ಮತ್ತೊಂದು ತನಿಖಾ ಸಂಸ್ಥೆ ಸ್ಥಾಪನೆಗೆ ಸಿದ್ಧತೆ
ಮೈಸೂರು

ಮತ್ತೊಂದು ತನಿಖಾ ಸಂಸ್ಥೆ ಸ್ಥಾಪನೆಗೆ ಸಿದ್ಧತೆ

June 13, 2018

ಬೆಂಗಳೂರು: ಅಧಿಕಾರಿಗಳ ಭ್ರಷ್ಟಾಚಾರ ಹತ್ತಿಕ್ಕಲು ಲೋಕಾಯುಕ್ತ, ಎಸಿಬಿಗೆ ಪರ್ಯಾಯ ವಾಗಿ ಮತ್ತೊಂದು ತನಿಖಾ ಸಂಸ್ಥೆ ಸ್ಥಾಪಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ವಿಶ್ವದ ಮುಂದುವರೆದ ರಾಷ್ಟ್ರಗಳಲ್ಲಿ ಇರುವ ತನಿಖಾ ಸಂಸ್ಥೆಗಳನ್ನು ಮಾದರಿ ಯಾಗಿ ಇಟ್ಟುಕೊಂಡು ಒಂಬಡ್ಸ್‍ಮನ್ ಮಾದರಿಯಲ್ಲಿ ಸಂಸ್ಥೆ ಅಸ್ತಿತ್ವಕ್ಕೆ ಬರ ಲಿದೆ.

ಸರ್ಕಾರಿ ಮಟ್ಟದಲ್ಲಿರುವ ಆಯ್ದ 10 ಶುದ್ಧ ಹಸ್ತದ ಅಧಿಕಾರಿಗಳು ಈ ಸಂಸ್ಥೆಯ ಜವಾಬ್ದಾರಿ ಹೊರುತ್ತಾರೆ. ಕಾನೂನಾತ್ಮಕವಾಗಿ ಸಂಸ್ಥೆಗೆ ಬಲ ತುಂಬಲು ಮುಖ್ಯಮಂತ್ರಿ ಅವರು ನಿರ್ಧ ರಿಸಿದ್ದಾರೆ. ಇದಕ್ಕಾಗಿ ಒಂದು ಮಸೂದೆ ತರಲೂ ಸಿದ್ಧವಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸ್ವಾತಂತ್ರ್ಯ ಸೇನಾನಿ, ಗಾಂಧಿವಾದಿಗಳು ನೀಡಿರುವ ಸಲಹೆ-ಸೂಚನೆಯಂತೆ ಭ್ರಷ್ಟಾಚಾರ ನಿಗ್ರಹಕ್ಕೆ ಬಲಿಷ್ಠ ಸಂಸ್ಥೆಯೊಂದನ್ನು ಸ್ಥಾಪಿಸಲು ತೀರ್ಮಾ ನಿಸಿದ್ದಾರೆ. ಭ್ರಷ್ಟಾಚಾರ ಹತ್ತಿಕ್ಕು ವಲ್ಲಿ ಲೋಕಾಯುಕ್ತ ಹಲ್ಲು ಇಲ್ಲದ ಸಂಸ್ಥೆಯಾಗಿದೆ, ಇನ್ನು ಎಸಿಬಿ ಆಡಳಿತ ನಡೆಸುವ ಸರ್ಕಾರದ ಕೈಗೊಂಬೆ ಯಾಗಿ ಕುಳಿತಿದೆ. ಎಸಿಬಿ ರಚನೆ ನಂತರ ಕೆಲವು ರಾಜಕಾರಣಿಗಳ ವಿರುದ್ಧ ದುರುದ್ದೇಶ ಪೂರಕವಾಗಿ ಮೊಕದ್ದಮೆ ಹೂಡಿರುವುದು, ಕೆಲವು ನಿರ್ದಿಷ್ಟ ಅಧಿ ಕಾರಿಗಳ ಮೇಲೆ ದಾಳಿ ನಡೆಸಿ, ಬೆದರಿಕೆ ಯೊಡ್ಡಿದೆ. ಬಲೆಗೆ ಬಿದ್ದ ಅಧಿಕಾರಿ ಗಳನ್ನು ತಪ್ಪಿತಸ್ಥ ಎಂಬುದಾಗಿ ಸಾಬೀತು ಪಡಿಸುವಲ್ಲಿ ಬಹುತೇಕ ವಿಫಲವಾಗಿದೆ. ಇಂತಹ ಸಂಸ್ಥೆಗಳಿಂದ ಭ್ರಷ್ಟಾಚಾರವನ್ನು ಹತ್ತಿಕ್ಕುವುದಿರಲಿ, ಹತೋಟಿಗೆ ತರಲೂ ಸಾಧ್ಯವಿಲ್ಲ. ಜನರ ಮನಸ್ಸಿನಲ್ಲಿರುವ ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸಿ, ಮೈತ್ರಿ ಸರ್ಕಾರಕ್ಕೆ ಜನರಲ್ಲಿ ವಿಶ್ವಾಸ ಹುಟ್ಟಿಸಲು ಇಂತಹ ನಡೆಗೆ ಸರ್ಕಾರ ಮುಂದಾಗಿದೆ. ರಾಜಧಾನಿ ಕೇಂದ್ರ ಕಚೇರಿ ಆಗಿದ್ದು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಶಾಖೆಗಳ ಆರಂಭದ ಮೂಲಕ ಕ್ರಮೇಣವಾಗಿ ಎಸಿಬಿಯನ್ನು ನಿಷ್ಕ್ರಿಯಗೊಳಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಅಧಿಕಾರಿಗಳ ಭ್ರಷ್ಟಾ ಚಾರದಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಸಣ್ಣಪುಟ್ಟ ಸಮಸ್ಯೆ ಪರಿಹಾರಕ್ಕೂ ಮೊತ್ತ ನಿಗದಿಯಾಗಿರುತ್ತದೆ. ಗ್ರಾಮೀಣ ಜನತೆಯ ಸಣ್ಣ ಅರ್ಜಿ ವಿಲೇವಾರಿಗೂ ಸಾಲ-ಸೋಲ ಮಾಡಿ ಅಧಿಕಾರಿಗಳ ಜೇಬು ತುಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಲಂಚ ಕೇಳುವ ಅಧಿಕಾರಿ ಅಥವಾ ಕಚೇರಿಗಳಿಗೆ ಸಂಬಂಧಿಸಿದಂತೆ ಸಾರ್ವ ಜನಿಕರು ಸಂಸ್ಥೆಯಲ್ಲಿ ದೂರು ನೀಡಿದರೆ, ಆ ದೂರಿನ ಆಧಾರದ ಮೇಲೆ ಅಧಿಕಾರಿಗಳ ವಿರುದ್ಧ ತನಿಖೆ ನಡೆಯಲಿದೆ. ಕೇವಲ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಈ ಸಂಸ್ಥೆಯ ಮುಖ್ಯ ಗುರಿಯಾಗಿರುತ್ತದೆ ಎಂದು ಇದೇ ಮೂಲಗಳು ಹೇಳಿವೆ.

Translate »