ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಕೌಟಿಲ್ಯ ವಿದ್ಯಾಲಯಕ್ಕೆ ಶೇ.100 ಫಲಿತಾಂಶ
ಮೈಸೂರು

ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಕೌಟಿಲ್ಯ ವಿದ್ಯಾಲಯಕ್ಕೆ ಶೇ.100 ಫಲಿತಾಂಶ

May 30, 2018

ಮೈಸೂರು:  ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‍ಇ)ಯ 10ನೇ ತರಗತಿ ಫಲಿ ತಾಂಶ ಪ್ರಕಟಗೊಂಡಿದ್ದು, ಮೈಸೂರಿನ ಕೌಟಿಲ್ಯ ವಿದ್ಯಾಲಯಕ್ಕೆ ಸತತವಾಗಿ 8ನೇ ಬಾರಿ ಶೇ.100ರಷ್ಟು ಫಲಿತಾಂಶ ಲಭಿಸಿದೆ.

2018ರ ಮಾರ್ಚ್/ಏಪ್ರಿಲ್ ಮಾಹೆ ಯಲ್ಲಿ ಸಿಬಿಎಸ್‍ಇ ನಡೆಸಿದ 10ನೇ ತರಗತಿ ಪರೀಕ್ಷೆಯಲ್ಲಿ ಕೌಟಿಲ್ಯ ವಿದ್ಯಾಲಯದ ಎಂ.ಚಂದನ ಶೇ.97.2ರಷ್ಟು ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದರೆ, ಆರ್.ಎಸ್.ಪ್ರಣವ್ ಶೇ.97ರಷ್ಟು ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಎಂ.ಚಂದನ್ ಕನ್ನಡ-99, ಗಣ ತ-99, ವಿಜ್ಞಾನ-98, ಸಮಾಜ ವಿಜ್ಞಾನ-94 ಮತ್ತು ಇಂಗ್ಲಿಷ್-96 ಅಂಕ (ಶೇ.97.3) ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, ಆರ್.ಎಸ್.ಪ್ರಣವ್ ಕನ್ನಡ-97, ಗಣ ತ-100, ವಿಜ್ಞಾನ-97, ಇಂಗ್ಲೀಷ್-94, ಸಮಾಜ ವಿಜ್ಞಾನ-97 ಅಂಕಗಳಿಸಿ(ಶೇ.97) ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಪ್ರವೀಣ್ ಎಸ್.ಕೌಂಡಿನ್ಯ (ಶೇ.96.2), ಮೇಘನಾ (ಶೇ.96), ರೀತು ಪ್ರಕಾಶ್ (ಶೇ.95.8), ಸಹನ (ಶೇ.93.6), ಇಂಚರ (ಶೇ.93.4), ಆಕಾಂಕ್ಷ ಅರಸ್ (ಶೇ.93), ಎಸ್.ಖುಷಿ (ಶೇ.91), ದೀಕ್ಷಾ (ಶೇ.90.8), ಹೆಚ್.ಪಿ.ಹಿಮಾನಿ (ಶೇ.90.6), ಸಂಧ್ಯಾ (ಶೇ.89.4), ಪ್ರವೀಣ್ (ಶೇ.87.9), ಲಾಸ್ಯ (ಶೇ.87), ಅಭಿಷೇಕ್ (ಶೇ.86.8), ಜಿ.ಪ್ರಗುಣ್ (ಶೇ.86), ಸಾಧ್ವಿ ಎಸ್.ನಾಗ ವಾರ (ಶೇ.86), ಚಾರಿತ್ರಿಕ ಎಂ.ಕಕೋಲ (ಶೇ.85.8), ತ್ರಿಶೂಲ್ (ಶೇ.85.6) ಹಾಗೂ ವೈ.ಎಂ.ಪ್ರಣತಿ ಪಟೇಲ್ (ಶೇ.85.4) ಅಂಕ ಪಡೆಯುವ ಮೂಲಕ ಅತ್ಯುನ್ನತ ಶ್ರೇಣ ಯಲ್ಲಿ ತೇರ್ಗಡೆಯಾಗಿದ್ದಾರೆ.
ಪರೀಕ್ಷೆಗೆ ಹಾಜರಾಗಿದ್ದ 74 ವಿದ್ಯಾರ್ಥಿ ಗಳು ತೇರ್ಗಡೆಯಾಗಿದ್ದು, ಅವರಲ್ಲಿ 20 ವಿದ್ಯಾರ್ಥಿಗಳು(ಶೇ.85ಗಿಂತ ಅಧಿಕ) ಅತ್ಯುತ್ತಮ ಶ್ರೇಣ , 44 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದು, ಇನ್ನುಳಿದ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ಮಕ್ಕಳಲ್ಲಿ ಸಂಭ್ರಮ: ಸಾಧನೆಗೈದ ವಿದ್ಯಾರ್ಥಿ ಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಪೋಷಕರೊಂದಿಗೆ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರಿಗೆ ಸಿಹಿ ಹಂಚಿ ಸಂತಸಪಟ್ಟರು. ಈ ವೇಳೆ ಪ್ರಾಂಶುಪಾಲರಾದ ಎಲ್.ಸವಿತಾ ಅವರು ಸಾಧನೆಗೈದ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಅಭಿನಂದನೆ ಸಲ್ಲಿಸಿ, ಉನ್ನತ ವಿದ್ಯಾ ಭ್ಯಾಸದಲ್ಲಿಯೂ ಉತ್ತಮ ಸಾಧನೆ ಮಾಡಲಿ ಎಂದು ಹಾರೈಸಿದರು.

Translate »