ರಂಗಪ್ಪನ ಸನ್ನಿಧಿಯಲ್ಲಿ ಜೂಜಾಟ
ಚಾಮರಾಜನಗರ

ರಂಗಪ್ಪನ ಸನ್ನಿಧಿಯಲ್ಲಿ ಜೂಜಾಟ

June 28, 2018
  • 18 ಜೂಜುಕೋರರ ಸೆರೆ
  • 51,200 ನಗದು, 2 ಕಾರು ವಶ

ಯಳಂದೂರು: ಪ್ರಸಿದ್ಧ ಯಾತ್ರಾ ಸ್ಥಳವಾದ ಬಿಳಿಗಿರಿರಂಗನ ಬೆಟ್ಟದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಜೂಜಾಟದಲ್ಲಿ ತೊಡಗಿದ್ದ 18 ಮಂದಿ ಜೂಜುಕೋರರನ್ನು ಬಂಧಿಸಿ 51,200 ರೂ. ಹಾಗೂ 2 ಕಾರುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಳಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಬಿಳಿಗಿರಿರಂಗನಬೆಟ್ಟದ ಲೋಕೋಪ ಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಪ್ರಭಾವಿಗಳ ಗುಂಪೊಂದು ಮೋಜುಮಸ್ತಿ ಯಲ್ಲಿ ತೊಡಗಿದೆ ಎಂಬ ಮಾಹಿತಿ ಹಿನ್ನೆ ಲೆಯಲ್ಲಿ ಯಳಂದೂರು ಸರ್ಕಲ್ ಇನ್ಸ್ ಪೆಕ್ಟರ್ ರಾಜೇಶ್ ಅವರು ಸಬ್‍ಇನ್ಸ್ ಪೆಕ್ಟರ್ ಕೆ.ಕೆ.ಶ್ರೀಧರ್, ಸಿಬ್ಬಂದಿಗಳಾದ ಶಿವರಾಜ್, ಸುಕ್ರುನಾಯಕ, ಹಂಪ ಸಾಗರ ಉಸ್ಮಾನ್, ರಾಘವೇಂದ್ರ, ರಮೇಶ್ ಮತ್ತು ಮಂಜುನಾಥ್ ಅವ ರೊಂದಿಗೆ ಮಂಗಳವಾರ ರಾತ್ರಿ 11.45ರ ಸುಮಾರಿನಲ್ಲಿ ಅತಿಥಿ ಗೃಹದ ಮೇಲೆ ದಾಳಿ ನಡೆಸಿದ್ದರು.
ಅತಿಥಿ ಗೃಹದ 1ನೇ ನಂಬರ್ ಕೊಠ ಡಿಯಲ್ಲಿ 1 ಸಾವಿರ ರೂ. ಅಂದರ್, 1 ಸಾವಿರ ರೂ. ಬಾಹರ್ ಎಂಬ ಧ್ವನಿ ಕೇಳಿಸುತ್ತಿದ್ದ ಹಿನ್ನೆಲೆಯಲ್ಲಿ ಕೊಠಡಿಯ ಬಾಗಿಲನ್ನು ತೆಗೆಸಿ ನೋಡಿದಾಗ ಅಲ್ಲಿ 18 ಮಂದಿ ಜೂಜಾಟದಲ್ಲಿ ತೊಡಗಿರು ವುದು ಕಂಡು ಬಂದಿದೆ.

ಜೂಜುಕೋರ ರಾದ ಕೊಳ್ಳೇಗಾಲದ ದೇವಾಂಗಪೇಟೆಯ ವಾಸಿ, ಮೈಸೂರಿನ ಸಿಸಿನ್‍ಪೋ ಕಂಪನಿ ಯಲ್ಲಿ ಸಿಸ್ಟಂ ಆಪರೇಟರ್ ಆಗಿರುವ ಎಂ.ಸುನೀಲ್ ಕುಮಾರ್ (35), ಕೊಳ್ಳೇ ಗಾಲದ ದೇವಾಂಗಪೇಟೆಯವರೇ ಆದ ಎಸ್.ನಾಗೇಂದ್ರ (26), ಕೊಳ್ಳೇಗಾಲ ಚೌಡೇ ಶ್ವರಿ ಕಲ್ಯಾಣ ಮಂಟಪದ ಸೂಪರವೈಸರ್ ಆರ್.ನಾಗೇಂದ್ರ(35), ಚಿಲ್ಲರೆ ಅಂಗಡಿ ಮಾಲೀಕ ಎನ್.ವಾಸುದೇವ್ (45), ಟೈಲರ್ ಎಸ್.ಮಂಜುನಾಥ್ (37), ಟೈಲರ್ ವಿ.ಚಂದ್ರಪ್ಪ (45), ಜಿ.ರಾಜಶೇಖರ್ (51), ಯು.ಜನಾರ್ಧನ್ (19), ಕಾರು ಚಾಲಕ ಪುಟ್ಟಸ್ವಾಮಿ (45), ಕೆಪಿಟಿಸಿಎಲ್ ಕಂಟ್ರಾ ಕ್ಟರ್ ಆರ್.ವಿಜಯಕುಮಾರ್ (34), ನಿವೃತ್ತ ಗ್ರಾಮ ಲೆಕ್ಕಿಗ ಜಿ.ಸಿ.ಅಶೋಕ್ (61), ಮೆಡಿ ಕಲ್ ಸ್ಟೋರ್ ಮಾಲೀಕ ಎಸ್.ಶ್ರೀಧರ್ (42), ಎಲೆಕ್ಟ್ರಿಷಿಯನ್ ಎಸ್.ನಾಗೇಂದ್ರ (35), ಎಲೆಕ್ಟ್ರಿಷಿಯನ್ ವೇಣುಗೋಪಾಲ್ (35), ರೇಷ್ಮೆ ವ್ಯಾಪಾರಿ ವಿ.ಗಿರೀಶ್ (43), ಎಲೆಕ್ಟ್ರಿಷಿಯನ್ ವೆಂಕಟೇಶ್(37), ಎನ್. ನಿಂಗರಾಜು (50) ಮತ್ತು ಸಿ.ಜಯಸೀಗ (35) ಅವರುಗಳನ್ನು ಬಂಧಿಸಿ ಅವರಿಂದ 51,200 ರೂ. ವಶಪಡಿಸಿಕೊಂಡಿದ್ದಾರೆ.

ಜೂಜಾಟಕ್ಕಾಗಿ ಕೊಳ್ಳೇಗಾಲದಿಂದ ಬಿಳಿಗಿರಿರಂಗನಬೆಟ್ಟಕ್ಕೆ ಈ ಜೂಜು ಕೋರರು ಬಂದಿದ್ದ ಟಾಟಾ ಸುಮೋ (ಕೆಎ.01 ಎನ್.7609) ಮತ್ತು ಡಸ್ಟರ್ ವಾಹನ (ಕೆಎ.10 ಎಮ್.3440) ನ್ನು ವಶಪಡಿಸಿಕೊಂಡು ಇವರನ್ನು ಯಳಂ ದೂರು ಠಾಣೆಗೆ ಕರೆದೊಯ್ದು ಇಂದು ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇಂದು ಮಧ್ಯಾ ಹ್ನದ ವೇಳೆಗೆ ಎಲ್ಲಾ ಜೂಜುಕೋರರನ್ನು ಪೊಲೀಸ್ ಠಾಣೆಯಲ್ಲೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಇವರ ವಿರುದ್ಧ ಎನ್‍ಸಿಆರ್ (56/2018) ದಾಖಲಿಸಲಾಗಿದ್ದು, ನ್ಯಾಯಾಲಯದ ಅನುಮತಿ ಪಡೆದು ಕರ್ನಾಟಕ ಪೊಲೀಸ್ ಕಾಯ್ದೆ 78, 80 ರಡಿ ಎಫ್‍ಐಆರ್ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಬಿಳಿಗಿರಿ ರಂಗ£ಬೆಟ್ಟದ ಈ ಅತಿಥಿ ಗೃಹದಲ್ಲಿ ಪದೇ ಪದೇ ಇಂತಹ ಅಕ್ರಮ ಚಟು ವಟಿಕೆಗಳು ನಡೆಯುತ್ತಿದೆ. ಪ್ರಭಾವಿಗಳು ಹಾಗೂ ಶ್ರೀಮಂತರ ಮಕ್ಕಳು ಇಲ್ಲಿ ಕೊಠಡಿ ಪಡೆದು, ಹಗಲು ರಾತ್ರಿ ಮೋಜು ಮಸ್ತಿಯಲ್ಲಿ ತೊಡಗಿರುತ್ತಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿರಲಿಲ್ಲ ಎಂದು ದೂರಿರುವ ಸ್ಥಳೀಯರು, ಈ ಬಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳಿಗೆ ಮಾಹಿತಿ ನೀಡಿದ ಪರಿ ಣಾಮವಾಗಿ ಪೊಲೀಸರು ರಾತ್ರೋ ರಾತ್ರಿ ದಾಳಿ ನಡೆಸಿ ಜೂಜುಕೋರರನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ಧಾರ್ಮಿಕ ಕ್ಷೇತ್ರವಾಗಿ ಬಿಳಿಗಿರಿ ರಂಗನ ಬೆಟ್ಟದಲ್ಲಿ ಮದ್ಯ ಸೇವನೆ ಹಾಗೂ ಜೂಜಾಟ ಮುಂತಾದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕ ಬೇಕು. ಪೊಲೀಸರು ಸಹ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿ ಬೆಟ್ಟಕ್ಕೆ ಮದ್ಯದ ಬಾಟಲಿಗಳನ್ನು ತರುವುದನ್ನು ತಡೆ ಯುವ ಕೆಲಸ ಮಾಡುತ್ತಿದ್ದಾರೆ. ಆದರೂ ಸಹ ಕೆಲವು ಪ್ರಭಾವಿಗಳು ಬೆಟ್ಟಕ್ಕೆ ಮದ್ಯದ ಬಾಟಲಿಗಳನ್ನು ತಂದು ಸರ್ಕಾ ರದ ಅತಿಥಿ ಗೃಹದಲ್ಲೇ ಮೋಜು ಮಸ್ತಿಯಲ್ಲಿ ತೊಡಗುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಇಂತಹ ಚಟು ವಟಿಕೆಗಳಿಗೆ ಅವಕಾಶ ನೀಡುತ್ತಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳ ಬೇಕೆಂದು ಭಕ್ತಾದಿಗಳು ಆಗ್ರಹಿಸಿದ್ದಾರೆ.

Translate »