ಮೈಸೂರು: ಮೊದಲ ಮೈಸೂರಿಗರಾಗಿ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಟಿ) ಕರ್ನಾಟಕ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೆ. ಆಟೋಮೋಟಿವ್ ಆಕ್ಸೆಲ್ಸ್ ಅಧ್ಯಕ್ಷರೂ ಹಾಗೂ ಪೂರ್ಣಾವಧಿ ನಿರ್ದೇಶಕರಾದ ಡಾ.ಎನ್.ಮುತ್ತುಕುಮಾರ್ ಅವರನ್ನು ನಾಳೆ (ಜೂ.14) ಮೈಸೂರಲ್ಲಿ ಅಭಿನಂದಿಸಲಾಗುವುದು. ಮೈಸೂರು ಕೈಗಾ ರಿಕೆಗಳ ಸಂಘದ ವತಿಯಿಂದ ಗುರುವಾರ ಬೆಳಿಗ್ಗೆ 10.30 ಗಂಟೆಗೆ ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಬಿ.ಎನ್.ಬಹದ್ದೂರ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸೈನ್ಸಸ್‍ನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಡಾ.ಎನ್.ಮುತ್ತುಕುಮಾರ್ ಅವರ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ. ಸಚಿವರಾದ ಜಿ.ಟಿ.ದೇವೇ ಗೌಡ ಅವರು ಡಾ.ಮುತ್ತುಕುಮಾರ್ ಅವರನ್ನು ಅಭಿನಂದಿಸುವರು. `ಮೈಸೂರು ಮಿತ್ರ’ ಮತ್ತು `ಸ್ಟಾರ್ ಆಫ್ ಮೈಸೂರ್’ ಪತ್ರಿಕೆಗಳ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಮಾಜಿ ಶಾಸಕ ವಾಸು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಸಂಘದ ಉಪಾಧ್ಯಕ್ಷ ಉಮೇಶ್ ಕೆ.ಶೆಣೈ, ನಿಕಟಪೂರ್ವ ಅಧ್ಯಕ್ಷ ಪಿ.ವಿಶ್ವನಾಥ್, ಪ್ರಭಾರ ಕಾರ್ಯದರ್ಶಿ ಓ.ಡಿ.ಸತ್ಯೇಂದ್ರ, ಕಾರ್ಯದರ್ಶಿ ಸುರೇಶ್‍ಕುಮಾರ್ ಜೈನ್ ಹಾಗೂ ಖಜಾಂಚಿ ಮಂಜುನಾಥ್ ಅವರು ಸಮಾರಂಭದಲ್ಲಿ ಉಪಸ್ಥಿತರಿರುವರು.