ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಸುಳಿವಿನ ಹಿನ್ನೆಲೆ: ಪ್ರೊ. ಮಹೇಶ್ ಚಂದ್ರ ಗುರು ಅವರಿಗೆ ಭದ್ರತೆ
ಮೈಸೂರು

ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಸುಳಿವಿನ ಹಿನ್ನೆಲೆ: ಪ್ರೊ. ಮಹೇಶ್ ಚಂದ್ರ ಗುರು ಅವರಿಗೆ ಭದ್ರತೆ

June 14, 2018

ಮೈಸೂರು: ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಚಿಂತಕ ಪ್ರೊ. ಕೆ.ಎಸ್.ಭಗವಾನ್ ಅವರಿಗೆ ವಿಶೇಷ ಭದ್ರತೆ ನೀಡಿ ರುವ ಬೆನ್ನಲ್ಲೇ ಪತ್ರಕರ್ತೆ ಗೌರಿ ಲಂಕೇಶ್ ಹಂತಕರು ಬಿಚ್ಚಿಟ್ಟ ಸುಳಿವಿನ ಹಿನ್ನೆಲೆಯಲ್ಲಿ ಇದೀಗ ವಿಚಾರವಾದಿ, ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಮಹೇಶ್ ಚಂದ್ರಗುರು ಅವರಿಗೂ ಓರ್ವ ಗನ್‍ಮ್ಯಾನ್ ಅನ್ನು ಒದಗಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಓರ್ವ ಗನ್‍ಮ್ಯಾನ್ ಅನ್ನು ನಿಯೋಜಿಸುವಂತೆ ಸರ್ಕಾರ ಸೂಚಿಸಿ ರುವ ಹಿನ್ನೆಲೆಯಲ್ಲಿ ಮೈಸೂರು ಪೊಲೀಸರು ಈ ಕ್ರಮ ವಹಿಸಿದ್ದು, ಈ ಕುರಿತು `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ನಗರ ಪೊಲೀಸ್ ಕಮೀಷ್ನರ್ ಡಾ.ಎ. ಸುಬ್ರಹ್ಮಣ್ಯೇಶ್ವರ ರಾವ್, ಪ್ರೊ.ಮಹೇಶ್ ಚಂದ್ರಗುರು ಅವರಿಗೆ ಭದ್ರತೆ ನೀಡಬೇಕೆಂಬ ಆದೇಶ 2017ರ ಸೆಪ್ಟೆಂಬರ್‍ನಿಂದಲೇ ಇದೆ, ನಮ್ಮವರು ಹೋಗುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಈಗ ಮತ್ತೆ ಭದ್ರತೆಗೆ ನಿಯೋಜಿಸಿರಬಹುದು ಎಂದರು.

Translate »