ಬೆಂಗಳೂರು, ಆ. 21 (ಕೆಎಂಶಿ)- ಸಂಪುಟ ವಿಸ್ತರಣೆ ಬೆನ್ನಲ್ಲೇ ಎದ್ದಿರುವ ಶಾಸಕ ರಲ್ಲಿನ ಅಸಮಾಧಾನ, ಭಿನ್ನಮತ ಬಗೆಹರಿಸದಿದ್ದರೆ ವಿಧಾನಸಭೆಯ ಮಧ್ಯಂತರ ಚುನಾವಣೆಗೆ ಸಿದ್ಧರಾಗಿ ಎಂದು ಕೇಂದ್ರ ಬಿಜೆಪಿ ವರಿಷ್ಠರು ಪಕ್ಷದ ರಾಜ್ಯ ನಾಯಕರಿಗೆ ಖಡಕ್ಕಾಗಿ ಎಚ್ಚರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಆಗುವು ದನ್ನು ಸಹಿಸುವುದಿಲ್ಲ, ಇದನ್ನು ಸರಿಪಡಿಸು ವುದು ನಿಮ್ಮ ಹೊಣೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷ ಯಾರ ಹಂಗಿನಲ್ಲೂ ಇಲ್ಲ, ಅಧಿಕಾರ ಲಾಲಸೆಗೆ ಸರ್ಕಾರವನ್ನು ಬೀದಿಗೆ ತರು ವುದು ಬೇಡ, ಅತೃಪ್ತರು ಇದೇ ಧಾಟಿ ಮುಂದುವರಿಸುವುದಾದರೆ ಚುನಾವಣೆ ಎದುರಿಸಿ, ಕರ್ನಾಟಕದಲ್ಲಿ ಪಕ್ಷಕ್ಕೆ ಒಳ್ಳೆಯ ನೆಲೆ ಇದೆ, ತಕ್ಷಣಕ್ಕೆ ಚುನಾವಣೆ ನಡೆದರೂ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಪಕ್ಷ ಮತ್ತು ಸಂಘಟನೆಗೆ ದುಡಿ ದವರನ್ನು ಗುರುತಿಸಿ ಶಾಸಕರನ್ನಾಗಿ ಮಾಡೋಣ. ಅಂತಹವರಿಂದ ಸುಭದ್ರ ಸರ್ಕಾರ ನೀಡಬಹುದು ಎಂದು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸಂದೇಶ ರವಾನಿಸಿದ್ದಾರೆ. ಎಲ್ಲಾ ಅರ್ಹತೆ ಇದ್ದರೂ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿ ರುವ ಶಾಸಕರನ್ನು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಸಂಪರ್ಕಿಸಿ, ಮನವೊಲಿಸುವ ಕಾರ್ಯದಲ್ಲಿ ತೊಡಗಿ ದ್ದಾರೆ. ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗದ ಹಿರಿಯ ಶಾಸಕರಾದ ಉಮೇಶ್ ಕತ್ತಿ, ಅಭಯ ಪಾಟೀಲ್, ಬಾಲಚಂದ್ರ ಜಾರಕಿಹೊಳಿ, ಜಿ.ಹೆಚ್.ತಿಪ್ಪಾರೆಡ್ಡಿ, ಮಾಡಾಳ್ ವಿರೂಪಾಕ್ಷಪ್ಪ, ಪೂರ್ಣಿಮಾ, ಹಾಲಾಡಿ ಶ್ರೀನಿವಾಸಶೆಟ್ಟಿ, ಮುರುಗೇಶ್ ನಿರಾಣಿ, ಎಂ.ಪಿ.ರೇಣುಕಾಚಾರ್ಯ, ಗೂಳಿಹಟ್ಟಿ ಶೇಖರ್ ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇವರಲ್ಲಿ ಕೆಲವರು ತಮ್ಮ
ಅಸಮಾಧಾನವೇನಿದ್ದರೂ ಪಕ್ಷದ ಚೌಕಟ್ಟಿನಲ್ಲಿ ಅಭಿಪ್ರಾಯ ಹೇಳುವುದಕ್ಕೆ ಸೀಮಿತವೇ ಹೊರತು ಬಂಡಾಯವೇಳುವ ಲಕ್ಷಣವಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಇದರ ನಡುವೆ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣಕರ್ತರಾದ ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಅನರ್ಹಗೊಂಡಿರುವ ಶಾಸಕರು ನಿನ್ನೆ ರಾತ್ರಿ ಸಭೆ ನಡೆಸಿ, ತಮಗಾಗಿರುವ ನೋವನ್ನು ಮುಖ್ಯಮಂತ್ರಿ ಅವರ ಪುತ್ರ ವಿಜಯೇಂದ್ರ ಅವರ ಬಳಿ ತೋಡಿಕೊಂಡಿದ್ದಾರೆ. ಸಂಪುಟ ವಿಸ್ತರಣೆ ಯಾಗಿದೆ, ಬೆಂಗಳೂರು ನಗರಕ್ಕೆ ನಾಲ್ಕು ಸಚಿವ ಸ್ಥಾನ ನೀಡಿದ್ದೀರಿ, ಇನ್ನೂ ನಾವು ನಾಲ್ಕು ಮಂದಿ ಇದ್ದೇವೆ, ನಮಗೆ ಅವ ಕಾಶ ದೊರೆಯುತ್ತದೆಯೇ?
ಅನರ್ಹತೆಗೆ ಸಂಬಂಧಿಸಿದಂತೆ ನ್ಯಾಯಾ ಲಯದಿಂದ ತೀರ್ಪು ಬಂದಿಲ್ಲ, ರಾಜೀ ನಾಮೆ ನೀಡಿದ 15 ದಿನದಲ್ಲೇ ಮತ್ತೆ ನಮ್ಮನ್ನು ಶಾಸಕರನ್ನಾಗಿ ಉಳಿಸುತ್ತೇವೆ ಎಂದು ನೀವು ಅಂದು ಭರವಸೆ ನೀಡಿದ್ದಿರಿ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುತ್ತದೆ, ಖ್ಯಾತ ವಕೀಲರ ಮೂಲಕ ನ್ಯಾಯಾಲಯದಲ್ಲಿನ ನಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿ ಮಂತ್ರಿ ಗಳನ್ನಾಗಿ ಮಾಡುತ್ತೀವಿ ಎಂದು ಹೇಳಿದ್ದಿರಿ. ಎರಡು ವಾರ ಕಳೆದು ತಿಂಗಳಾಗುತ್ತಾ ಬರುತ್ತಿದೆ, ಆದರೂ ನಮ್ಮನ್ನು ಕೇಳುವವ ರಿಲ್ಲ, ಅತಂತ್ರ ಸ್ಥಿತಿಯಲ್ಲಿದ್ದೇವೆ, ನಮಗೆ ಸ್ಪಷ್ಟ ಭರವಸೆ ನೀಡಿ ಎಂದು ಪಟ್ಟು ಹಿಡಿ ದರು. ನಮಗೆ ಈ ಹಿಂದೆ ನೀಡಿದ ವಚನ ದಂತೆ ನಮ್ಮ ಹಿತ ರಕ್ಷಣೆ ಮಾಡಿ, ನಾವು ಮಂತ್ರಿಗಳಾಗಲು ಅವಕಾಶ ಮಾಡಿಕೊಡಿ. ಒಂದು ವೇಳೆ ಈ ವಚನ ಪಾಲನೆ ಮಾಡ ದಿದ್ದರೆ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಬಗ್ಗೆ ಅಪನಂಬಿಕೆ ಬೆಳೆಯುತ್ತದೆ. ನಂಬಿದವರಿಗೆ ಕೈ ಕೊಡುವುದು ಬಿಜೆಪಿಯ ಗುಣ ಎಂಬುದು ಜಗಜ್ಜಾಹೀರಾದರೆ ಕರ್ನಾಟಕ ಮಾತ್ರವಲ್ಲ,ದೇಶದ ಎಲ್ಲ ರಾಜ್ಯಗಳ ಮೇಲೆ ಅದರ ಪ್ರಭಾವ ಬೀಳುತ್ತದೆ ಎಂಬುದು ಅನರ್ಹಗೊಂಡ ಶಾಸಕರನೇಕರ ಎಚ್ಚರಿ ಕೆಯ ನುಡಿ ಎನ್ನಲಾಗಿದೆ. ನಿಮ್ಮನ್ನು ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಭರವಸೆ ನೀಡಿದ ವಿಜಯೇಂದ್ರ, ಅನರ್ಹಗೊಂಡ ಶಾಸಕರಲ್ಲಿ ಕೆಲವರನ್ನು ದೆಹಲಿ ವರಿಷ್ಠರು ಹಾಗೂ ವಕೀಲರ ಭೇಟಿಗೆ ಕಳುಹಿಸಿದ್ದಾರೆ.