ಬುರ್ಖಾಧಾರಿ ಮಹಿಳೆಯರಿಂದ 2 ರೇಷ್ಮೆ ಸೀರೆ ಕಳವು
ಮೈಸೂರು

ಬುರ್ಖಾಧಾರಿ ಮಹಿಳೆಯರಿಂದ 2 ರೇಷ್ಮೆ ಸೀರೆ ಕಳವು

June 12, 2018

ಮೈಸೂರು: ಅಪರಿಚಿತ ಬುರ್ಖಾ ಧಾರಿ ಮಹಿಳೆಯರಿಬ್ಬರು ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿನ ಮಳಿಗೆಗೆ ರೇಷ್ಮೆ ಸೀರೆ ವ್ಯಾಪಾರ ಮಾಡುವ ಸೋಗಿನಲ್ಲಿ ಬಂದು, ಅಲ್ಲಿನ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಬೆಲೆ ಬಾಳುವ 2 ರೇಷ್ಮೆ ಸೀರೆಗಳನ್ನು ಕದ್ದು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೂ.10ರಂದು ಮಳಿಗೆ ಯಲ್ಲಿ ಸೀರೆಗಳ ಮಾರಾಟದ ಅವಧಿ ಮುಗಿದ ನಂತರ ಪ್ರತಿದಿನ ಎಂದಿನಂತೆ ಮಳಿಗೆಯಲ್ಲಿನ ಸೀರೆಗಳ ಲೆಕ್ಕ ಮಾಡಿ ದಾಗ 49 ಸಾವಿರ ರೂ. ಬೆಲೆಬಾಳುವ 2 ಸೀರೆಗಳು ಕಡಿಮೆ ಬಂದಿವೆ. ಇದನ್ನು ಸಿಸಿಟಿವಿಯನ್ನು ಪರಿಶೀಲನೆ ಮಾಡಿ ದಾಗ, ಜೂ.7 ರಂದು ಬುರ್ಖಾಧಾರಿ ಮಹಿಳೆಯರಿಬ್ಬರು ವ್ಯಾಪಾರದ ಸೋಗಿನಲ್ಲಿ ಬಂದು ತರಾ ವರಿ ಸೀರೆಗಳನ್ನು ಪರೀಕ್ಷಿಸಿದ್ದಾರೆ. ನಂತರ ತಮಗಿಷ್ಟವಾದ 2 ಸೀರೆಗಳನ್ನು, ಇಲ್ಲಿನ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಕದ್ದು ಪರಾರಿ ಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯ ಗಳ ಆಧಾರ ಮೇಲೆ ಇಲ್ಲಿನ ಸಿಬ್ಬಂದಿ ಆರ್.ಮೋಹನ್ ಕುಮಾರ್, ವಿದ್ಯಾರಣ್ಯಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Translate »