ಅರಣ್ಯಾಧಿಕಾರಿಗಳ ವಿರುದ್ಧ ಎಫ್‍ಐಆರ್ ಬಿ-ರಿಪೋರ್ಟ್: ಸಿದ್ದಾಪುರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ
ಕೊಡಗು

ಅರಣ್ಯಾಧಿಕಾರಿಗಳ ವಿರುದ್ಧ ಎಫ್‍ಐಆರ್ ಬಿ-ರಿಪೋರ್ಟ್: ಸಿದ್ದಾಪುರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

June 28, 2018

ಸಿದ್ದಾಪುರ:  ಅರಣ್ಯ ಅಧಿಕಾರಿಗಳ ವಿರುದ್ಧ ದಾಖಲಾದ ಎಫ್‍ಐಆರ್‍ನ್ನು ದಾಖಲೆಯನ್ನು ಬಿ ರಿಪೋರ್ಟ್ ಮಾಡಿ ರುವುದನ್ನು ಖಂಡಿಸಿ ಜಿಲ್ಲಾ ರೈತರು ಕಾರ್ಮಿಕರ ಅರಣ್ಯ ಹೋರಾಟ ಸಮಿತಿ ಸಿದ್ದಾಪುರ ಪೋಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿತು.

ಹೋರಾಟ ಸಮಿತಿ ನೂರಾರು ಪ್ರಮು ಖರು ಸಿದ್ದಾಪುರ ಪಟ್ಟಣದಲ್ಲಿ ಮೆರವಣ ಗೆ ಯಲ್ಲಿ ಸಾಗಿ ಸರ್ಕಲ್‍ನಲ್ಲಿ ಮಾನವ ಸರ ಪಳಿ ರಚಿಸಿ, ಅರಣ್ಯ ಇಲಾಖೆಯ ವಿರುದ್ಧ ದಿಕ್ಕಾರ ಕೂಗಿದರು. ನಂತರ ಮಳೆಯ ನಡುವೆಯೇ ಸಿದ್ದಾಪುರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನು ಸೊಮಯ್ಯ ಮಾತನಾಡಿ, ಇತ್ತೀಚೆಗೆ ಕರಡಿಗೋಡು ಗ್ರಾಮದ ಕಾಫಿ ಬೆಳೆಗಾರ ಮೋಹನ್ ದಾಸ್ ಎಂಬವರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು.

ಅವರ ಸಾವಿಗೆ ಪರೋಕ್ಷವಾಗಿ ಅರಣ್ಯ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ ಹೋರಾಟ ಸಮಿತಿ ಹಾಗೂ ರೈತ ಸಂಘ, ಕಾರ್ಮಿಕ ಸಂಘದ ಪ್ರಮುಖರು ಅರಣ್ಯ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಕೋರಿ ನ್ಯಾಯಾಲ ಯದ ಮೊರೆ ಹೋಗಿದ್ದು, ನ್ಯಾಯಾ ಲಯ ಸೂಚನೆಯಂತೆ ಅರಣ್ಯ ಅಧಿಕಾರಿ ಗಳಾದ ಸಿಸಿಎಫ್ ಲಿಂಗರಾಜು, ಡಿಎಫ್‍ಒ ಮರಿಯ ಕೃಸ್ತರಾಜ್, ಆರ್‍ಎಫ್‍ಒ ಗಂಗಾ ಧರ್ ವಿರುದ್ಧ ಮೃತರ ಸಹೋದರ ಕೆ.ಎ ಸೋಮಣ್ಣ ಎಂಬವರು ನೀಡಿದ ದೂರಿನ ಮೇರೆಗೆ ಎಫ್‍ಐಆರ್ ದಾಖಲಿಸಲಾಗಿತ್ತು. ನಂತರದ ದಿನಗಳಲ್ಲಿ ಅರಣ್ಯ ಅಧಿಕಾರಿ ಗಳನ್ನು ಸಂರಕ್ಷಿಸಲು ಪೋಲೀಸ್ ಅಧಿ ಕಾರಿಗಳು ದೂರುದಾರರುನ್ನು ಠಾಣೆಗೆ ಕರೆಸಿ, ಬೆದರಿಸಿ, ಖಾಲಿ ಪತ್ರದಲ್ಲಿ ಸಹಿ ಪಡೆದು ಬಿ ರಿಪೋರ್ಟ್ ಮಾಡಿದ್ದಾರೆ ಎಂದು ಆರೋಪಿಸಿದರು
ಹೋರಾಟ ಸಮಿತಿಯ ಕಾನೂನು ಸಲಹೆಗಾರ ಹೇಮಚಂದ್ರ ಮಾತನಾಡಿ, ಜಿಲ್ಲೆಯಲ್ಲಿ ಕಾಡಾನೆ ಹಾವಳಿಯಿಂದ 42 ಮಂದಿ ಬಲಿಯಾಗಿದ್ದಾರೆ. ಅರಣ್ಯ ಇಲಾ ಖೆಯ ನಿರ್ಲಕ್ಷೆಯಿಂದ ನಿರಂತರ ಅನಾ ಹುತಗಳು ಸಂಭವಿಸುತ್ತಿವೆ. ಅಧಿಕಾರಿಗಳ ವಿರುದ್ಧ ರೈತರು ಕಾರ್ಮಿಕರು ನಿರಂತರ ಪ್ರತಿಭಟನೆ ನಡೆಸಿದರೂ ಕಾಡು ಪ್ರಾಣ ಗಳ ಹಾವಳಿ ತಡೆಗಟ್ಟವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ.

ಘಟನೆ ನಡೆದ ಸ್ಥಳಗಳಿಗೆ ಭೇಟಿ ನೀಡು ತ್ತಿಲ್ಲ. ಕಾಡು ಪ್ರಾಣಿಗಳು ಸತ್ತರೆ ಸ್ಥಳಕ್ಕೆ ಭೇಟಿ ನೀಡುವ ಅಧಿಕಾರಿಗಳು ಮನುಷ್ಯನ ಜೀವಕ್ಕೆ ಬೆಲೆ ಇಲ್ಲದಂತ್ತಾಗಿದೆ. ಇಂತಹ ಅಧಿಕಾರಿಗಳು ಕೊಡಲೆ ವರ್ಗವಣೆ ಮಡಬೇಕೆಂದು ಒತ್ತಾಯಿಸಿದರು.

ಕಾರ್ಮಿಕ ಮುಖಂಡ ಪಿ.ಆರ್.ಭರತ್ ಮಾತನಾಡಿ, ಅರಣ್ಯ ಸಂರಕ್ಷಣೆಗೆ ಕೋಟಿಗಟ್ಟಲೆ ಹಣ ಬಿಡುಗಡೆಯಾಗುತ್ತಿದ್ದು ಅರಣ್ಯ ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ಮಟ್ಟದ ಬ್ರಷ್ಟಾಚಾರ ನಡೆಯುತ್ತಿದೆ.

ಕಾಡು ಪ್ರಾಣೆಗಳಿಗೆ ಅರಣ್ಯದಲ್ಲಿ ನೀರು ಆಹಾರ ಇಲ್ಲದೆ ನಾಡಿನತ್ತ ಮುಖ ಮಾಡು ತ್ತಿದ್ದು ರೈತರು ಬೆಳೆದ ಬೆಳೆಯನ್ನು ನಾಶ ಮಾಡಿ ಕಾರ್ಮಿಕರನ್ನು ಬಲಿತೆಗೆದುಕೊಳ್ಳು ತ್ತಿವೆ. ಇಲಾಖೆಯ ವೈಫಲ್ಯದಿಂದ ನಿರಂ ತರ ಘಟನೆಗಳು ಸಂಭವಿಸುತ್ತಿದೆ ಅರಣ್ಯ ಇಲಾಖೆಯಲ್ಲಿ ನಡೆಯುತ್ತಿರುವು ಬ್ರಷ್ಟಾಚಾರ ವನ್ನು ತನಿಖೆ ಮಾಡಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಕಾಡು ಪ್ರಾಣ ಗಳ ಹಾವಳಿ ತಡೆಗಟ್ಟ ಬೇಕೆಂದು ಒತ್ತಾಯಿಸಿದರುಹೊರಾಟ ಸಮಿತಿ, ಕಾರ್ಮಿಕ ಸಂಘಟನೆ, ರೈತ ಸಂಘ ಸೇರಿದಂತೆ ಸಾರ್ವಜನಿಕರು ಪ್ರತಿಭಟನೆ ಪಾಲ್ಗೊಂಡಿದ್ದರು. ಈ ಸಂದರ್ಭ ಡಿವೈಎಸ್‍ಪಿ ಸುಂದರ್ ರಾಜ್ ಅವರಿಗೆ ಮನವಿ ಪತ್ರ ನೀಡಿದರು. ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ವಿಷಯ ತಿಳಿದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ವಿವಿಧ ಠಾಣೆಗಳಿಂದ ಬಂದೋ ಬಸ್ತ್‍ನಲಿದ್ದಿದ್ದು ಕಂಡು ಬಂತು.

ಸಮಿತಿ ಪ್ರಮುಖರಾದ ಮಂಡೆಪಂಡ ಪ್ರಮೀಣ್ ಬೊಪ್ಪಯ್ಯ ನಂದ ಗಣಪತಿ, ನಾಣಯ್ಯ, ಗಪ್ಪಣ್ಣ, ಸುಜಯ್, ಮಾಚ್ಚಯ್ಯ, ಭರತ್, ರಮೇಶ್, ಮಹದೇವ್ ಸೇರಿ ದಂತೆ ಮತ್ತಿತರರು ಹಾಜರಿದ್ದರು

Translate »