ಮೈಸೂರು: ಮೈಸೂರಿನ ಶ್ರೀರಾಂಪುರ ಮತ್ತು ರಾಮಕೃಷ್ಣನಗರ ಪ್ರದೇಶಗಳಿಗೆ ಹೊಂದಿಕೊಂಡಂತಿರುವ ಲಿಂಗಾಂಬುದಿ ಕೆರೆಗೆ ಕಲುಷಿತ ನೀರು ಸೇರುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲ ದಿನಗಳಿಂದ ಒಳಚರಂಡಿ ನೀರು ಸೋರಿಕೆಯಾಗಿ ಕೆರೆಗೆ ಹರಿಯುತ್ತಿರುವುದರಿಂದ ನೀರು ಕಲುಷಿತಗೊಂಡು ದುರ್ವಾಸನೆ ಸೂಸುವಂತಾಗಿತ್ತು. ನಿತ್ಯ ಕೆರೆ ಆವರಣದಲ್ಲಿ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರು ಹಾಗೂ ಸುತ್ತಮುತ್ತಲ ಬಡಾವಣೆಗಳ ನಿವಾಸಿಗಳು ಕಲುಷಿತ ನೀರಿನ ದುರ್ವಾಸನೆಯಿಂದ ಕಿರಿಕಿರಿ ಅನುಭವಿಸುವಂತೆಯೂ ಆಗಿತ್ತು. ಈ ಹಿನ್ನೆಲೆಯಲ್ಲಿ…
ಮೈಸೂರಲ್ಲಿ ವಿಶೇಷ ಜನ ಜಾಗೃತಿ
June 12, 2018ದಯವಿಟ್ಟು ವಾಹನ ಚಾಲನೆ ವೇಳೆ ಮೊಬೈಲ್ ಬಳಸಬೇಡಿ… ನೀವು ಮಾಡುವ ತಪ್ಪಿಗೆ ಇತರರ ಬಲಿ ಪಡೆಯಬೇಡಿ… ಮೈಸೂರು: ಮೈಸೂರಿನ ಗಂಧದಗುಡಿ ಫೌಂಡೇಷನ್ ಕಾರ್ಯಕರ್ತರು ಮೊಬೈಲ್‍ನಲ್ಲಿ ಮಾತನಾಡುತ್ತಾ ಬೈಕ್, ಕಾರು ಇನ್ನಿತರ ವಾಹನ ಚಾಲನೆಯಿಂದ ಆಗುವ ಅನಾಹುತಗಳ ಕುರಿತು ಸೋಮವಾರ ಮೈಸೂರಿನ ಕೆ.ಆರ್.ವೃತ್ತದಲ್ಲಿ ಜನಜಾಗೃತಿ ಮೂಡಿಸಿದರು. ಗಂಧದಗುಡಿ ಫೌಂಡೇಷನ್‍ನ ಅಧ್ಯಕ್ಷ ಎನ್.ಎಲ್.ಮೋಹನ್‍ಕುಮಾರ್ ನೇತೃತ್ವದಲ್ಲಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕೆ.ಅರ್.ವೃತ್ತದ ನಾಲ್ಕು ಕಡೆಗಳಲ್ಲಿ ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಸಿ ತಾವು ಅಪಘಾತಕ್ಕೀಡಾಗಿ ಪಾದಚಾರಿಗಳು ಮತ್ತು ಇನ್ನಿತರರಿಗೂ ವಾಹನ ಗುದ್ದಿಸಿ…
ಗಂಗೋತ್ರಿ ಪಬ್ಲಿಕ್ ಶಾಲೆ, ಕಾಲೇಜು ಮಂತ್ರಿಮಂಡಲ ಪದಗ್ರಹಣ
June 12, 2018ಮೈಸೂರು: ನಗರದ ಬೋಗಾದಿ ಮುಖ್ಯರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಮಂತ್ರಿಮಂಡಲದ ರಚನೆ ಹಾಗು ಪದಗ್ರಹಣ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.ಶಾಲಾ ಸಂಸ್ಥಾಪಕ ಟಿ.ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಮಂತ್ರಿ ಮಂಡಲದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಂತ್ರಿಮಂಡಲದಲ್ಲಿ ಮಂತ್ರಿಗಳು ಹಾಗೂ ನಾಯಕರುಗಳಿಗೆ ಗುರುತರವಾದ ಜವಾಬ್ದಾರಿ ಇರುತ್ತದೆ. ವಿದ್ಯಾರ್ಥಿಗಳು ಇದನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು. ಪ್ರಾಂಶುಪಾಲರಾದ ಶ್ರೀಧರ್‍ರವರು ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜರೀನಾ ಬಾಬುಲ್ ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳಿಂದ ನೆರವೇರಿಸಿದರು. ಯು.ಮೌನ ಮುಖ್ಯಮಂತ್ರಿಯಾಗಿ,…
ರಾಷ್ಟ್ರ ಪ್ರಶಸ್ತಿ ಅರ್ಜಿ ಆಹ್ವಾನ
June 12, 2018ಮೈಸೂರು: ಭಾರತ ಸರ್ಕಾರವು ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ 10 ವರ್ಷಕ್ಕಿಂತ ಹೆಚ್ಚಿನ ಸೇವೆಯನ್ನು ಸಲ್ಲಿಸಿ ರುವಂತಹ ವ್ಯಕ್ತಿಗಳನ್ನು ಗುರುತಿಸಿ 2018ನೇ ಸಾಲಿಗೆ ರಾಜೀವ್‍ಗಾಂಧಿ ಮಾನವ ಸೇವಾ ಪ್ರಶಸ್ತಿಯನ್ನು 3 ವ್ಯಕ್ತಿಗಳಿಗೆ ನೀಡಿ ಗೌರವಿಸಲು ಅರ್ಜಿ ಆಹ್ವಾನಿಸಿದೆ. ಅದೇ ರೀತಿಯಲ್ಲಿ 2018ನೇ ಸಾಲಿಗೆ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಹಲವು ವರ್ಷ ಉತ್ತಮ ಸೇವೆ ಸಲ್ಲಿಸಿದ 3 ವ್ಯಕ್ತಿಗಳು ಹಾಗೂ 5 ಸಂಸ್ಥೆಗಳ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರವು…
ರೈಟ್ ಬ್ರೈನ್ ಯೂಸೇಜ್ ಕುರಿತು ಉಪನ್ಯಾಸ
June 12, 2018ಮೈಸೂರು: ಮೈಸೂರಿನ ಚೈತನ್ಯ ಮೆಡಿಟೇಷನ್ ಸೆಂಟರ್‍ನಲ್ಲಿ ಜೂನ್ 16 ರಂದು ಮಧ್ಯಾಹ್ನ 2ರಿಂದ 6 ರವರೆಗೆ ರೈಟ್ ಬ್ರೈನ್ ಯೂಸೇಜ್ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಡಾ.ಸಿ.ಎಸ್.ಕೃಷ್ಣಮೂರ್ತಿ, ಮೊ. 9448683202, 9591903098 ಅನ್ನು ಸಂಪರ್ಕಿಸಬಹುದು.
ಮೈತ್ರಿ ಸರ್ಕಾರದಲ್ಲಿ ನಾಯಕ ಸಮುದಾಯದ ಒಬ್ಬರಿಗೇ ಸಚಿವ ಸ್ಥಾನ: ಮುಖಂಡರ ಆಕ್ರೋಶ
June 12, 2018ಮೈಸೂರು: ಇತ್ತೀಚಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಆಯ್ಕೆಯಾಗಿರುವ ನಾಯಕ ಜನಾಂಗದ 17 ಶಾಸಕರ ಪೈಕಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಜೆಡಿಎಸ್‍ನ -1, ಕಾಂಗ್ರೆಸ್‍ನ -9 ಹಾಗೂ ವಿಧಾನಪರಿಷತ್‍ನ ಒಬ್ಬ ಸದಸ್ಯರು ಸೇರಿದಂತೆ ಒಟ್ಟು 11 ಮಂದಿ ಶಾಸಕರಿದ್ದಾರೆ. ಹೀಗಿದ್ದರೂ ಸಮ್ಮಿಶ್ರ ಸರ್ಕಾರದಲ್ಲಿ ನಾಯಕ ಸಮುದಾಯದ ಕೇವಲ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡುವ ಮೂಲಕ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ನಾಯಕ ಜನಾಂಗದ ಮುಖಂಡ ದ್ಯಾವಪ್ಪ ನಾಯಕ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸಮ್ಮಿಶ್ರ ಸರ್ಕಾರದಲ್ಲಿ ನಾಯಕ ಸಮುದಾಯದ…
ಮದುವೆಯಾಗುವುದಾಗಿ ನಂಬಿಸಿ ಯುವತಿ ಹತ್ಯೆಗೈದು ಚಿನ್ನಾಭರಣ, ನಗದು ದೋಚಿದ್ದ ಇಬ್ಬರಿಗೆ ಜೀವಾವಧಿ ಶಿಕ್ಷೆ
June 12, 2018ಮೈಸೂರು: ಮದುವೆಯಾವುಗುದಾಗಿ ನಂಬಿಸಿ ಗುಂಡ್ಲುಪೇಟೆಯಿಂದ ಕರೆತಂದು ನಂಜನಗೂಡು ಬಳಿ ಯುವತಿಯನ್ನು ಬರ್ಬರವಾಗಿ ಹತ್ಯೆಗೈದು 50,000 ರೂ. ನಗದು ಹಾಗೂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳಿಗೆ ಮೈಸೂರು ನ್ಯಾಯಾಲಯವು ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ. ಗುಂಡ್ಲುಪೇಟೆ ತಾಲೂಕು, ಬೇಗೂರು ಹೋಬಳಿ ರಂಗನಾಥಪುರ ನಿವಾಸಿಗಳಾದ ಸ್ವಾಮಿ ಮತ್ತು ಶಂಕರ, ಜೀವಾವಧಿ ಶಿಕ್ಷೆಗೊಳಗಾಗಿ ಜೈಲು ಪಾಲಾದ ಹತ್ಯೆ ಆರೋಪಿಗಳು.ಸ್ವಾಮಿ, ರಂಗನಾಥಪುರದ ಪುಟ್ಟಮ್ಮಣ ಎಂಬುವರನ್ನು ಪ್ರೀತಿಸುವ ನಾಟಕವಾಡಿದ್ದಲ್ಲದೆ, ಮದುವೆಯಾಗುವುದಾಗಿ ನಂಬಿಸಿದ್ದ. ಆತನ ಗುಣ, ನಡವಳಿಕೆ ತಿಳಿದಿದ್ದ ಆಕೆಯ ತಾಯಿ ಮತ್ತು ಅಣ್ಣ ಅದಕ್ಕೆ…
ಬುರ್ಖಾಧಾರಿ ಮಹಿಳೆಯರಿಂದ 2 ರೇಷ್ಮೆ ಸೀರೆ ಕಳವು
June 12, 2018ಮೈಸೂರು: ಅಪರಿಚಿತ ಬುರ್ಖಾ ಧಾರಿ ಮಹಿಳೆಯರಿಬ್ಬರು ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿನ ಮಳಿಗೆಗೆ ರೇಷ್ಮೆ ಸೀರೆ ವ್ಯಾಪಾರ ಮಾಡುವ ಸೋಗಿನಲ್ಲಿ ಬಂದು, ಅಲ್ಲಿನ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಬೆಲೆ ಬಾಳುವ 2 ರೇಷ್ಮೆ ಸೀರೆಗಳನ್ನು ಕದ್ದು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೂ.10ರಂದು ಮಳಿಗೆ ಯಲ್ಲಿ ಸೀರೆಗಳ ಮಾರಾಟದ ಅವಧಿ ಮುಗಿದ ನಂತರ ಪ್ರತಿದಿನ ಎಂದಿನಂತೆ ಮಳಿಗೆಯಲ್ಲಿನ ಸೀರೆಗಳ ಲೆಕ್ಕ ಮಾಡಿ ದಾಗ 49 ಸಾವಿರ ರೂ. ಬೆಲೆಬಾಳುವ 2 ಸೀರೆಗಳು ಕಡಿಮೆ ಬಂದಿವೆ. ಇದನ್ನು…
ಇಂದು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
June 12, 2018ಮೈಸೂರು: ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ, ಜಿಲ್ಲಾ ಬಾಲಾಕಾರ್ಮಿಕ ಯೋಜನಾ ಸೊಸೈಟಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾ ಚರಣೆಯನ್ನು ಜೂ.12ರಂದು ಬೆಳಿಗ್ಗೆ 10 ಗಂಟೆಗೆ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿ ಯರ್ಸ್ ಸಭಾಂಗಣದಲ್ಲಿ ಆಚರಿಸಲಾಗುವುದು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ. ವಂಟಿಗೊಡಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್…
ಸೈಕಲ್ ಅಗರಬತ್ತಿ ಪ್ಯಾಕೇಜಿಂಗ್ ಗೋದಾಮಿನಲ್ಲಿ ಭಾರೀ ಬೆಂಕಿ
June 11, 2018ಸುಮಾರು 1 ಕೋಟಿ ರೂ. ಮೌಲ್ಯದ ಪೇಪರ್ ವಸ್ತು ನಾಶ 12 ಅಗ್ನಿಶಾಮಕ ದಳದ ವಾಹನ, 50 ಮಂದಿಯಿಂದ ಸತತ 8 ತಾಸು ಕಾರ್ಯಾಚರಣೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಘಟನೆಗೆ ಕಾರಣ ಮೈಸೂರು: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಉಂಟಾದ ಭಾರೀ ಬೆಂಕಿಗೆ ಅಗರಬತ್ತಿ ಪ್ಯಾಕೇಜಿಂಗ್ ಗೋದಾಮಿನ ಸುಮಾರು ಒಂದು ಕೋಟಿ ರೂ. ಮೌಲ್ಯದ ಪೇಪರ್ ವಸ್ತುಗಳು ಭಸ್ಮವಾಗಿರುವ ಘಟನೆ ಮೈಸೂರಿನ ಅಶೋಕಪುರಂ ರೈಲ್ವೆ ಸ್ಟೇಷನ್ ಬಳಿ ಇಂದು ಮುಂಜಾನೆ ಸಂಭವಿಸಿದೆ. ಹಳೇ ಮಾನಂದವಾಡಿ ರಸ್ತೆಯ ಎನ್‍ಆರ್ ಗ್ರೂಪ್‍ಗೆ…