ವಿಶ್ವ ದಾಖಲೆ ಮಾಡುವತ್ತ ಬಾಬಾ ರಾಮ್ ದೇವ್ ಯೋಗ ಕಾರ್ಯಕ್ರಮ!
ಮೈಸೂರು

ವಿಶ್ವ ದಾಖಲೆ ಮಾಡುವತ್ತ ಬಾಬಾ ರಾಮ್ ದೇವ್ ಯೋಗ ಕಾರ್ಯಕ್ರಮ!

June 22, 2018

ಕೋಟಾ: ರಾಜಸ್ತಾನದ ಕೋಟದಲ್ಲಿ ಯೋಗಗುರು ಬಾಬಾ ರಾಮದೇವ್ ನೇತೃತ್ವದಲ್ಲಿ ನಡೆಯುತ್ತಿ ರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಗಿನ್ನೆಸ್ ರೆಕಾರ್ಡ್ ಮಾಡುವತ್ತ ಸಾಗುತ್ತಿದೆ.

ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಆರ್‍ಎಸಿ ಗ್ರೌಂಡ್ಸ್ ನಲ್ಲಿ ಯೋಗಗುರು ಬಾಬಾ ರಾಮ್ ದೇವ್ ಮತ್ತು ರಾಜಸ್ತಾನದ ಮುಖ್ಯ ಮಂತ್ರಿ ವಸುಂದರಾ ರಾಜೆ ನೇತೃತ್ವ ದಲ್ಲಿ ನಡೆಯುತ್ತಿರುವ ಯೋಗ ಕಾರ್ಯ ಕ್ರಮ ವಿಶ್ವ ದಾಖಲೆ ಮಾಡುವತ್ತ ದಾಪುಗಾಲಿಟ್ಟಿದೆ. ಈ ಕಾರ್ಯಕ್ರಮ ದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಿರುವುದು ವಿಶ್ವ ದಾಖಲೆಯಾಗುವ ಎಲ್ಲ ಮುನ್ಸೂಚನೆ ನೀಡಿದೆ. ಈ ಬೃಹತ್ ಕಾರ್ಯಕ್ರಮಕ್ಕೆ ಎರಡು ದಿನಗಳ ಹಿಂದೆಯೇ ಕೋಟಾಕ್ಕೆ ಬಂದಿದ್ದ ರಾಮ್‍ದೇವ್ ಕಾರ್ಯಕ್ರಮದಲ್ಲಿ

ಪಾಲ್ಗೊಳ್ಳುವವರಿಗೆ ತರಬೇತಿ ನೀಡಿದ್ದರು.ವಿಶ್ವ ದಾಖಲೆಗಳ ತಂಡ ಕಾರ್ಯಕ್ರಮವನ್ನು ಪರಿಶೀಲಿಸಲು ಕೋಟಾಕ್ಕೆ ಬಂದಿದ್ದಾರೆ. ಒಂದೇ ಜಾಗದಲ್ಲಿ ಅತಿ ಹೆಚ್ಚು ಜನರನ್ನು ಸೇರಿಸಿ ಯೋಗ ಮಾಡಿ ವಿಶ್ವ ದಾಖಲೆಗೆ ಮುಂದಾಗಿದ್ದೇವೆ. ಸುಮಾರು ಎರಡು ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಭರವಸೆಯಲ್ಲಿದ್ದೇವೆ. ಈಗಾಗಲೇ 1.05 ಲಕ್ಷ ಜನ ಭಾಗವಹಿಸಿ ಯೋಗಭ್ಯಾಸ ಮಾಡಿದ್ದಾರೆ. 100 ಕ್ಕೂ ಹೆಚ್ಚಿಮನ ದಾಖಲೆಗಳು ಆಗುವ ಸಾಧ್ಯತೆಯಿದೆ.ಇನ್ನೂ ಕೂಡ ಜನ ಆಗಮಿಸುತ್ತಿದ್ದು, ಸೂರ್ಯ ನಮಸ್ಕಾರ ದಂಡೆ ಮತ್ತಿತರ ಆಸನಗಳನ್ನು ಮಾಡುತ್ತಿರುವುದು ನಮಗೆ ಹೆಮ್ಮೆಯಾಗಿದೆ ಎಂದರು.

 

Translate »