ಮೈತ್ರಿ ಸರ್ಕಾರದಲ್ಲಿ ನಾಯಕ ಸಮುದಾಯದ  ಒಬ್ಬರಿಗೇ ಸಚಿವ ಸ್ಥಾನ: ಮುಖಂಡರ ಆಕ್ರೋಶ
ಮೈಸೂರು

ಮೈತ್ರಿ ಸರ್ಕಾರದಲ್ಲಿ ನಾಯಕ ಸಮುದಾಯದ  ಒಬ್ಬರಿಗೇ ಸಚಿವ ಸ್ಥಾನ: ಮುಖಂಡರ ಆಕ್ರೋಶ

June 12, 2018

ಮೈಸೂರು: ಇತ್ತೀಚಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಆಯ್ಕೆಯಾಗಿರುವ ನಾಯಕ ಜನಾಂಗದ 17 ಶಾಸಕರ ಪೈಕಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಜೆಡಿಎಸ್‍ನ -1, ಕಾಂಗ್ರೆಸ್‍ನ -9 ಹಾಗೂ ವಿಧಾನಪರಿಷತ್‍ನ ಒಬ್ಬ ಸದಸ್ಯರು ಸೇರಿದಂತೆ ಒಟ್ಟು 11 ಮಂದಿ ಶಾಸಕರಿದ್ದಾರೆ. ಹೀಗಿದ್ದರೂ ಸಮ್ಮಿಶ್ರ ಸರ್ಕಾರದಲ್ಲಿ ನಾಯಕ ಸಮುದಾಯದ ಕೇವಲ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡುವ ಮೂಲಕ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ನಾಯಕ ಜನಾಂಗದ ಮುಖಂಡ ದ್ಯಾವಪ್ಪ ನಾಯಕ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ನಾಯಕ ಸಮುದಾಯದ ಕನಿಷ್ಟ ಇಬ್ಬರಿಗಾ ದರೂ ಸಚಿವ ಸ್ಥಾನ ನೀಡಬೇಕಿತ್ತು. ಇನ್ನಾದರೂ ಆಗಿರುವ ಅನ್ಯಾಯವನ್ನು ಸರಿ ಪಡಿಸಬೇಕು ಎಂದು ಮುಖ್ಯಮಂತ್ರಿ ಮತ್ತು ಕಾಂಗ್ರ್ರೆಸ್ ಹೈಕಮಾಂಡ್‍ಗೆ ಒತ್ತಾಯ ಮಾಡಿದರು. ಅನ್ಯಾಯ ಸರಿಪಡಿಸದಿದ್ದರೆ ರಾಜನಹಳ್ಳಿ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀರಾಂಪುರ ಗ್ರಾಪಂ ಅಧ್ಯಕ್ಷೆ ಚೂಡಾ ಮಣ , ಜನಾಂಗದ ಮುಖಂಡರಾದ ಪ್ರಭಾಕರ್ ಹುಣಸೂರು, ರಘು ಯಡಕೊಳ, ಕೆ.ಎಸ್.ಗಣೇಶ್, ಶಿವಕುಮಾರ್ ಉಪಸ್ಥಿತರಿದ್ದರು.

Translate »