ಸೆರೆ ಸಿಕ್ಕಿದ್ದ ಹುಲಿರಾಯ ಸಾವು ಕಾದಾಟದಲ್ಲಿ ತೀವ್ರ ಗಾಯಗೊಂಡಿತ್ತು
ಮೈಸೂರು

ಸೆರೆ ಸಿಕ್ಕಿದ್ದ ಹುಲಿರಾಯ ಸಾವು ಕಾದಾಟದಲ್ಲಿ ತೀವ್ರ ಗಾಯಗೊಂಡಿತ್ತು

June 13, 2018

ಮೈಸೂರು: ಬಂಡೀಪುರ ಅರಣ್ಯ ಪ್ರದೇಶದ ಹೆಡಿ ಯಾಲ ವಲಯದಲ್ಲಿ ಸೆರೆ ಹಿಡಿಯಲಾ ಗಿದ್ದ ಗಂಡು ಹುಲಿ ಇಂದು ಬೆಳಿಗ್ಗೆ ಮೈಸೂರಿನ ಹೊರವಲಯದ ಕೂರ್ಗಳ್ಳಿ ಯಲ್ಲಿರುವ ಮೈಸೂರು ಮೃಗಾಲಯದ ಪ್ರಾಣಿಗಳ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದೆ.

ಬಂಡೀಪುರ ಹುಲಿ ಯೋಜನೆಯ ಹೆಡಿಯಾಲ ವಲಯಕ್ಕೆ ಸೇರುವ ಕಾಳಿಕಟ್ಟೆ ಕೆರೆಯ ಬಳಿ ವೀರಭದ್ರಪ್ಪ ಎಂಬುವರ ಜಮೀನಿನಲ್ಲಿ ಜೂ.10ರಂದು ಬೆಳಿಗ್ಗೆ 11.30ರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿ ಯಾಗಿದ್ದರು. ಕಾಡಿನಲ್ಲಿ ಸರಹದ್ದಿಗಾಗಿ ಮತ್ತೊಂದು ಹುಲಿಯೊಂದಿಗೆ ಕಾದಾಡಿ ಗಂಭೀರವಾಗಿ ಗಾಯಗೊಂಡಿದ್ದ 9 ವರ್ಷದ ಗಂಡು ಹುಲಿ ಕಾಡಿನಿಂದ ಹೊರ ಬಂದು ಕಾಡಂಚಿನ ಗ್ರಾಮವಾದ ಹೆಚ್.ಡಿ.ಕೋಟೆ ತಾಲೂಕಿನ ಚಿಲಕಹಳ್ಳಿ ಗ್ರಾಮದ ಜಮೀ ನೊಂದರಲ್ಲಿ ಮೇಯುತ್ತಿದ್ದ ಹಸುವೊಂದರ ಮೇಲೆ ಜೂ.9ರಂದು ಮಧ್ಯಾಹ್ನ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು.

ಹುಲಿ ಪ್ರತ್ಯಕ್ಷವಾದ ಸುದ್ದಿ ತಿಳಿದು ಕಾರ್ಯಾ ಚರಣೆ ಆರಂಭಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಹಸುವಿನ ಮೇಲೆ ದಾಳಿ ಮಾಡಿದ್ದ ಸ್ಥಳದಿಂದ ಎರಡು ಕಿಮಿ ದೂರ ದಲ್ಲಿ ಭಾನುವಾರ ಬೆಳಿಗ್ಗೆ ಜಮೀನೊಂದ ರಲ್ಲಿ ಅಡಗಿ ಕುಳಿತಿರುವುದು ಕಂಡು ಬಂದಿತ್ತು. ಮತ್ತೊಂದು ಹುಲಿಯೊಂದಿಗೆ ಕಾದಾಟ ನಡೆಸಿದ್ದ ಪರಿಣಾಮವಾಗಿ ಸೆರೆ ಸಿಕ್ಕಿದ್ದ ಹುಲಿಯ ತಲೆ ಹಾಗೂ ದವಡೆಯ ಭಾಗಕ್ಕೆ ಗಂಭೀರವಾದ ಗಾಯಗಳಾಗಿತ್ತು. ಅಲ್ಲದೆ ದವಡೆಯ ಮೂಳೆಗಳು ಮುರಿ ದಿದ್ದವು. ಇದರಿಂದ ಬೇಟೆಯಾಡುವುದಕ್ಕೆ ಶಕ್ತಿಯಿಲ್ಲದೆ ಕಾಡಿನಿಂದ ಹೊರ ಬಂದು ಹಸುವಿನ ಮೇಲೆ ದಾಳಿ ನಡೆಸಿತ್ತು.

ಅರವಳಿಕೆ ಮದ್ದು ನೀಡಿ ಸೆರೆ ಹಿಡಿದ ನಂತರ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿ ಮೈಸೂರಿನ ಮೃಗಾಲಯಕ್ಕೆ ರವಾನಿ ಸಲಾಗಿತ್ತು. ಕೂರ್ಗಳ್ಳಿಯಲ್ಲಿರುವ ಮೃಗಾ ಲಯ ಪ್ರಾಣಿಗಳ ಪುನರ್ವಸತಿ ಕೇಂದ್ರ ದಲ್ಲಿ ಇದಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾ ಗದೆ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಹುಲಿ ಕಳೇಬರಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು.

Translate »