ಗ್ರಾಪಂ ಕಚೇರಿ ಶಿಥಿಲಾವಸ್ಥೆ ಖಂಡಿಸಿ ಪ್ರತಿಭಟನೆ
ಹಾಸನ

ಗ್ರಾಪಂ ಕಚೇರಿ ಶಿಥಿಲಾವಸ್ಥೆ ಖಂಡಿಸಿ ಪ್ರತಿಭಟನೆ

June 12, 2018

ಬೇಲೂರು: ತಾಲೂಕಿನ ತಗರೆ ಕೋಗಿಲೆಮನೆ ಗ್ರಾಪಂ ಕಚೇರಿ ಶಿಥಿಲಾವಸ್ಥೆ ಖಂಡಿಸಿ ಗ್ರಾಮಸ್ಥರು ಕಚೇರಿ ಎದುರು ಪ್ರತಿಭಟಿಸಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿದರು.

ಕಸಬಾ ಹೋಬಳಿ ಜೆಡಿಎಸ್ ಅಧ್ಯಕ್ಷ ಕುಮಾರ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, 20 ವರ್ಷದಿಂದ ಕೋಗಿಲೆ ಮನೆ ಗ್ರಾಪಂ ಕಚೇರಿ ದುಸ್ಥಿತಿಯಲ್ಲಿದೆ. ನೂತನ ಕಟ್ಟಡ ನಿರ್ಮಾಣ ಮಾಡಿ ಸಾರ್ವ ಜನಿಕರಿಗೆ ಕೆಲಸಕ್ಕೆ ಅನುವು ಮಾಡಬೇಕು. ಈ ಬಗ್ಗೆ ಹತ್ತಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ ರಲ್ಲದೆ, ತಾಲೂಕಿನ ಪ್ರತಿ ಗ್ರಾಮ ಪಂಚಾ ಯಿತಿಯಲ್ಲಿ ನೂತನ ಕಟ್ಟಡ ನಿರ್ಮಿಸ ಲಾಗಿದೆ. ಆದರೆ ಕೋಗಿಲೆಮನೆ ಪಂಚಾ ಯಿತಿಯಲ್ಲಿ ಮಾತ್ರ ಕಚೇರಿಗೆ ಸುಸಜ್ಜಿತ ಕಟ್ಟಡವಿಲ್ಲ. ಇದಕ್ಕೆ ಗ್ರಾಪಂ ಅಧ್ಯಕ್ಷರು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ನಂಜಪ್ಪ ಮಾತ ನಾಡಿ, 1992ರಿಂದ ಪಂಚಾಯಿತಿ ಕಟ್ಟಡ ಬದಲಾವಣೆಯಾಗಬೇಕು ಎಂಬ ಒತ್ತಾಯಕ್ಕೆ ಅಧಿಕಾರಿಗಳು ಹಾಗೂ ಇಲ್ಲಿನ ಪಂಚಾಯಿತಿ ಆಡಳಿತ ಸ್ಪಂದಿಸುತ್ತಿಲ್ಲ. ಮಳೆಯಿಂದ ಹಲವು ಬಾರಿ ಪ್ರಮುಖ ದಾಖಲಾತಿಗಳು ನಾಶವಾಗಿದೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರಲ್ಲದೆ, ಪಂಚಾಯಿತಿಯಲ್ಲಿನ ಆಡಳಿತ ವರ್ಗ ಉದ್ಯೋಗ ಖಾತ್ರಿ ಕೆಲಸಕ್ಕೆ ಬಾಯಿ ತೆರೆಯುತ್ತಾರೆ. ಆದರೆ ನೂತನ ಕಟ್ಟಡ ಮಾಡಲು ಮೀನಾ-ಮೇಷ ಎಣಿಸುತ್ತಿ ದ್ದಾರೆ. ನೂತನ ಕಟ್ಟಡ ಆಗಲೇಬೇಕು. ಇಲ್ಲವಾದರೆ ಪಂಚಾಯಿತಿ ಬಾಗಿಲಿಗೆ ಬೀಗ ಜಡಿಯಲಾಗುತ್ತದೆ ಎಂದು ಎಚ್ಚರಿಸಿದರು.

ಕೋಗಿಲೆಮನೆ ಪಂಚಾಯಿತಿ ಅಧ್ಯಕ್ಷರು ಕಳೆದ ಎರಡು ವರ್ಷದಿಂದ ನೂತನ ಕಟ್ಟಡದ ಭರವಸೆ ನೀಡಿದ್ದಾರೆ. ಆದರೆ ಇಲ್ಲಿತನಕ ಯಾವ ಕ್ರಮ ಕೈಗೊಂಡಿಲ ಗ್ರಾಮಸ್ಥ ಕೋಮಲೇಶ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆ ನಿಂಗಯ್ಯ, ಗುರಪ್ಪ, ರೂಪ ಇನ್ನಿತರರಿದ್ದರು.

Translate »