ಮೈಸೂರು

ಯುವಕರ ಮೇಲೆ ಹಲ್ಲೆ: ನಾಲ್ವರ ಬಂಧನ
ಮೈಸೂರು

ಯುವಕರ ಮೇಲೆ ಹಲ್ಲೆ: ನಾಲ್ವರ ಬಂಧನ

June 14, 2018

ಮೈಸೂರು:  ಕ್ಷುಲ್ಲಕ ವಿಚಾರವಾಗಿ ಯುವಕನ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದ ನಾಲ್ಕು ಮಂದಿ ಯುವಕರನ್ನು ಕೆ.ಆರ್.ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮೈಸೂರು ಹುಲ್ಲಿನಬೀದಿ ನಿವಾಸಿ ಗಣೇಶ್(25) ಹಲ್ಲೆಗೊಳಗಾದ ಯುವಕ. ಶೀನ, ಪ್ರಕಾಶ್, ದರ್ಶನ್, ಮನು ಹಲ್ಲೆ ಮಾಡಿದವರು. ಗಣೇಶ್, ಹುಲ್ಲಿನಬೀದಿಯ ಸಾರ್ವಜನಿಕ ಸ್ಥಳದಲ್ಲಿ ನಿಂತು ಮೊಬೈಲ್‍ನಲ್ಲಿ ತನ್ನ ಗೆಳೆಯರೊಂದಿಗೆ ಮಾತನಾಡುತ್ತಿದ್ದಾಗ ಸಮೀಪದಲ್ಲಿದ್ದ ಶ್ರೀನ ಇತರರು ಗಣೇಶ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಘಟನೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಗಣೇಶ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು ಘಟನೆ ಬಗ್ಗೆ…

ಅಚ್ಚು ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆ
ಮೈಸೂರು

ಅಚ್ಚು ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆ

June 14, 2018

ಮೈಸೂರು:  ರಾಜ್ಯದಾದ್ಯಂತ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರೌಢಶಾಲೆಗಳಲ್ಲಿ ಅಚ್ಚು ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮವನ್ನು ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿದೆ. ಕನ್ನಡ ಪುಸ್ತಕ ಪ್ರಾಧಿಕಾರವು ಕಾರ್ಯಕ್ರಮ ಆಯೋಜಿಸಲು ರೂ.5000 ಗಳ ಗರಿಷ್ಟ ಮಿತಿಯೊಳಗೆ ವಾಸ್ತವಿಕ ವೆಚ್ಚವನ್ನು ಭರಿಸಲಿದೆ. ಶಾಲಾ ವಿವರಗಳೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಬಹುದಾದ ದಿನಾಂಕ, ಆಹ್ವಾನಿಸುವ ಇಬ್ಬರು ತೀರ್ಪುಗಾರರ ಹೆಸರು ಇತ್ಯಾದಿ ವಿವರಗಳೊಂದಿಗೆ ಆಯಾ ಶಾಲಾ ಮುಖ್ಯಸ್ಥರು ಸ್ವಯಂ ಅರ್ಜಿಯನ್ನು ಜೂನ್ 30 ರೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ,…

ಕಂಪ್ಯೂಟರ್ ಬೇಸಿಕ್ ತರಬೇತಿ
ಮೈಸೂರು

ಕಂಪ್ಯೂಟರ್ ಬೇಸಿಕ್ ತರಬೇತಿ

June 14, 2018

ಮೈಸೂರು:  ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ, ಉನ್ನತೀಕರಣ ಯೋಜನೆಯಡಿ 18 ವರ್ಷ ಮೇಲ್ಪಟ್ಟ ಹಾಗೂ ಕನಿಷ್ಠ ಎಸ್‍ಎಸ್‍ಎಲ್‍ಸಿ ತೇರ್ಗಡೆ ಹೊಂದಿರುವ ನಿರುದ್ಯೋಗಿ ಪುರುಷ/ಮಹಿಳಾ ಅಭ್ಯರ್ಥಿಗಳಿಗೆ ಜೂ. 20 ರಿಂದ ಆಗಸ್ಟ್ 20ರವರೆಗೆ ಒಟ್ಟು 2 ತಿಂಗಳ ಅವಧಿಗೆ ಕಂಪ್ಯೂಟರ್ ಬೇಸಿಕ್ ಉಚಿತ ತರಬೇತಿ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಡಿ.ಎಂ.ರಾಣ (ಪ್ರ) ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಮೈಸೂರು-07 ಇವರನ್ನು ಕಛೇರಿ ವೇಳೆಯಲ್ಲಿ ಅಥವಾ ದೂರವಾಣ ಸಂಖ್ಯೆ:0821-2489972ರಲ್ಲಿ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವುದು….

ಅಂಚೆ ಅದಾಲತ್
ಮೈಸೂರು

ಅಂಚೆ ಅದಾಲತ್

June 14, 2018

ಮೈಸೂರು: ಸಮಗ್ರ ಅಂಚೆ ಸೇವೆಗಳ ದೂರು ಮತ್ತು ಕುಂದುಕೊರತೆ ನಿವಾರಿಸಲು ಹಾಗೂ ಆಂಚೆ ಸೇವೆ ಸುಧಾರಣೆಗಾಗಿ ಸಲಹೆ ಸ್ವಾಗತಿಸಲು ಜೂ. 14 ರಂದು ಬೆಳಿಗ್ಗೆ 11 ಗಂಟೆಗೆ ಯಾದವಗಿರಿ ಅಂಚೆ ಕಛೇರಿಯ ಹಿರಿಯ ಅಧೀಕ್ಷಕರ ಕಾರ್ಯಾಲಯದಲ್ಲಿ “ಡಾಕ್ ಅದಾಲತ್” ಆಯೋಜಿಸಿದೆ. ದೂರುಗಳನ್ನು ಮೈಸೂರು ವಿಭಾಗದ ಅಂಚೆ ಸೇವೆಗಳ ಹಿರಿಯ ಅಧೀಕ್ಷಕರ ಕಾರ್ಯಾಲಯಕ್ಕೆ ಸಲ್ಲಿಸುವುದು.

ವಿಧಾನ ಪರಿಷತ್ ಚುನಾವಣೆ: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‍ನ ಮರಿತಿಬ್ಬೇಗೌಡ ಜಯಭೇರಿ
ಮೈಸೂರು

ವಿಧಾನ ಪರಿಷತ್ ಚುನಾವಣೆ: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‍ನ ಮರಿತಿಬ್ಬೇಗೌಡ ಜಯಭೇರಿ

June 13, 2018

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಜೆಡಿಎಸ್ ಬೆಂಬಲಿತ ಮರಿತಿಬ್ಬೇಗೌಡ ಅವರು ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ.ಮೈಸೂರಿನ ವಿನಾಯಕನಗರ(ಪಡುವಾರ ಹಳ್ಳಿ) ಬಳಿ ವಾಲ್ಮೀಕಿ ರಸ್ತೆಯಲ್ಲಿರುವ ಮಹಾ ರಾಣಿ ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ನಡೆದ ಮತ ಎಣಿಕೆಯಲ್ಲಿ ಜೆಡಿಎಸ್‍ನ ಮರಿ ತಿಬ್ಬೇಗೌಡ ಹಾಗೂ ಕಾಂಗ್ರೆಸ್‍ನ ಎಂ.ಲಕ್ಷ್ಮಣ ನಡುವೆ ರೋಚಕ ಪೈಪೋಟಿ ಏರ್ಪಟ್ಟಿತ್ತು. ಒಟ್ಟು 16696 ಚಲಾಯಿತ ಮತಗಳಲ್ಲಿ ಮೊದಲ ಪ್ರಾಶಸ್ತ್ಯದ ಮತ ಎಣ ಕೆಯಲ್ಲಿ ಯಾವೊಬ್ಬ ಅಭ್ಯರ್ಥಿಯೂ ಶೇ.50ರಷ್ಟು ಮತಗಳನ್ನು ಗಳಿಸುವಲ್ಲಿ ವಿಫಲ ರಾದ ಹಿನ್ನೆಲೆಯಲ್ಲಿ 2ನೇ…

ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ಆಯನೂರು ಮಂಜುನಾಥ್ ಮೊದಲ ಸುತ್ತಿನಲ್ಲೇ ಗೆಲುವು ದಾಖಲು
ಮೈಸೂರು

ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ಆಯನೂರು ಮಂಜುನಾಥ್ ಮೊದಲ ಸುತ್ತಿನಲ್ಲೇ ಗೆಲುವು ದಾಖಲು

June 13, 2018

ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‍ನ ಎಸ್.ಎಲ್.ಬೋಜೇಗೌಡ ಆಯ್ಕೆ ಮೈಸೂರು:  ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಯನೂರು ಮಂಜುನಾಥ್ ಅವರು, ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆ ಹಂತದಲ್ಲೇ ಭರ್ಜರಿ ಗೆಲುವು ದಾಖಲಿಸುವ ಮೂಲಕ ವಿಧಾನ ಪರಿಷತ್‍ಗೆ ಪುನರಾಯ್ಕೆಯಾಗಿದ್ದಾರೆ. ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಒಟ್ಟು 47,171 ಮತದಾನವಾಗಿತ್ತು. ಅಭ್ಯರ್ಥಿ ಗೆಲುವಿಗೆ 21526 ಖೋಟಾ ಮತಗಳ ಅಗತ್ಯವಿತ್ತು. ಹಾಗೆಯೇ ಪ್ರಥಮ ಪ್ರಾಶಸ್ತ್ಯ ಮತ ಎಣಿಕೆಯಲ್ಲೇ ಆಯನೂರು ಮಂಜುನಾಥ್ 25,250 ಮತಗಳನ್ನು ಪಡೆದುಕೊಳ್ಳುವ ಮೂಲಕ ಅದ್ವಿತೀಯ ಗೆಲುವು ದಾಖಲಿಸಿದರು. ಪ್ರತಿಸ್ಪರ್ಧಿಗಳಾದ…

ಮತ್ತೊಂದು ತನಿಖಾ ಸಂಸ್ಥೆ ಸ್ಥಾಪನೆಗೆ ಸಿದ್ಧತೆ
ಮೈಸೂರು

ಮತ್ತೊಂದು ತನಿಖಾ ಸಂಸ್ಥೆ ಸ್ಥಾಪನೆಗೆ ಸಿದ್ಧತೆ

June 13, 2018

ಬೆಂಗಳೂರು: ಅಧಿಕಾರಿಗಳ ಭ್ರಷ್ಟಾಚಾರ ಹತ್ತಿಕ್ಕಲು ಲೋಕಾಯುಕ್ತ, ಎಸಿಬಿಗೆ ಪರ್ಯಾಯ ವಾಗಿ ಮತ್ತೊಂದು ತನಿಖಾ ಸಂಸ್ಥೆ ಸ್ಥಾಪಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ವಿಶ್ವದ ಮುಂದುವರೆದ ರಾಷ್ಟ್ರಗಳಲ್ಲಿ ಇರುವ ತನಿಖಾ ಸಂಸ್ಥೆಗಳನ್ನು ಮಾದರಿ ಯಾಗಿ ಇಟ್ಟುಕೊಂಡು ಒಂಬಡ್ಸ್‍ಮನ್ ಮಾದರಿಯಲ್ಲಿ ಸಂಸ್ಥೆ ಅಸ್ತಿತ್ವಕ್ಕೆ ಬರ ಲಿದೆ. ಸರ್ಕಾರಿ ಮಟ್ಟದಲ್ಲಿರುವ ಆಯ್ದ 10 ಶುದ್ಧ ಹಸ್ತದ ಅಧಿಕಾರಿಗಳು ಈ ಸಂಸ್ಥೆಯ ಜವಾಬ್ದಾರಿ ಹೊರುತ್ತಾರೆ. ಕಾನೂನಾತ್ಮಕವಾಗಿ ಸಂಸ್ಥೆಗೆ ಬಲ ತುಂಬಲು ಮುಖ್ಯಮಂತ್ರಿ ಅವರು ನಿರ್ಧ ರಿಸಿದ್ದಾರೆ. ಇದಕ್ಕಾಗಿ ಒಂದು ಮಸೂದೆ ತರಲೂ ಸಿದ್ಧವಿದ್ದಾರೆ…

ರಾಜ್ಯ ಯೋಜನಾ ಮಂಡಳಿ ಅಧ್ಯಕ್ಷರನ್ನಾಗಿ ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ನೇಮಕಕ್ಕೆ ನಿರ್ಧಾರ
ಮೈಸೂರು

ರಾಜ್ಯ ಯೋಜನಾ ಮಂಡಳಿ ಅಧ್ಯಕ್ಷರನ್ನಾಗಿ ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ನೇಮಕಕ್ಕೆ ನಿರ್ಧಾರ

June 13, 2018

ಬೆಂಗಳೂರು: ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರನ್ನಾಗಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರನ್ನು ನೇಮಕ ಮಾಡಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಮಂಡಳಿಯಲ್ಲಿ ನಾರಾಯಣಮೂರ್ತಿ ಅವರು ಹೆಸರಿಸುವ ತಜ್ಞರೇ ಇರಲಿದ್ದಾರೆ. ಇದುವರೆಗೂ ಮಂಡಳಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲಾಗುತ್ತಿತ್ತು. ಇನ್ನು ಮುಂದೆ ಮಂಡಳಿಗೆ ಸಂಪುಟ ದರ್ಜೆ ಸ್ಥಾನ ನೀಡಿ, ವಿಧಾನಸೌಧ ಅಥವಾ ವಿಕಾಸಸೌಧದಲ್ಲಿ ಕೊಠಡಿ ನೀಡಲಾಗುವುದು. ನಿರುದ್ಯೋಗ ಸಮಸ್ಯೆ ಬಗೆಹರಿಸಲು ರಾಜ್ಯದಲ್ಲಿ ಉದ್ಯಮಗಳ ಸ್ಥಾಪನೆ ಮತ್ತು ಸಂಪನ್ಮೂಲ ಕ್ರೋಢೀಕರಣ, ಹೊಸ ಯೋಜನೆಗಳ ಅನುಷ್ಠಾನದ ಉದ್ದೇಶ ದಿಂದ ಇದೇ ಮೊದಲ…

ಇಷ್ಟೆಲ್ಲಾ ಕೆಲಸ ಮಾಡಿದ್ದರೂ ಜನ ಮನ್ನಿಸಲಿಲ್ಲವೇಕೆ?
ಮೈಸೂರು

ಇಷ್ಟೆಲ್ಲಾ ಕೆಲಸ ಮಾಡಿದ್ದರೂ ಜನ ಮನ್ನಿಸಲಿಲ್ಲವೇಕೆ?

June 13, 2018

ವರುಣಾ ಕೃತಜ್ಞತಾ ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬೇಸರದ ನುಡಿ ಮೈಸೂರು: ದೇಶದ ಯಾವ ರಾಜ್ಯದಲ್ಲೂ ಇಲ್ಲದ `ಅನ್ನಭಾಗ್ಯ’ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿ, ನನ್ನ ಆಡಳಿತಾ ವಧಿಯಲ್ಲಿ ಒಂದು ಕಪ್ಪುಚುಕ್ಕೆಯೂ ಇಲ್ಲದಂತೆ, ಭ್ರಷ್ಟಾಚಾರ, ಹಗರಣಗಳಿಲ್ಲದೇ ಆಡಳಿತ ನಡೆಸಿದ್ದೇವೆ. ರಾಜ್ಯದ ಜನರು ಆಶೀರ್ವಾದ ಮಾಡೇ ಮಾಡುತ್ತಾರೆಂಬ ವಿಶ್ವಾಸವಿತ್ತು. ಆದರೆ ಇಷ್ಟೆಲ್ಲಾ ಜನಪರ ಕಾರ್ಯಕ್ರಮಗಳನ್ನು ನೀಡಿದ್ದರೂ ರಾಜ್ಯದ ಜನತೆ ಮನ್ನಿಸಲಿಲ್ಲವೇಕೆ? ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೇಸರದ ನುಡಿ ಇದು. ಮೈಸೂರಿನ ವರುಣಾ ಕ್ಷೇತ್ರದಲ್ಲಿ ತಮ್ಮ ಪುತ್ರ…

ಡಾ.ಯತೀಂದ್ರಗೆ ಹೆಚ್ಚು ಅಂತರದ ಗೆಲುವು; ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ದುಪ್ಪಟ್ಟು ಕೃತಜ್ಞತೆ
ಮೈಸೂರು

ಡಾ.ಯತೀಂದ್ರಗೆ ಹೆಚ್ಚು ಅಂತರದ ಗೆಲುವು; ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ದುಪ್ಪಟ್ಟು ಕೃತಜ್ಞತೆ

June 13, 2018

ಮೈಸೂರು: ಶಾಸಕ ಡಾ.ಯತೀಂದ್ರ ಅವರನ್ನು ದೊಡ್ಡ ಬಹುಮತದಿಂದ ಆಯ್ಕೆ ಮಾಡಿರುವ ವರುಣಾ ಕ್ಷೇತ್ರದ ಮತದಾರರು ಮತ್ತು ಪಕ್ಷದ ಕಾರ್ಯಕರ್ತರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಇಂದಿಲ್ಲಿ ಕೃತಜ್ಞತೆ ಸಲ್ಲಿಸಿದರು. ನಿಮ್ಮೆಲ್ಲರ ಪರಿಶ್ರಮದಿಂದ ಈ ಅಭೂತಪೂರ್ವ ಗೆಲುವು ಸಾಧ್ಯವಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಬಹುಮತದಿಂದ ಆಯ್ಕೆಯಾಗಿರುವ ಅಖಂಡ ಶ್ರೀನಿವಾಸಮೂರ್ತಿ, ಡಿ.ಕೆ.ಶಿವಕುಮಾರ್ ಅವರೊಂದಿಗೆ ಡಾ.ಯತೀಂದ್ರ ಕೂಡ ಸೇರಿದ್ದಾರೆ. ಇದೇ ಕ್ಷೇತ್ರದಲ್ಲಿ ನನಗೆ 30 ಸಾವಿರ ಅಂತರದಲ್ಲಿ ಗೆಲುವು ನೀಡಿದ್ದ ಕ್ಷೇತ್ರದ ಮತದಾರರು ಡಾ.ಯತೀಂದ್ರಗೆ 2 ಪಟ್ಟು ಅಂದರೆ 58 ಸಾವಿರ ಅಂತರದಲ್ಲಿ…

1 1,552 1,553 1,554 1,555 1,556 1,611
Translate »