ನೀರು ಸರಬರಾಜಿನಲ್ಲಿ ವ್ಯತ್ಯಯ
ಮೈಸೂರು

ನೀರು ಸರಬರಾಜಿನಲ್ಲಿ ವ್ಯತ್ಯಯ

June 28, 2018

ಮೈಸೂರು: ನಂಜನಗೂಡು ನಗರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ದೇಬೂರಿನಲ್ಲಿರುವ ಜಾಕ್‍ವೆಲ್ಲಿನಿಂದ ಕಬಿನಿ ನದಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ.

ಕಳೆದ ಒಂದು ವಾರದಿಂದ ಅತಿ ಹೆಚ್ಚು ಮಳೆ ಬಂದ ಕಾರಣ ಹಾಗೂ ಕಬಿನಿ ಜಲಾಶಯದಿಂದ ನೀರನ್ನು ಹೊರಬಿಟ್ಟಿದ್ದರಿಂದ ನದಿಯಲ್ಲಿ ನೀರಿನ ಹೊರ ಹರಿವು ಹೆಚ್ಚಾಗಿದ್ದು, ಕಸ ಕಡ್ಡಿಗಳು ಹಾಗೂ ಇನ್ನಿತರೆ ನೀರಿನ ತ್ಯಾಜ್ಯಗಳು ಜಾಕ್‍ವೆಲ್ಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದು, ಮೋಟಾರುಗಳಿಂದ ಅಗತ್ಯ ನಿಗದಿತ ಪ್ರಮಾಣದ ನೀರು ಪಂಪ್ ಆಗುತ್ತಿಲ್ಲ. ನಂಜನಗೂಡು ನಗರದ ಸಾರ್ವಜನಿಕರಿಗೆ ನಿಗದಿತ ಪ್ರಮಾಣದ ನೀರನ್ನು ನಿಯಮಿತವಾಗಿ ಪೂರೈಸಲು ಆಗುತ್ತಿರುವುದಿಲ್ಲ. ಹಾಗೂ ಕೆ.ಯುಐಡಿಎಫ್‍ಸಿ ಇಲಾಖೆಯ ಕೆಎಂಆರ್‍ಪಿ ಕೋಶದ ವತಿಯಿಂದ ನಗರದ ಸಾರ್ವಜನಿಕರಿಗೆ 24×7 ನಿರಂತರ ನೀರು ಸರಬರಾಜು ಮಾಡುವ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಜಾಕ್‍ವೆಲ್ಲಿನಲ್ಲಿ ಪ್ರಸ್ತುತ ಇರುವ 150 ಅಶ್ವಶಕ್ತಿಯ ಮೋಟಾರುಗಳ ಬದಲಾಗಿ ಹೆಚ್ಚಿನ 215 ಅಶ್ವಶಕ್ತಿಯ ಮೋಟಾರ್ ಹಾಗೂ ಪ್ರಸ್ತುತ ಇರುವ 150 ಕೆವಿಎ ಸಾಮಥ್ರ್ಯದ ಪರಿವರ್ತಕದ ಬದಲಾಗಿ 500 ಕೆ.ವಿ.ಎ ಸಾಮಥ್ರ್ಯದ ಪರಿವರ್ತಕ ಅಳವಡಿಸಲು ಜೂ. 28ರಿಂದ ಜೂ. 29ರ ಎರಡು ದಿನಗಳವರೆಗೆ ಜಾಕ್‍ವೆಲ್ಲಿನಿಂದ ನೀರನ್ನು ಎತ್ತಲು ಸಾಧ್ಯವಾಗುವುದಿಲ್ಲ.

ನೀರು ಸರಬರಾಜಿಗೆ ಸಂಬಂಧಿಸಿದ ಮಾಹಿತಿಗಾಗಿ 24×7 ಗ್ರಾಹಕರ ಸಹಾಯವಾಣ ಮೂಲಕ (08221-297332) ಸಾರ್ವಜನಿಕರು ಸಂಪರ್ಕಿಸಬಹುದಾಗಿದೆ.

Translate »