ಡಾ.ಯತೀಂದ್ರಗೆ ಹೆಚ್ಚು ಅಂತರದ ಗೆಲುವು; ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ದುಪ್ಪಟ್ಟು ಕೃತಜ್ಞತೆ
ಮೈಸೂರು

ಡಾ.ಯತೀಂದ್ರಗೆ ಹೆಚ್ಚು ಅಂತರದ ಗೆಲುವು; ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ದುಪ್ಪಟ್ಟು ಕೃತಜ್ಞತೆ

June 13, 2018

ಮೈಸೂರು: ಶಾಸಕ ಡಾ.ಯತೀಂದ್ರ ಅವರನ್ನು ದೊಡ್ಡ ಬಹುಮತದಿಂದ ಆಯ್ಕೆ ಮಾಡಿರುವ ವರುಣಾ ಕ್ಷೇತ್ರದ ಮತದಾರರು ಮತ್ತು ಪಕ್ಷದ ಕಾರ್ಯಕರ್ತರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಇಂದಿಲ್ಲಿ ಕೃತಜ್ಞತೆ ಸಲ್ಲಿಸಿದರು.

ನಿಮ್ಮೆಲ್ಲರ ಪರಿಶ್ರಮದಿಂದ ಈ ಅಭೂತಪೂರ್ವ ಗೆಲುವು ಸಾಧ್ಯವಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಬಹುಮತದಿಂದ ಆಯ್ಕೆಯಾಗಿರುವ ಅಖಂಡ ಶ್ರೀನಿವಾಸಮೂರ್ತಿ, ಡಿ.ಕೆ.ಶಿವಕುಮಾರ್ ಅವರೊಂದಿಗೆ ಡಾ.ಯತೀಂದ್ರ ಕೂಡ ಸೇರಿದ್ದಾರೆ. ಇದೇ ಕ್ಷೇತ್ರದಲ್ಲಿ ನನಗೆ 30 ಸಾವಿರ ಅಂತರದಲ್ಲಿ ಗೆಲುವು ನೀಡಿದ್ದ ಕ್ಷೇತ್ರದ ಮತದಾರರು ಡಾ.ಯತೀಂದ್ರಗೆ 2 ಪಟ್ಟು ಅಂದರೆ 58 ಸಾವಿರ ಅಂತರದಲ್ಲಿ ಗೆಲ್ಲಿಸಿದ್ದೀರಿ. ಇದಕ್ಕಾಗಿ ನಿಮಗೆ ದುಪ್ಪಟ್ಟು ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಕ್ಷೇತ್ರದ ಜನರ ಬಹಳಷ್ಟು ಋಣ ತೀರಿಸಬೇಕಾಗಿದೆ. ನನಗೆ ಮತ್ತು ಡಾ.ಯತೀಂದ್ರಗೆ ಆ ಜವಾಬ್ದಾರಿ ಇದೆ. ಖಂಡಿತ ಕ್ಷೇತ್ರದ ಜನರ ಋಣ ತೀರಿಸುವುದಾಗಿ ಭರವಸೆ ನೀಡಿದರು.

Translate »