ಮೈಸೂರು: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‍ಇ)ಯ 10ನೇ ತರಗತಿ ಫಲಿ ತಾಂಶ ಪ್ರಕಟಗೊಂಡಿದ್ದು, ಮೈಸೂರಿನ ಕೌಟಿಲ್ಯ ವಿದ್ಯಾಲಯಕ್ಕೆ ಸತತವಾಗಿ 8ನೇ ಬಾರಿ ಶೇ.100ರಷ್ಟು ಫಲಿತಾಂಶ ಲಭಿಸಿದೆ. 2018ರ ಮಾರ್ಚ್/ಏಪ್ರಿಲ್ ಮಾಹೆ ಯಲ್ಲಿ ಸಿಬಿಎಸ್‍ಇ ನಡೆಸಿದ 10ನೇ ತರಗತಿ ಪರೀಕ್ಷೆಯಲ್ಲಿ ಕೌಟಿಲ್ಯ ವಿದ್ಯಾಲಯದ ಎಂ.ಚಂದನ ಶೇ.97.2ರಷ್ಟು ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದರೆ, ಆರ್.ಎಸ್.ಪ್ರಣವ್ ಶೇ.97ರಷ್ಟು ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಎಂ.ಚಂದನ್ ಕನ್ನಡ-99, ಗಣ ತ-99, ವಿಜ್ಞಾನ-98, ಸಮಾಜ…
ಮೈಸೂರಲ್ಲಿ ಜೂ.1ರಿಂದ ಮಾವು, ಹಲಸು ಮೇಳ
May 30, 2018ಮೈಸೂರು: ಮೈಸೂರು ಅರಮನೆ ಸಮೀಪವಿರುವ ಕರ್ಜನ್ ಪಾರ್ಕ್ ಆವರಣದಲ್ಲಿ ಜೂ.1ರಿಂದ 5ರವರೆಗೆ ಮಾವು ಹಾಗೂ ಹಲಸು ಮೇಳ ಆಯೋಜಿಸಲಾಗಿದೆ. ಮಾವು ಮತ್ತು ಹಲಸು ಬೆಳೆಯುತ್ತಿ ರುವ ರೈತರಿಗೆ ಉತ್ತಮ ಬೆಲೆ ದೊರಕಿಸಿ ಕೊಡುವುದು ಹಾಗೂ ವಿಭಿನ್ನ ಬಗೆಯ ಹಣ್ಣುಗಳನ್ನು ಸವಿಯುವ ಸದವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸಿಕೊಡುವ ಉದ್ದೇಶ ದಿಂದ ತೋಟಗಾರಿಕೆ ಇಲಾಖೆ ವತಿಯಿಂದ ಈ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಸುಮಾರು 12 ವಿವಿಧ ಜಾತಿಯ ಮಾವು ಮತ್ತು ಹಲಸಿನ ಹಣ್ಣುಗಳನ್ನು ಸವಿಯಬಹುದಾಗಿದೆ. ಮಾವು ಹಾಗೂ ಹಲಸು ಬೆಳೆಗಾರರ ಆರ್ಥಿಕ…
ಸಂಚಾರ ನಿಯಮ ಉಲ್ಲಂಘನೆ: 3119 ವಾಹನ ಸವಾರರಿಂದ 3.39 ಲಕ್ಷ ದಂಡ ವಸೂಲಿ
May 30, 2018ಮೈಸೂರು: ನಗರದಲ್ಲಿ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ 3,119 ವಾಹನ ಸವಾರರಿಂದ 3,39,800 ರೂ. ದಂಡ ವಿಧಿಸಿದ್ದಾರೆ. ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗ ಮತ್ತು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳು, ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿದರು.
ಮೈಸೂರಲ್ಲಿ ಸೋಮವಾರ 5 ಮಿಮೀ ಮಳೆ
May 30, 2018ಮೈಸೂರು: ಸೋಮವಾರ ಮೈಸೂರಲ್ಲಿ 5 ಮಿಮೀ ಮಳೆಯಾಗಿದೆ. ನಂಜನಗೂಡು 10.51, ತಿ.ನರಸೀಪುರ 1.7, ಹುಣಸೂರು 7.6, ಕೆ.ಆರ್.ನಗರ 2.2, ಹೆಚ್.ಡಿ.ಕೋಟೆ 0.3, ಪಿರಿಯಾಪಟ್ಟಣ 7.13 ಮಿಮೀ ಮಳೆಯಾಗಿದೆ. ಕೆಆರ್‍ಎಸ್ ಅಣೆಕಟ್ಟಿನಲ್ಲಿ 73.80 ಅಡಿ ನೀರಿದ್ದು, 3,270 ಕ್ಯೂಸೆಕ್ ಒಳ ಹರಿವು, 292 ಹೊರ ಹರಿವಿದೆ. ಕಬಿನಿ ಜಲಾಶಯದಲ್ಲಿ 56.75 ಅಡಿ ನೀರಿದ್ದು, 2,378 ಕ್ಯೂಸೆಕ್ ಒಳ ಹರಿವು, 300 ಕ್ಯೂಸೆಕ್ ಹೊರ ಹರಿವಿದೆ ಎಂದು ಅಧಿಕಾರಿಗಳು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.
ನೀರು ಕುದುರೆ, ಜಿರಾಫೆ ಮರಿ ಜನನ
May 30, 2018ಮೈಸೂರು: ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾ ಲಯದಲ್ಲಿ ನೀರು ಕುದುರೆ ಹಾಗೂ ಜಿರಾಫೆ ಮರಿಗಳಿಗೆ ಜನ್ಮ ನೀಡಿವೆ. ಮೇ 16ರಂದು ಕೃಷ್ಣ ಮತ್ತು ಜಲೇಶಿ ನೀರು ಕುದುರೆಗೆ ಮರಿ ಜನಿಸಿದರೆ, ಮೇ 26ರಂದು ಕೃಷ್ಣರಾಜ ಮತ್ತು ಖುಷಿ ಜಿರಾಫೆಗಳಿಗೆ ಹೆಣ್ಣು ಮರಿ ಜನಿಸಿದೆ. ಜಲೇಶಿ ನೀರು ಕುದುರೆ ಹಾಗೂ ಖುಷಿ ಜಿರಾಫೆ, ತಮ್ಮ ಮರಿಗಳಿಗೆ ಹಾಲುಣ ಸಿ, ಆರೈಕೆ ಮಾಡುತ್ತಿವೆ. ಮರಿಗಳು ಹಾಗೂ ತಾಯಂದಿರ ಸುರಕ್ಷತೆಯ ದೃಷ್ಟಿಯಿಂದ ಮೃಗಾಲಯದ ಪಶುವೈದ್ಯರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಮೃಗಾಲಯ ನಿರ್ದೇಶಕ…
ಶಾಸ್ತ್ರೀಯ ಸಂಗೀತ ಕೇಳುಗರ ಸಂಖ್ಯೆ ಇಳಿಮುಖ: ಭೈರಪ್ಪ ವಿಷಾದ
May 30, 2018ಮೈಸೂರು: ಇತ್ತೀಚೆಗೆ ಶಾಸ್ತ್ರೀಯ ಸಂಗೀತ ಕೇಳುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಕೇಳುಗರ ಮನೋಧರ್ಮ ಬದಲಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು. ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದ ಆವರಣದಲ್ಲಿ 200ನೇ ಬೆಳ ದಿಂಗಳ ಸಂಗೀತ ಕಾರ್ಯಕ್ರಮದ ಅಂಗ ವಾಗಿ ಜುಗಲ್‍ಬಂದಿ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತತ್ವಶಾಸ್ತ್ರಜ್ಞ ಪ್ಲೇಟೋ ಸಂಗೀತದ ಬಗ್ಗೆ ಒಂದು ಮಾತು ಹೇಳಿದ್ದಾನೆ. `ಯಾವ ಸಂಗೀತವನ್ನು ಆಸ್ವಾದನೆ ಮಾಡುತ್ತೇವೋ ಆ ಮನೋಧರ್ಮ ನಮ್ಮಲ್ಲಿ ಇರುತ್ತದೆ’ ಎಂದ ಅವರು, ಶಾಸ್ತ್ರೀಯ…
ಜೆಎಸ್‍ಎಸ್ ಪಬ್ಲಿಕ್ ಶಾಲೆಗೆ ಸಿಬಿಎಸ್‍ಇ 10ನೇ ತರಗತಿಯಲ್ಲಿ ಶೇ.100ರಷ್ಟು ಫಲಿತಾಂಶ
May 30, 2018ಮೈಸೂರು: ಮೈಸೂರಿನ ಸಿದ್ದಾರ್ಥನ ಗರದಲ್ಲಿರುವ ಜೆಎಸ್‍ಎಸ್ ಪಬ್ಲಿಕ್ ಶಾಲೆ, ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100ರಷ್ಟು ಸಾಧನೆ ಮಾಡಿದೆ. ಶಾಲೆಯ ಒಟ್ಟು 187ರಲ್ಲಿ 19 ವಿದ್ಯಾರ್ಥಿಗಳು ಶೇ.90ಕ್ಕೂ ಹೆಚ್ಚು ಅಂಕ ಗಳಿಸಿದ್ದು, 75 ಉನ್ನತ ಶ್ರೇಣ ಹಾಗೂ 93 ವಿದ್ಯಾರ್ಥಿಗಳು ಪ್ರಥಮ ಶ್ರೇಣ ಯಲ್ಲಿ ತೇರ್ಗಡೆಯಾಗಿದ್ದಾರೆ. 2017-18ನೇ ಸಾಲಿನಲ್ಲೂ ಶೇ.100ರಷ್ಟು ಫಲಿತಾಂಶ ಪಡೆದಿರುವ ಶಾಲೆ, 2 ದಶಕಗಳ ಸಾಧನೆಯ ನಾಗಾಲೋಟ ವನ್ನು ಕಾಯ್ದುಕೊಂಡಿದೆ. ಎಸ್.ಮಯೂರಿ(ಶೇ.96.6), ಶ್ರೀರಾಮ ಭಟ್(ಶೇ.94.8), ಅದಿತಿಭಟ್(ಶೇ.94.4), ಕೆ.ವರ್ಷಿತಾ (ಶೇ.93.8), ಅನನ್ಯ ವಿ.ಶಾಸ್ತ್ರಿ(ಶೇ.93.6), ಡಿ.ಪೂರ್ವಿಕ್(ಶೇ.93.6), ಎ.ಸಿ.ಪ್ರತೀಕ್…
ಜೂ.4ರಂದು ನಾಲ್ವಡಿ 134ನೇ ಜಯಂತಿ ಆಚರಣೆ
May 30, 2018ಮೈಸೂರು: ಮೈಸೂರಿನ ಅರಸು ಮಂಡಳಿಯಲ್ಲಿ ಜೂ.4ರಂದು ಬೆಳಿಗ್ಗೆ 9ಕ್ಕೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 134ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅರಸು ಮಂಡಳಿಯ ಅಧ್ಯಕ್ಷ ಕೆಂಪರಾಜೇ ಅರಸ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಸಾಮಾಜ್ಯದಲ್ಲಿ ಹಲವು ಪ್ರಥಮಗಳ ಹರಿಕಾರ ಎನಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 134ನೇ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅರಸು ಮಂಡಳಿಯ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಉದ್ಘಾಟಿಸಲಿದ್ದಾರೆ. ನಂತರ…
ಡೆಂಗ್ಯೂ, ಚಿಕುನ್‍ಗುನ್ಯಾ ತಡೆ ಕುರಿತು ಜಾಗೃತಿ
May 30, 2018ಮೈಸೂರು: ಮಳೆ ನೀರು ಸಂಗ್ರಹವಾಗಿ ಈಡಿಸ್ ಸೊಳ್ಳೆ ಉತ್ಪತ್ತಿಯಾಗುವ ಸಂಭವವಿದ್ದು, ಸಾರ್ವ ಜನಿಕರು ಡೆಂಗ್ಯೂ ಮತ್ತು ಚಿಕುನ್ ಗುನ್ಯಾ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಗಳನ್ನು ಕೈಗೊಳ್ಳುವುದಕ್ಕೆ ಮುಂದಾಗಬೇಕೆಂದು ಮೈಸೂರು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್. ಚಿದಂಬರ ಮನವಿ ಮಾಡಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಮಂಗಳವಾರ ನಡೆದ ಡೆಂಗ್ಯೂ ಮತ್ತು ಚಿಕುನ್ ಗುನ್ಯಾ ರೋಗಗಳ ತಡೆಗಟ್ಟು ವಿಕೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಮಳೆ ನಿರಂತರವಾಗಿ…
ಅಪಘಾತ ನೆಪದಲ್ಲಿ ಕಾರು ಚಾಲಕನಿಂದ ಸುಲಿಗೆ ಪ್ರಕರಣ ಮೈಸೂರಿನ ಇಬ್ಬರು ಪೊಲೀಸ್ ವಶಕ್ಕೆ
May 30, 2018ಮೈಸೂರು: ಅಪಘಾತ ಮಾಡಿದರೆಂಬ ನೆಪದಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಚಾಲಕನನ್ನು ತಡೆದು ಹಣ, ಮೊಬೈಲ್ ಸುಲಿಗೆ ಮಾಡಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಎನ್‍ಆರ್ ಮೊಹಲ್ಲಾ ನಿವಾಸಿ ಗಳೆನ್ನಲಾದ ಮೊಹಮದ್ ಜಮೀಲ್ ಹಾಗೂ ಮೊಹಮದ್ ಜಬ್ಬೀರ್ ಎಂಬು ವರೇ ಸುಲಿಗೆ ಮಾಡಿ ತಲೆಮರೆಸಿಕೊಂಡಿ ದ್ದವರು. ಇಲವಾಲ ಠಾಣೆ ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೊಳ ಪಡಿಸಿದ್ದಾರೆ. ಈ ಹಿಂದೆ ಮೈಸೂರಿನಲ್ಲಿ ಮಹಿಳೆಯರ ಚಿನ್ನದ ಸರ ಅಪಹರಿಸುತ್ತಿದ್ದ ಆರೋಪಿಗಳು, ಇದೀಗ ತಮ್ಮ ಕೃತ್ಯದ ಶೈಲಿಯನ್ನು ಬದಲಿಸಿಕೊಂಡು ಹೆದ್ದಾರಿ ದರೋಡೆ…