ಬೆಟ್ಟದಪುರ: ಬೈಕ್‍ಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಪಿರಿಯಾ ಪಟ್ಟಣ ತಾಲೂಕು ರಾಗಿಆಲದಮರ ಗ್ರಾಮದಲ್ಲಿ ನಡೆದಿದೆ. ಕೋಳಿಮನೆ ಗ್ರಾಮದ ರಮೇಶ್ ಅವರ ಮಗ ಸಂತೋಷ್ (25) ಅಪಘಾತದಲ್ಲಿ ಸಾವನ್ನಪ್ಪಿದವನಾಗಿದ್ದು, ಈತ ಬೆಟ್ಟದಪುರದಿಂದ ಕುಶಾಲನಗರ ರಸ್ತೆಯಲ್ಲಿರುವ ತನ್ನ ಮನೆ ಕೋಳಿಮನೆ ಗ್ರಾಮಕ್ಕೆ ಹೋಗುವ ವೇಳೆ ಪಿರಿಯಾಪಟ್ಟಣದಿಂದ ಮಂಟಿಬಿಳಗುಲಿ ಗ್ರಾಮದ ಮಾರ್ಗವಾಗಿ ಬರುತ್ತಿದ್ದ ಬಸ್ಸ್ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸಂತೋಷ್ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಆಂಬುಲೆನ್ಸ್‍ನಲ್ಲಿ ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ…
ಬಾಗಿಲು ಮುರಿದು ಚಿನ್ನಾಭರಣ ಕಳವು
June 23, 2018ಮೈಸೂರು: ಮನೆಯ ಮುಂಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಬೆಲೆಬಾಳುವ 25 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಜೆಪಿ ನಗರದ ಸಿದ್ದಲಿಂಗೇಶ್ವರ ಬಡಾವಣೆಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಚಂದ್ರಶೇಖರ್ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಇವರು ಜೂ.20ರಂದು ಕಾರ್ಯ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ಹೊರಗಡೆ ತೆರಳಿದ್ದಾರೆ. ಪುನಃ ಜೂ.21ರಂದು ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂದುಕೊರತೆ ನಿವಾರಣಾ ಸಭೆ
June 23, 2018ಮೈಸೂರು: ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಸಮಸ್ಯೆ ಮತ್ತು ಕುಂದುಕೊರತೆ ನಿವಾರಣಾ ಸಭೆಯನ್ನು ಬೆಂಗಳೂರು ನಗರದಲ್ಲಿ ಜು26 ಹಾಗೂ 27ರಂದು ನಡೆಸಲು ಉದ್ದೇಶಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಮೇಲೆ ಸರ್ಕಾರಿ ನೌಕರರು ದೌರ್ಜನ್ಯ ವೆಸಗಿದ ಬಗ್ಗೆ ಹಾಗೂ ಸರ್ಕಾರಿ ನೌಕರರ ನಿರ್ಲಕ್ಷ್ಯದಿಂದ ದೌರ್ಜನ್ಯಕ್ಕೊಳಗಾದ ಬಗ್ಗೆ ದೂರುಗಳಿದ್ದಲ್ಲಿ ದೂರುಗಳನ್ನು ರಿಜಿಸ್ಟ್ರಾರ್, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಮಾನವ ಅಧಿಕಾರ ಭವನ, ಬ್ಲಾಕ್-ಸಿ, ಜಿಪಿಓ, ಕಾಂಪ್ಲೆಕ್ಸ್, ಐಎನ್‍ಎ, ನವದೆಹಲಿ-110023 ಇಲ್ಲಿಗೆ…
ವಿದ್ಯುತ್ ನಿಲುಗಡೆ
June 23, 2018ಮೈಸೂರು: ಮೈಸೂರು ಚಾಮುಂಡೇ ಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಜ್ಯೋತಿನಗರ ವಿದ್ಯುತ್ ವಿತರಣಾ ಕೇಂದ್ರದಿಂದ 11 ಕೆ.ವಿ.ಪಿ.ಎಫ್ ಆಫೀಸ್ ಮತ್ತು ಗೌಸಿಯಾ ಫೀಡರ್‍ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಜೂನ್ 23ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಗಾಯತ್ರಿಪುರಂ 1ನೇ ಹಂತ ಮತ್ತು 2ನೇ ಹಂತ, ಗೌಸಿಯಾನಗರ, ಕ್ಯಾತಮಾರನಹಳ್ಳಿ, ಉದಯಗಿರಿ, ಕೆ.ಎನ್.ಪುರ, ರಾಜೀವ್‍ನಗರ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು. ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು ವಿದ್ಯುತ್ ನಿಲುಗಡೆಯಾಗಲಿದೆ ಸಾರ್ವ ಜನಿಕರು ಸಹಕರಿಸಬೇಕಾಗಿ ಕೋರಿದೆ.
ಮೈಸೂರು ರೇಸ್ ಕೋರ್ಸ್‍ನಲ್ಲಿ 60 ಸಾವಿರಕ್ಕೂ ಅಧಿಕ ಮಂದಿ ಯೋಗ ಪ್ರದರ್ಶನ
June 22, 2018ಅಗತ್ಯ ಮುನ್ನೆಚ್ಚರಿಕೆಯಿಂದ ಸಾಂಗವಾಗಿ ನೆರವೇರಿದ ಮೆಗಾ ಕಾರ್ಯಕ್ರಮ ದೇಶದ ಸಂಸ್ಕೃತಿ ಪ್ರತೀಕವಾದ ಯೋಗಕ್ಕೆ ಮೈಸೂರಿಗರಿಂದ ಸಿಕ್ಕಿತು ಮೆರಗು ಮೈಸೂರು: ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯ ಚಾಮುಂಡಿ ಬೆಟ್ಟದ ತಪ್ಪಲು, ಕಂಗೊಳಿಸುತ್ತಿದ್ದ ಹಸಿರು ವಲಯ ಮೋಡ ಕವಿದ ವಾತಾವರಣ ಹಾಗೂ ಚುಮು ಚುಮು ಚಳಿಯ ನಡುವೆ ಮೈಸೂರಿನ ರೇಸ್ ಕೋರ್ಸ್‍ನಲ್ಲಿ ಸಾವಿರಾರು ಮಂದಿಯಿಂದ ಯೋಗ ಪ್ರದರ್ಶನ. ಗುರುವಾರ ನಡೆದ ನಾಲ್ಕನೇ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ 60 ಸಾವಿರಕ್ಕೂ ಹೆಚ್ಚು ಮಂದಿ ಸಾಮೂಹಿಕ ಯೋಗ ಪ್ರದರ್ಶನ ನೀಡುವ ಮೂಲಕ…
ವಿಶ್ವ ದಾಖಲೆ ಮಾಡುವತ್ತ ಬಾಬಾ ರಾಮ್ ದೇವ್ ಯೋಗ ಕಾರ್ಯಕ್ರಮ!
June 22, 2018ಕೋಟಾ: ರಾಜಸ್ತಾನದ ಕೋಟದಲ್ಲಿ ಯೋಗಗುರು ಬಾಬಾ ರಾಮದೇವ್ ನೇತೃತ್ವದಲ್ಲಿ ನಡೆಯುತ್ತಿ ರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಗಿನ್ನೆಸ್ ರೆಕಾರ್ಡ್ ಮಾಡುವತ್ತ ಸಾಗುತ್ತಿದೆ. ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಆರ್‍ಎಸಿ ಗ್ರೌಂಡ್ಸ್ ನಲ್ಲಿ ಯೋಗಗುರು ಬಾಬಾ ರಾಮ್ ದೇವ್ ಮತ್ತು ರಾಜಸ್ತಾನದ ಮುಖ್ಯ ಮಂತ್ರಿ ವಸುಂದರಾ ರಾಜೆ ನೇತೃತ್ವ ದಲ್ಲಿ ನಡೆಯುತ್ತಿರುವ ಯೋಗ ಕಾರ್ಯ ಕ್ರಮ ವಿಶ್ವ ದಾಖಲೆ ಮಾಡುವತ್ತ ದಾಪುಗಾಲಿಟ್ಟಿದೆ. ಈ ಕಾರ್ಯಕ್ರಮ ದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಿರುವುದು ವಿಶ್ವ ದಾಖಲೆಯಾಗುವ…
ಮೈಸೂರು ಜಲದರ್ಶಿನಿ ಬಳಿ ಹುಣಸೂರು ರಸ್ತೆ ನೇರಗೊಳಿಸುವ ಕಾಮಗಾರಿಯಲ್ಲಿ ಭಾರೀ ಅಕ್ರಮ
June 22, 2018ಸಂಸದ ಪ್ರತಾಪ್‍ಸಿಂಹ ಆರೋಪ, ಸಮರ್ಪಕ ಕಾಮಗಾರಿಗೆ ವಾರದ ಗಡುವು ಸ್ಥಳ ಪರಿಶೀಲಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ತೀವ್ರ ತರಾಟೆ ಅವ್ಯವಹಾರದ ಬಗ್ಗೆ ತನಿಖೆಗೆ ಒತ್ತಾಯ, ತಪ್ಪಿದರೆ ಉಗ್ರ ಹೋರಾಟದ ಎಚ್ಚರಿಕೆ ಮೈಸೂರು: ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಮುಂಭಾಗದಿಂದ ಪಡುವಾರಹಳ್ಳಿ ಸಿಗ್ನಲ್ ಜಂಕ್ಷನ್‍ವರೆಗಿನ ಹುಣಸೂರು ರಸ್ತೆ ನೇರ ಗೊಳಿಸುವ ಕಾಮಗಾರಿಯನ್ನು ಯೋಜನೆ ಅನುಸಾರ ಇನ್ನೊಂದು ವಾರದಲ್ಲಿ ಪೂರ್ಣ ಗೊಳಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಿರುವ ಸಂಸದ ಪ್ರತಾಪ್ ಸಿಂಹ, ಕಾಮಗಾರಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆಗೆ ಒತ್ತಾಯಿಸುವುದಾಗಿ ತಿಳಿಸಿದ್ದಾರೆ….
75 ನಿಮಿಷ ಯೋಗ ಪ್ರದರ್ಶನದ ಮೂಲಕ ಗೌಡರ ತಾಕತ್ತು ದರ್ಶನ
June 22, 2018ಬೆಂಗಳೂರು: ಇತ್ತೀಚೆಗೆ ಪ್ರಧಾನಿ ಮೋದಿ ಫಿಟ್ನೆಸ್ ಚಾಲೆಂಜ್‍ಗೆ ಉತ್ತರ ಎಂಬಂತೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರು ಇಂದು ಸತತ 75 ನಿಮಿಷ ಯೋಗ ಮಾಡುವ ಮೂಲಕ ಗಮನ ಸೆಳೆದರು. 4ನೇ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ಅಂಗ ವಾಗಿ ಪದ್ಮನಾಭನಗರ ನಿವಾಸದಲ್ಲಿ ಮಾಧ್ಯಮದವರ ಎದುರು ದೇವೇಗೌಡ ಅವರು ಯೋಗಾಸನ ಮಾಡಿದರು. ಯೋಗ ಗುರು ಕಾರ್ತಿಕ್ ಸಾಥ್ ನೀಡಿದರು. ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳ ವಿಕಾಸಕ್ಕೆ ವ್ಯಾಯಾಮ, ಯೋಗ ಅಗತ್ಯ….
ಸಿದ್ದಗಂಗಾಶ್ರೀಗಳಿಗೆ ಆರೋಗ್ಯ ತಪಾಸಣೆ
June 22, 2018ಬೆಂಗಳೂರು: ಸಿದ್ಧಗಂಗಾ ಮಠದ ಡಾ.ಶಿವ ಕುಮಾರ ಸ್ವಾಮೀಜಿ ಅವರು ಗುರುವಾರ ಬೆಳಿಗ್ಗೆ ಬೆಂಗಳೂ ರಿನ ಬಿಜಿಎಸ್ ಆಸ್ಪತ್ರೆ ಯಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆಗೆ ಒಳಗಾಗಿದ್ದರು. ಸ್ವಾಮೀಜಿಯವರು ಆರೋಗ್ಯ ವಾಗಿದ್ದಾರೆ. ಈ ಹಿಂದೆ ಸ್ಟಂಟ್ ಅಳವಡಿಸಿ ರುವುದರಿಂದ ವೈದ್ಯರ ಸಲಹೆ ಮೇರೆಗೆ ಸಾಮಾನ್ಯ ಆರೋಗ್ಯ ತಪಾಸಣೆಗೆ ತೆರಳಿ ದ್ದರು ಎಂದು ಮಠದ ಮೂಲಗಳು ತಿಳಿಸಿವೆ. ಇನ್ನೂ ಶ್ರೀಗಳು ಆಸ್ಪತ್ರೆಗೆ ದಾಖಲಾ ಗಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಬಿಜಿಎಸ್ ಆಸ್ಪತ್ರೆಗೆ ತೆರಳಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಮಠಕ್ಕೆ ವಾಪಸ್:…
ಬೆಂಗಳೂರು-ಮೈಸೂರು ಹೆದ್ದಾರಿ ಅಭಿವೃದ್ಧಿಗೆ ವಿದ್ಯುತ್ ಕಂಬ, ಮರಗಳೇ ಅಡ್ಡಿ
June 22, 2018ಬೆಂಗಳೂರು: ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ಯನ್ನು ವಿಶ್ವ ದರ್ಜೆಗೆ ಏರಿಸಲು ವಿದ್ಯುತ್ ಕಂಬ ಹಾಗೂ ಮರಗಳು ಅಡ್ಡಿಯಾಗಿವೆ. ಈ ಗೊಂದಲ ನಿವಾರಿಸಲು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ರಾಜ್ಯಕ್ಕೆ ಧಾವಿಸಿ ವಿಶೇಷ ಸಭೆ ನಡೆಸಲಿದ್ದಾರೆ. ಅಂದಿನ ಸರ್ಕಾ ರದ ಒತ್ತಡಕ್ಕೆ ಮಣಿದು ವಿಧಾನಸಭಾ ಚುನಾ ವಣೆಗೂ ಮುನ್ನ ಗಡ್ಕರಿ ಅವರೇ ಅಷ್ಟಪಥ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಜ್ಯ ಹೆದ್ದಾರಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದನ್ನು ಬಿಟ್ಟರೆ, ರಸ್ತೆ ನಿರ್ಮಾಣ…