ಕೊಳ್ಳೇಗಾಲ: ಜನ ಸಾಮಾ ಪುಣ್ಯ ಪುರುಷರಿಗೆ ಗೌರವ ಸಲ್ಲಿಸಲು ಪಣ ತೊಡಬೇಕಿದೆ ಎಂದು ಪ್ರಾಥ ಮಿಕ ಶಿಕ್ಷಣ ಸಚಿವ ಮಹೇಶ್ ಹೇಳಿದರು.
ಅವರು ಪಟ್ಟಣದ ವಸಂತಕುಮಾರಿ ಸರ್ಕಾರಿ ಕಾಲೇಜಿನಲ್ಲಿ ಅಯೋಜಿಸಲಾ ಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತ ನಾಡಿ, ಎಲ್ಲಾ ಮಹಾ ಪುರುಷರ ಬಗ್ಗೆ ಮಾತ ನಾಡುತ್ತೇವೆ, ತಿಳಿದುಕೊಳ್ಳುತ್ತೇವೆ. ಆದರೆ ಅವರು ಮಾಡಿದ ಸಾಧನೆಯನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಆಲೋಚನೆಗೆ ಒಳಪಟ್ಟರೆ ನಾಡಿನ ಅಭಿವೃದ್ಧಿಗೆ ಎಲ್ಲರ ಕೊಡುಗೆ ಇರಲಿದೆ ಎಂದರು.
ಗ್ರಾಮಾಂತರದ ಆರ್ಥಿಕ ಮೂಲ ಕೃಷಿಯಾ ಗಿದೆ. ಕೃಷಿ ಅಭಿವೃದ್ಧಿಗೆ ಕೆಂಪೇಗೌಡರ ಕೊಡುಗೆ ಬಣ್ಣಿಸಲು ಅಸಾಧ್ಯವಾದುದು, ಕೃಷಿ ಅಭಿವೃದ್ಧಿಗೆ ಅವರು ಕೈಗೊಂಡ ನೀರಾ ವರಿ ವ್ಯವಸ್ಥೆ ಅಮೋಘವಾದುದು. ಈ ನಿಟ್ಟಿ ನಲ್ಲಿ ಅವರ ನೀರಾವರಿ ವ್ಯವಸ್ಥೆ ವ್ಯಾಪ್ತಿ ಯಲ್ಲಿ 2ಸಾವಿರ ಕೆರೆಗಳನ್ನು ನಾವು ಕಾಣಬಹುದಾಗಿತ್ತು.
ಕೆರೆಗಳು ಕೃಷಿ ಅಭಿವೃದ್ಧಿಗೆ ಜೀವ ನಾಡಿಗಳಾಗಿದ್ದವು. ಪರಿಸರ ಸಂರಕ್ಷಿಸಲ್ಪಡು ತ್ತಿದ್ದವು. ಆದರೆ ಆಡಳಿತ ವ್ಯವಸ್ಥೆ ನಡೆ ಸುವ ನಾವು ಕೆರೆಗಳನ್ನು ಉಳಿಸಿಕೊಂಡಿ ದ್ದೇವಾ ಎಂದು ಪ್ರಶ್ನಿಸಿದ ಸಚಿವರು, ಬೆಂಗ ಳೂರು ನಗರ ಜಗತ್ತಿನಲ್ಲಿ ದೊಡ್ಡ ವ್ಯಾಪಾರಿ ಕೇಂದ್ರ ವಾಗಿದೆ. ಜಾಗತಿಕ ಯುಗದಲ್ಲಿ ಅನೇಕ ರಾಷ್ಟ್ರಗಳು ಬಂಡವಾಳ ಹೂಡುವ ಮಟ್ಟಿಗೆ ಬೆಂಗಳೂರು ಬೆಳೆದಿದೆ ಎಂದರು.
ಯಾವುದೇ ಆಡಳಿತ ನಡೆಸುವ ರಾಜ ಕೆರೆ ಅಭಿವೃದ್ಧಿ ಹಾಗೂ ಕೃಷಿ ಅಭಿವೃದ್ಧಿಗೆ ಒತ್ತು ನೀಡಿದರೆ ಆ ನಾಡು ಅಭಿವೃದ್ಧಿ ಯಾಗುತ್ತದೆ. ಈ ಕೆಲಸವನ್ನು ಕೆಂಪೇ ಗೌಡರು ಮಾಡಿದ್ದಾರೆ. ಆದರೆ ಕೆಂಪೇ ಗೌಡರು ಸಂರಕ್ಷಿಸಿದ ಬಹುತೇಕ ಕೆರೆಗಳ ಇಂದು ಕಾಂಕ್ರಿಟ್ ಕಾಡುಗಳಾಗಿವೆ ಎಂದು ಬೇಸರಿಸಿದರು.
ಪೂರ್ವಿಕರು ಮಾಡಿದ ಕೆಲಸಗಳನ್ನು ನಾವು ಉಳಿಸಿಕೊಳ್ಳಬೇಕಿದೆ. ಕೆಂಪೇ ಗೌಡರ ಹೆಸರಿಗೆ ಗೌರವ ಬರುವ ಕೆಲಸ ವನ್ನು ನೀರಾವರಿ ಇಲಾಖೆಯವರು ಮಾಡುವ ಮೂಲಕ ಚಾನಲ್ ಹೂಳೆತ್ತಿ ಕೆರೆ ತುಂಬಿಸಲು ಮುಂದಾಗಬೇಕು ಎಂದರು.
ಕಾವೇರಿ, ಕಬಿನಿ ನದಿಯಿಂದ ತಮಿಳು ನಾಡಿಗೆ ನೀರು ಹೋಗುತ್ತಿರುವುದನ್ನು ಕಂಡು ಜಿಲ್ಲಾಧಿಕಾರಿ ಅವರನ್ನು ನಾನು ಸಂಪರ್ಕಿಸಿದರೆ ಪ್ರವಾಹ ಆಗುತ್ತೆ ಎಂದು ನೀರು ಬಿಡಲಾಗಿದೆ ಎಂದು ಸಬೂಬು ಹೇಳಿದರು.
ಅದೇ ನೀರನ್ನು ಜಿಲ್ಲಾಧಿಕಾರಿಗಳೆ ಕೆರೆ ತುಂಬಿಸಿ ಎಂದು ಆದೇಶಿಸಬಹುದಿ ತ್ತಲ್ವಾ? ತಮಿಳುನಾಡಿಗೆ ಶಾಸನಬದ್ದ ವಾಗಿ ನೀರು ಬಿಡಿ. ಹೆಚ್ಚುವರಿ ನೀರನ್ನು ಕೆರೆಗಳಿಗೆ ತುಂಬಿಸಿ, ಅದನ್ನೂ ಬಿಟ್ಟರೆ ಹೇಗೆ? ಎಂದು ಸಚಿವರು ಪ್ರಶ್ನಿಸಿದರು.
ಹನೂರು ಹಾಗೂ ಕೊಳ್ಳೇಗಾಲದಲ್ಲಿ ಒಕ್ಕಲಿಗ ಸಮುಧಾಯ ಭವನ ನಿರ್ಮಾಣ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುತ್ತೇನೆ ಎಂದು ಭರವಸೆಇತ್ತರು.
ಶಾಸಕ ನರೇಂದ್ರ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿ, ನಾಡಪ್ರಭು ಕೆಂಪೇ ಗೌಡರು ದಕ್ಷ ಆಡಳಿತಗಾರರು. ಅವರ ಜಯಂತಿ ಆಚರಣೆ ಮೂಲಕ ಅವರನ್ನು ಸ್ಮರಿಸುವಂತಾಗಬೇಕು. ಅವರ ತತ್ವ ಆದರ್ಶ ಗುಣಗಳನ್ನು ನಾವು ಕಿಂಚಿತ್ತಾ ದರೂ ಅಳವಡಿಸಿಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾ ಯಿತಿ ಅಧ್ಯಕ್ಷೆ ಶಿವಮ್ಮ, ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಲತಾ ರಾಜಣ್ಣ, ನಗರಸಭೆ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಶಿವಾನಂದ್, ಡಿವೈಎಸ್ಪಿ ಪುಟ್ಟಮಾದಯ್ಯ, ತಹಸಿಲ್ದಾರ್ ಕಾಮಾಕ್ಷಮ್ಮ, ಶಿಕ್ಷಣಾಧಿಕಾರಿ ಶಿವಲಿಂಗಯ್ಯ. ಪಿಎಂ ಕೃಷ್ಣಯ್ಯ, ಮದ್ದೂರು ದೊರೆಸ್ವಾಮಿ, ಶಾಂತರಾಜು ಸೇರಿದಂತೆ ಹಲವಾರು ಮಂದಿ ಇದ್ದರು.