ಮೈಸೂರು

ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಿದೆವು: ತನ್ವೀರ್ ಸೇಠ್
ಮೈಸೂರು

ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಿದೆವು: ತನ್ವೀರ್ ಸೇಠ್

June 14, 2018

ಮೈಸೂರು: ಇಂದು ನಡೆದ ಕಾಂಗ್ರೆಸ್ ಪಕ್ಷದ ಗೆದ್ದವರು ಮತ್ತು ಸೋತವರ ಸಭೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ್ದಾಗಲಿ ಅಥವಾ ಜಿಲ್ಲೆಯ ಯಾವುದೇ ಕ್ಷೇತ್ರದ ಬಗ್ಗೆ ಚರ್ಚೆ ಆಗಲಿಲ್ಲ. ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಹೇಗೆ ಸಜ್ಜುಗೊಳಿಸಬೇಕು ಎಂಬ ಬಗ್ಗೆ ಮಾತ್ರ ಚರ್ಚಿಸಿದ್ದಾಗಿ ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ತಿಳಿಸಿದರು. ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ನಂತರ ಫಲಿತಾಂಶ ಹೊರ ಬಂದ ಮೇಲೆ ಮೈಸೂರು ಜಿಲ್ಲೆಯ ನಮ್ಮ ಪಕ್ಷದಿಂದ ಗೆದ್ದಿರುವವರು, ಸೋತವರು ಒಂದು ಕಡೆ ಸೇರಿರಲಿಲ್ಲ. ಹೀಗಾಗಿ…

ಮೈಸೂರು ಸಿಲ್ಕ್ ಸೀರೆಗೆ ಅಧಿಕ ಬೇಡಿಕೆ: ನೂತನ ನೇಯ್ಗೆ ಘಟಕ ಸ್ಥಾಪನೆಗೆ ನಿರ್ಧಾರ
ಮೈಸೂರು

ಮೈಸೂರು ಸಿಲ್ಕ್ ಸೀರೆಗೆ ಅಧಿಕ ಬೇಡಿಕೆ: ನೂತನ ನೇಯ್ಗೆ ಘಟಕ ಸ್ಥಾಪನೆಗೆ ನಿರ್ಧಾರ

June 14, 2018

ಮೈಸೂರು: ಮೈಸೂರು ಸಿಲ್ಕ್ ಸೀರೆಗೆ ಹೆಚ್ಚಿನ ಬೇಡಿಕೆ ಇದ್ದು, ನೂತನ ನೇಯ್ಗೆ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ. ಮೈಸೂರು-ಮಾನಂದವಾಡಿ ರಸ್ತೆಯಲ್ಲಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತಕ್ಕೆ ಇಂದು ಭೇಟಿ ನೀಡಿ, ರೇಷ್ಮೆ ನೇಯ್ಗೆ ಘಟಕವನ್ನು ಪರಿಶೀಲಿಸಿದ ಬಳಿಕ ನಿಗಮದ ಶತಮಾನೋತ್ಸವ ಭವನದಲ್ಲಿ ಬುಧವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ರೇಷ್ಮೆಗೆ ದೇಶ ಹಾಗೂ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಮೈಸೂರಿನಲ್ಲಿರುವ ಕರ್ನಾಟಕ ರೇಷ್ಮೆ ಉದ್ಯಮಗಳ…

ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ  ಕೇಂದ್ರಕ್ಕೆ ತೆರಳಲಿರುವ ಸಿದ್ದರಾಮಯ್ಯ
ಮೈಸೂರು

ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ  ಕೇಂದ್ರಕ್ಕೆ ತೆರಳಲಿರುವ ಸಿದ್ದರಾಮಯ್ಯ

June 14, 2018

ಮೈಸೂರು:  ಮಾಜಿ ಮುಖ್ಯಮಂತ್ರಿ, ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಜೂ.16ರಂದು ದಾಖಲಾಗಲಿದ್ದಾರೆ. ಸಿದ್ದರಾಮಯ್ಯನವರು ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗುವ ಸುದ್ದಿ ತಿಳಿಯುತ್ತಿದ್ದಂತೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ದೂರವಾಣಿ ಮೂಲಕ ಸಿದ್ದರಾಮಯ್ಯರನ್ನು ಸಂಪರ್ಕಿಸಿ, ಮಾತುಕತೆ ನಡೆಸಿದರು. ಚುನಾವಣೆಯ ಬಳಿಕ ಚಿಕಿತ್ಸೆ ಪಡೆಯುವ ನಿರ್ಧಾರ ಮಾಡಿದ್ದೆ. ಈ ಹಿನ್ನೆಲೆಯಲ್ಲಿ ಬರುತ್ತಿದ್ದೇನೆ. 10ರಿಂದ 12 ದಿನಗಳ ಕಾಲ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗುತ್ತೇನೆಂದು ಸಿದ್ದರಾಮಯ್ಯ, ಹೆಗ್ಗಡೆಯವರಿಗೆ ತಿಳಿಸಿದರು. ಈ ಹಿಂದೆಯೂ ಹಲವಾರು…

ಮುಗಿಯುತ್ತಿರುವ ಸಾಲ ಮನ್ನಾ ಗಡುವು ಶೀಘ್ರ ನಿರ್ಧಾರ ಪ್ರಕಟಿಸಲು ರೈತಸಂಘ ಸಿಎಂಗೆ ಒತ್ತಾಯ
ಮೈಸೂರು

ಮುಗಿಯುತ್ತಿರುವ ಸಾಲ ಮನ್ನಾ ಗಡುವು ಶೀಘ್ರ ನಿರ್ಧಾರ ಪ್ರಕಟಿಸಲು ರೈತಸಂಘ ಸಿಎಂಗೆ ಒತ್ತಾಯ

June 14, 2018

ಮೈಸೂರು:  ರಾಜ್ಯ ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಕುರಿತು ತೆಗೆದುಕೊಂಡಿದ್ದ ಕಾಲಾವಕಾಶ ಮುಗಿಯುತ್ತಿದ್ದು, ಸರ್ಕಾರ ತಕ್ಷಣ ತನ್ನ ನಿಲುವನ್ನು ಪ್ರಕಟಿಸಬೇಕು ಎಂದು ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಪ್ರಧಾನ ಕಾರ್ಯ ದರ್ಶಿ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಲ ಮನ್ನಾ ಸಂಬಂಧ ಮುಖ್ಯಮಂತ್ರಿ ಕೇಳಿದ್ದ 15 ದಿನಗಳ ಕಾಲಾವಕಾಶ ಇನ್ನೆರಡು ದಿನಗಳಲ್ಲಿ ಮುಗಿಯಲಿದ್ದು, ಈ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲು ಇನ್ನೂ ಮೀನಾಮೇಷ ಎಣಿಸುತ್ತಿರುವುದನ್ನು ಗಮನಿಸಿದರೆ, ಇದು ಕೇವಲ…

ಮೈಸೂರಲ್ಲಿ ಬೃಹತ್ ಯೋಗ ಪ್ರದರ್ಶನಕ್ಕೆ ಸಹಕರಿಸುವಂತೆ ಪ್ರವಾಸೋದ್ಯಮ ಸಚಿವ  ಸಾರಾ ಮಹೇಶ್‍ಗೆ ಶಾಸಕ ರಾಮದಾಸ್ ಮನವಿ
ಮೈಸೂರು

ಮೈಸೂರಲ್ಲಿ ಬೃಹತ್ ಯೋಗ ಪ್ರದರ್ಶನಕ್ಕೆ ಸಹಕರಿಸುವಂತೆ ಪ್ರವಾಸೋದ್ಯಮ ಸಚಿವ  ಸಾರಾ ಮಹೇಶ್‍ಗೆ ಶಾಸಕ ರಾಮದಾಸ್ ಮನವಿ

June 14, 2018

ಮೈಸೂರು:  ಮೈಸೂರು ರೇಸ್‍ಕೋರ್ಸ್ ಆವರಣದಲ್ಲಿ ಜೂ. 21ರಂದು ನಡೆಯಲಿರುವ ವಿಶ್ವ ಯೋಗ ದಿನದ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಸಹಕಾರ ನೀಡಬೇಕೆಂದು ಶಾಸಕ ಎಸ್.ಎ.ರಾಮದಾಸ್ ಅವರು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರಿಗೆ ಮನವಿ ಸಲ್ಲಿಸಿದರು. ಮೈಸೂರಿನ ಡಿ.ಸುಬ್ಬಯ್ಯ ರಸ್ತೆಯ ಸೋನಾರ್ ಸ್ಟ್ರೀಟ್‍ನಲ್ಲಿರುವ ಸಚಿವ ಸಾ.ರಾ.ಮಹೇಶ್ ನಿವಾಸಕ್ಕೆ ಬುಧವಾರ ಯೋಗ ಸಮಿತಿಯ ಪದಾಧಿಕಾರಿಗಳು ಹಾಗೂ ಪ್ರವಾಸೋದ್ಯಮ ಟಾಸ್ಕ್‍ಫೋರ್ಸ್ ಸದಸ್ಯರೊಂದಿಗೆ ಭೇಟಿ ನೀಡಿದ ಶಾಸಕ ಎಸ್.ಎ.ರಾಮದಾಸ್ ಅವರು, ಸಚಿವರನ್ನು ಆತ್ಮೀಯವಾಗಿ ಅಭಿನಂದಿಸಿದರು. ಬಳಿಕ ಕುಶಲೋಪರಿ ವಿಚಾರಿಸಿದರು. ಈ ವೇಳೆ ಎಸ್.ಎ.ರಾಮದಾಸ್ ಮಾತನಾಡಿ,…

ಇಂದು ಸಿಐಐ ಅಧ್ಯಕ್ಷ ಡಾ.ಎನ್.ಮುತ್ತುಕುಮಾರ್‍ಗೆ ಅಭಿನಂದನೆ
ಮೈಸೂರು

ಇಂದು ಸಿಐಐ ಅಧ್ಯಕ್ಷ ಡಾ.ಎನ್.ಮುತ್ತುಕುಮಾರ್‍ಗೆ ಅಭಿನಂದನೆ

June 14, 2018

ಮೈಸೂರು:  ಮೊದಲ ಮೈಸೂರಿಗರಾಗಿ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಟಿ) ಕರ್ನಾಟಕ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೆ. ಆಟೋಮೋಟಿವ್ ಆಕ್ಸೆಲ್ಸ್ ಅಧ್ಯಕ್ಷರೂ ಹಾಗೂ ಪೂರ್ಣಾವಧಿ ನಿರ್ದೇಶಕರಾದ ಡಾ.ಎನ್.ಮುತ್ತುಕುಮಾರ್ ಅವರನ್ನು ನಾಳೆ (ಜೂ.14) ಮೈಸೂರಲ್ಲಿ ಅಭಿನಂದಿಸಲಾಗುವುದು. ಮೈಸೂರು ಕೈಗಾ ರಿಕೆಗಳ ಸಂಘದ ವತಿಯಿಂದ ಗುರುವಾರ ಬೆಳಿಗ್ಗೆ 10.30 ಗಂಟೆಗೆ ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಬಿ.ಎನ್.ಬಹದ್ದೂರ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸೈನ್ಸಸ್‍ನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಡಾ.ಎನ್.ಮುತ್ತುಕುಮಾರ್ ಅವರ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ. ಸಚಿವರಾದ ಜಿ.ಟಿ.ದೇವೇ ಗೌಡ ಅವರು ಡಾ.ಮುತ್ತುಕುಮಾರ್ ಅವರನ್ನು…

ಇನ್ನು ಮುಂದೆ ಬಾರ್, ವೈನ್‍ಸ್ಟೋರ್ ಲೈಸೆನ್ಸ್ ನೀಡಿಕೆ, ನವೀಕರಣ ಆನ್‍ಲೈನ್ ವ್ಯವಸ್ಥೆ
ಮೈಸೂರು

ಇನ್ನು ಮುಂದೆ ಬಾರ್, ವೈನ್‍ಸ್ಟೋರ್ ಲೈಸೆನ್ಸ್ ನೀಡಿಕೆ, ನವೀಕರಣ ಆನ್‍ಲೈನ್ ವ್ಯವಸ್ಥೆ

June 14, 2018

ಮೈಸೂರು: ಬಾರ್, ಲಿಕ್ಕರ್ ಶಾಪ್ ಮತ್ತು ವೈನ್ ಸ್ಟೋರ್‍ಗಳ ಪರವಾನಗಿ ನವೀಕರಣ ಹಾಗೂ ಹೊಸ ಲೈಸೆನ್ಸ್‍ಗೆ ಆನ್‍ಲೈನ್ ವ್ಯವಸ್ಥೆ ಮಾಡಲು ರಾಜ್ಯ ಅಬಕಾರಿ ಇಲಾಖೆ ಮುಂದಾಗಿದೆ. ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡುವಾಗ ಲಂಚ ಹಾಗೂ ಅಕ್ರಮಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಅಬಕಾರಿ ಇಲಾಖೆಯು, ಜುಲೈ ತಿಂಗಳಿಂದ ಆನ್‍ಲೈನ್ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಪ್ರಭಾರ ಮೈಸೂರು ವಿಭಾಗದ ಅಬಕಾರಿ ಉಪ ಆಯುಕ್ತ ಮಂಜುನಾಥ್ ಅವರು, ಆನ್‍ಲೈನ್ ವ್ಯವಸ್ಥೆ…

ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಸುಳಿವಿನ ಹಿನ್ನೆಲೆ: ಪ್ರೊ. ಮಹೇಶ್ ಚಂದ್ರ ಗುರು ಅವರಿಗೆ ಭದ್ರತೆ
ಮೈಸೂರು

ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಸುಳಿವಿನ ಹಿನ್ನೆಲೆ: ಪ್ರೊ. ಮಹೇಶ್ ಚಂದ್ರ ಗುರು ಅವರಿಗೆ ಭದ್ರತೆ

June 14, 2018

ಮೈಸೂರು: ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಚಿಂತಕ ಪ್ರೊ. ಕೆ.ಎಸ್.ಭಗವಾನ್ ಅವರಿಗೆ ವಿಶೇಷ ಭದ್ರತೆ ನೀಡಿ ರುವ ಬೆನ್ನಲ್ಲೇ ಪತ್ರಕರ್ತೆ ಗೌರಿ ಲಂಕೇಶ್ ಹಂತಕರು ಬಿಚ್ಚಿಟ್ಟ ಸುಳಿವಿನ ಹಿನ್ನೆಲೆಯಲ್ಲಿ ಇದೀಗ ವಿಚಾರವಾದಿ, ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಮಹೇಶ್ ಚಂದ್ರಗುರು ಅವರಿಗೂ ಓರ್ವ ಗನ್‍ಮ್ಯಾನ್ ಅನ್ನು ಒದಗಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಓರ್ವ ಗನ್‍ಮ್ಯಾನ್ ಅನ್ನು ನಿಯೋಜಿಸುವಂತೆ ಸರ್ಕಾರ ಸೂಚಿಸಿ ರುವ ಹಿನ್ನೆಲೆಯಲ್ಲಿ ಮೈಸೂರು ಪೊಲೀಸರು ಈ ಕ್ರಮ ವಹಿಸಿದ್ದು, ಈ ಕುರಿತು `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ನಗರ…

ಬೃಹತ್ ತೀರುವಳಿ ಮಾರಾಟ
ಮೈಸೂರು

ಬೃಹತ್ ತೀರುವಳಿ ಮಾರಾಟ

June 14, 2018

ಮೈಸೂರು:  ಬೇಸಿಗೆ ಕಾಲಕ್ಕೆ ತೆರೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಅರವಿಂದ್ ಲಿಮಿಟೆಡ್ ಸಂಸ್ಥೆಯ ಅನ್‍ಲಿಮಿಟೆಡ್ ಬೃಹತ್ ಮಾರಾಟವನ್ನು ಜೂನ್ 8 ರಿಂದ ಆರಂಭಿಸಿದೆ. ಈ ವರ್ಷದ ‘ತೀರುವಳಿ ಮಾರಾಟ’ ಭಾರೀ ಕೊಡುಗೆಯನ್ನು ಗ್ರಾಹಕರಿಗೆ ನೀಡುತ್ತಿದ್ದು, 3000 ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರು ಇದರ ಜೊತೆಗೆ ಇನ್ನೂ 3,000 ರೂಪಾಯಿಗಳ ಉತ್ಪನ್ನಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ಈ ಮೂಲಕ ಗ್ರಾಹಕರು ತಮ್ಮ ವಾರ್ಡ್‍ರೋಬ್‍ನಲ್ಲಿ ವೈವಿಧ್ಯ ಮಯ ಉಡುಪುಗಳು ಇರುವಂತೆ ನೋಡಿಕೊಳ್ಳಬಹುದಾಗಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ್ ಸಿಎಸ್ ಅವರು…

ಎ.ಹೆಚ್.ವಿಶ್ವನಾಥ್‍ರಿಗೆ ಸಚಿವ ಸ್ಥಾನ ನೀಡಲು ಆಗ್ರಹ
ಮೈಸೂರು

ಎ.ಹೆಚ್.ವಿಶ್ವನಾಥ್‍ರಿಗೆ ಸಚಿವ ಸ್ಥಾನ ನೀಡಲು ಆಗ್ರಹ

June 14, 2018

ಮೈಸೂರು: ಕರ್ನಾಟಕ ರಾಜ್ಯ ಭಾರತ ಮಾತ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಸಚಿವರೂ ಹಾಗೂ ಸಂಸದರಾದ ಅಡಗೂರು ಹೆಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಕಾರ್ಮಿಕರು ರಸ್ತೆಗಿಳಿದು ಹೋರಾಟ ಮಾಡಲು ಸಿದ್ಧವಿರುವುದಾಗಿ ಸಂಘದ ರಾಜ್ಯಾಧ್ಯಕ್ಷ ಜಿ. ಸಿದ್ದರಾಜು ಮನವಿ ಮಾಡಿದ್ದಾರೆ. ಉಚಿತ ತರಬೇತಿ ಮೈಸೂರು, ಜೂ. 13- ನಗರದ ನೇತಾಜಿ ಎಜುಕೇಷನ್ ಫೌಂಡೇಶನ್ ವತಿಯಿಂದ ಪೊಲೀಸ್ ಕಾನ್‍ಸ್ಟೇಬಲ್, ಪೊಲೀಸ್ ಸಬ್ ಇನ್ಸ್‍ಪೆಕ್ಟರ್, ರೈಲ್ವೆ ಕಾನ್‍ಸ್ಟೇಬಲ್, ಸಬ್ ಇನ್ಸ್‍ಪೆಕ್ಟರ್ ನೇಮಕಾತಿ…

1 1,550 1,551 1,552 1,553 1,554 1,611
Translate »