಮಠದ ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ, ಮನಕವಾಡದ ದೇವ ಮಂದಿರ ಮಠದ ಶ್ರೀಸಿದ್ಧರಾಮ ದೇವರು ಸ್ವಾಮೀಜಿ, ಪ್ರಾವಸೋದ್ಯಮ ಸಚಿವ ಸಾ.ರಾ.ಮಹೇಶ್, ಶಾಸಕರಾದ ಕೆ.ಮಹ ದೇವು, ಎ.ಟಿ.ರಾಮಸ್ವಾಮಿ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. ಮಠದ ಶ್ರೀ ವಾಗೀಶ್ ದೇವರು ಚಂದ್ರು ಹೊಸಮಠ ಸುದ್ದಿಗೋಷ್ಠಿಯಲ್ಲಿದ್ದರು.

ONE COMMENT ON THIS POST To “ನಾಳೆ ಬೆಟ್ಟದಪುರದ ಸ್ವತಂತ್ರ ಸಲೀಲಾಖ್ಯ ವಿರಕ್ತ ಮಠದಲ್ಲಿ ಗಣಾರಾಧನ ಮಹೋತ್ಸವ”

  1. R.P.Mahesh says:

    Super NeWS

Translate »