ಮೈಸೂರು: ಕರ್ನಾಟಕ ರಾಜ್ಯ ಭಾರತ ಮಾತ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಸಚಿವರೂ ಹಾಗೂ ಸಂಸದರಾದ ಅಡಗೂರು ಹೆಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಕಾರ್ಮಿಕರು ರಸ್ತೆಗಿಳಿದು ಹೋರಾಟ ಮಾಡಲು ಸಿದ್ಧವಿರುವುದಾಗಿ ಸಂಘದ ರಾಜ್ಯಾಧ್ಯಕ್ಷ ಜಿ. ಸಿದ್ದರಾಜು ಮನವಿ ಮಾಡಿದ್ದಾರೆ.
ಉಚಿತ ತರಬೇತಿ
ಮೈಸೂರು, ಜೂ. 13- ನಗರದ ನೇತಾಜಿ ಎಜುಕೇಷನ್ ಫೌಂಡೇಶನ್ ವತಿಯಿಂದ ಪೊಲೀಸ್ ಕಾನ್‍ಸ್ಟೇಬಲ್, ಪೊಲೀಸ್ ಸಬ್ ಇನ್ಸ್‍ಪೆಕ್ಟರ್, ರೈಲ್ವೆ ಕಾನ್‍ಸ್ಟೇಬಲ್, ಸಬ್ ಇನ್ಸ್‍ಪೆಕ್ಟರ್ ನೇಮಕಾತಿ ಪ್ರವೇಶ ಪರೀಕ್ಷೆಗೆ ಉಚಿತ ತರಬೇತಿ ನಡೆಯಲಿದೆ. ಆಸಕ್ತರು ಕಚೇರಿಯಲ್ಲಿ ಬೆಳಿಗ್ಗೆ 10.30 ರಿಂದ ರಾತ್ರಿ 8.30 ರವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ. 9980639953, 8747973808 ಅನ್ನು ಸಂಪರ್ಕಿಸಬಹುದು.