ಮನೆಗೆ ಬಸ್ ನುಗ್ಗಿ ಹಾನಿ
ಹಾಸನ

ಮನೆಗೆ ಬಸ್ ನುಗ್ಗಿ ಹಾನಿ

June 12, 2018

ಹೊಳೆನರಸೀಪುರ: ಸಾರಿಗೆ ಬಸ್ಸೊಂದು ರಸ್ತೆಬದಿ ಮನೆಯ ಬಾಳೆ ಮಂಡಿಗೆ ನುಗ್ಗಿರುವ ಘಟನೆ ಸಂಭವಿಸಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅರಕಲಗೂಡು ಡಿಪೋಗೆ ಸೇರಿದ ಬಸ್(ಕೆಎ13 ಎಫ್ 2160) ಬೆಳಿಗ್ಗೆ ಹಾಸನ ದಿಂದ ಪಟ್ಟಣ ಮಾರ್ಗವಾಗಿ ಮೈಸೂರಿಗೆ ತೆರಳುವಾಗ ಪಟ್ಟಣದ ಬಿಹೆಚ್ ರಸ್ತೆಯಲ್ಲಿ ತಾಂತ್ರಿಕ ದೋಷದಿಂದ ಹಳ್ಳಕ್ಕೆ ಇಳಿದಿದೆ. ಇದರಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸಿ ನಂತರ ರಸ್ತೆಬದಿ ನಿವಾಸಿಯೊಬ್ಬರ ಮನೆಯ ಬಾಳೆಮಂಡಿಗೆ ನುಗ್ಗಿದೆ. ಇದರಿಂದ ಗೋಡೆ, ಮೇಲ್ಛಾವಣಿ ಕುಸಿದು ಮನೆಗೆ ಹಾನಿ ಯಾಗಿದೆ. ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »