ಮೈಸೂರಲ್ಲಿ ಜೂ.1ರಿಂದ ಮಾವು, ಹಲಸು ಮೇಳ
ಮೈಸೂರು

ಮೈಸೂರಲ್ಲಿ ಜೂ.1ರಿಂದ ಮಾವು, ಹಲಸು ಮೇಳ

May 30, 2018

ಮೈಸೂರು: ಮೈಸೂರು ಅರಮನೆ ಸಮೀಪವಿರುವ ಕರ್ಜನ್ ಪಾರ್ಕ್ ಆವರಣದಲ್ಲಿ ಜೂ.1ರಿಂದ 5ರವರೆಗೆ ಮಾವು ಹಾಗೂ ಹಲಸು ಮೇಳ ಆಯೋಜಿಸಲಾಗಿದೆ.

ಮಾವು ಮತ್ತು ಹಲಸು ಬೆಳೆಯುತ್ತಿ ರುವ ರೈತರಿಗೆ ಉತ್ತಮ ಬೆಲೆ ದೊರಕಿಸಿ ಕೊಡುವುದು ಹಾಗೂ ವಿಭಿನ್ನ ಬಗೆಯ ಹಣ್ಣುಗಳನ್ನು ಸವಿಯುವ ಸದವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸಿಕೊಡುವ ಉದ್ದೇಶ ದಿಂದ ತೋಟಗಾರಿಕೆ ಇಲಾಖೆ ವತಿಯಿಂದ ಈ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಸುಮಾರು 12 ವಿವಿಧ ಜಾತಿಯ ಮಾವು ಮತ್ತು ಹಲಸಿನ ಹಣ್ಣುಗಳನ್ನು ಸವಿಯಬಹುದಾಗಿದೆ. ಮಾವು ಹಾಗೂ ಹಲಸು ಬೆಳೆಗಾರರ ಆರ್ಥಿಕ ಸ್ಥಿತಿ ಸುಧಾ ರಣೆ ಹಾಗೂ ನಾಗರಿಕರ ಆರೋಗ್ಯದ ಹಿತದೃಷ್ಟಿಯ ಜೊತೆಗೆ ಪರಿಸರದ ಸ್ವಚ್ಚತೆ ಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಮೇಳವನ್ನು ಅತ್ಯಂತ ವ್ಯವಸ್ಥಿತವಾಗಿ ಏರ್ಪ ಡಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಮಾವು ಒಂದು ಮಹತ್ವ ಪೂರ್ಣ ಹಣ ್ಣನ ಬೆಳೆಯಾಗಿದೆ. ಅಲ್ಲದೆ ದೇಶದೆಲ್ಲೆಡೆ ವ್ಯಾಪಕವಾಗಿ ಬೆಳೆಯಲಾಗು ತ್ತದೆ. ಹಣ್ಣುಗಳಲ್ಲೇ ಮಾವಿಗೆ ಅಗ್ರಸ್ಥಾನ ವಿದೆ. ಆಕರ್ಷಕ ರೂಪ, ಸ್ವಾದಿಷ್ಟಪೂರ್ಣ ರುಚಿ ಹಾಗೂ ಮನಮೋಹಕ ಪರಿಮಳ ವನ್ನು ಹೊಂದಿರುವ ಮಾವು ಹಣ್ಣುಗಳ ರಾಜನಾಗಿ ಗುರುತಿಸಿಕೊಂಡಿದೆ.

ರಾಜ್ಯದಲ್ಲಿ ಸುಮಾರು 1.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಸಲಾಗುತ್ತಿದ್ದು, ವಾರ್ಷಿಕ ಸುಮಾರು 7 ಲಕ್ಷ ಟನ್‍ಗಳಷ್ಟು ಹಣ್ಣು ಉತ್ಪಾದನೆಯಿದೆ. ಮೈಸೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕ ಬಳ್ಳಾಪುರ, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ, ಉತ್ತರಕನ್ನಡ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಮಾವು ಬೆಳೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಲಾಭದಾಯಕವಾಗಿದೆ. ಅಲ್ಲದೆ ಹಣ್ಣು ಸಂಸ್ಕರಣ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿಯಾಗಿದೆ. ಒಟ್ಟಾರೆ ವಾಣ ಜ್ಯ ಪ್ರಾಮುಖ್ಯತೆ ಹೆಚ್ಚುವುದರಿಂದ ಮಾವು ಉತ್ಪಾದನೆಯೂ ಹೆಚ್ಚುತ್ತಿದ್ದು, ಬಾದಾಮಿ, ಬಂಗನಪಲ್ಲಿ, ರಸಪುರಿ, ಮಲ್ಲಿಕಾ, ಸೆಂದೂರ, ಮಲಗೋವಾ, ತೋತಾಪುರಿ, ನೀಲಂ, ಆಮ್ರಪಾಲಿ, ಕೇಸರ್, ದಶೇರಿ ಇನ್ನಿತರ ತಳಿಗಳನ್ನು ಹೆಚ್ಚಾಗಿ ಬೆಳೆಯ ಲಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿಯೂ ಮಾವು ಒಂದು ಪ್ರಮುಖ ಹಣ ್ಣನ ಬೆಳೆ ಯಾಗಿದ್ದು, ರತ್ನಗಿರಿ ಅಲ್ಫಾನ್ಸೋ, ಬಾದಾಮಿ, ರಸಪೂರಿ, ಸೆಂಧೂರ, ಮಲಗೋವಾ, ತೋತಾಪುರಿ, ಮಲ್ಲಿಕಾ, ದಶೇರಿ ಮುಂತಾದ ತಳಿಗಳನ್ನು ಸುಮಾರು 4136 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಒಟ್ಟು ಸುಮಾರು 40,117 ಟನ್ ವಾರ್ಷಿಕ ಉತ್ಪಾದನೆಯಾಗುತ್ತಿದೆ. ಮಾವು ಜೊತೆಗೆ ಈ ಬಾರಿ ಮತ್ತೊಂದು ಸ್ವಾದಿಷ್ಟ ಹಣ್ಣಾದ ಹಲಸು ಬೆಳೆಯನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ 5 ದಿನಗಳ ಮೇಳ ಏರ್ಪಡಿಸಲಾ ಗಿದೆ. ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಮತ್ತು ಬೆಂಗ ಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಭಾಗದಲ್ಲಿ ಬೆಳೆದ ಹಲಸಿನ ಹಣ್ಣನ್ನು ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗುತ್ತಿದೆ.

ಗ್ರಾಹಕ ಸ್ನೇಹಿ ಮೇಳ: ಮಾವು ಹಾಗೂ ಹಲಸು ಮೇಳವು ಗ್ರಾಹಕ ಸ್ನೇಹಿಯಾಗಿರ ಲಿದೆ ಎಂದು ತೋಟಗಾರಿಕೆ ಇಲಾಖೆ ಸ್ಪಷ್ಟಪಡಿಸಿದೆ. ಈ ನಿಟ್ಟಿನಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಮುಕ್ತವಾದ, ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಮಾರಾಟ ಕ್ಕಿಡಲಾಗುತ್ತಿದೆ. ಉತ್ಕೃಷ್ಟ ದರ್ಜೆಯ ವಿವಿಧ ತಳಿಗಳ ಹಣ್ಣಗಳನ್ನು, ತೋಟಗಾರಿಕೆ ಇಲಾಖೆಯ ಬೆಲೆ ನಿಗದಿ ಸಮಿತಿ ನಿಗದಿ ಮಾಡಿರುವ ಬೆಲೆಯಲ್ಲೇ ಮಾರಾಟ ಮಾಡ ಬೇಕಿರುವುದರಿಂದ ಹೆಚ್ಚು ಬೆಲೆ ತೆರಬೇಕಾದ ಪ್ರಮೇಯ ಎದುರಾಗದು. ಮಾವು ಹಾಗೂ ಹಲಸಿನ ವಿವಿಧ ತಳಿಗಳ ಹಣ್ಣನ್ನು ಕಣ್ತುಂಬಿ ಕೊಂಡು, ರುಚಿ ಸವಿಯಬಹುದು.

ಪರಿಸರ ಸ್ನೇಹಿ ಮೇಳ: ಹಣ್ಣುಗಳ ಮೇಳಕ್ಕೆ ಬರುವ ಗ್ರಾಹಕರು ತಪ್ಪದೇ ಬಟ್ಟೆ ಬ್ಯಾಗ್‍ಗಳನ್ನು ತರಬೇಕೆಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮೇಳದಲ್ಲಿ ಭಾಗವಹಿಸುವ ರೈತರು ಸಹ ಪೇಪರ್ ಕಾರ್ಟೂನ್ ಬಾಕ್ಸ್ ಹಾಗೂ ಬಟ್ಟೆ ಬ್ಯಾಗ್‍ಗಳನ್ನು ಮಾತ್ರ ಬಳಸಬೇಕೆಂದು ಸೂಚಿಸಿದ್ದಾರೆ. ವೈಭವ್ ಪ್ಯಾಕೇಜಿಂಗ್ ಇಂಡಸ್ಟ್ರೀಸ್(9743704037) ಅಥವಾ ಎಂ.ಎಸ್ ಪ್ಯಾಕೇಜಿಂಗ್ ಇಂಡಸ್ಟ್ರೀಸ್ (9008081990) ಸೇರಿದಂತೆ ಮಾವು ಅಭಿವೃದ್ಧಿ ಮಂಡಳಿಯ ನೊಂದಾಯಿತ ಅಥವಾ ಅಧಿಕೃತ ಸಂಸ್ಥೆಗಳಿಂದ ಪೇಪರ್ ಕಾರ್ಟೂನ್ ಬಾಕ್ಸ್ ಹಾಗೂ ಬಟ್ಟೆ ಬ್ಯಾಗ್‍ಗಳನ್ನು ಕೊಳ್ಳಬಹುದೆಂದು ಸಲಹೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

100 ಟನ್ ಅಂದಾಜು: ಈ ಮೇಳದಲ್ಲಿ ನೈಸರ್ಗಿಕವಾಗಿ ಮಾಗಿಸಿದ ಸುಮಾರು 100 ಟನ್ ಹಣ್ಣನ್ನು ಮಾರಾಟವಾಗಬಹು ದೆಂಬ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಮೇಳದಲ್ಲಿ ಹಣ್ಣು ಮಾರಾಟ ಮಾಡುವ ರೈತರು ಹಾಗೂ ಗ್ರಾಹಕರು ಸಹಕರಿಸಬೇಕು. ನಿಫಾ ವೈರಸ್ ಭೀತಿ ಇರುವುದರಿಂದ ಪ್ರಾಣ ಪಕ್ಷಿಗಳು ಕಚ್ಚಿರುವ ಹಣ್ಣನ್ನು ಮೇಳಕ್ಕೆ ತರಬಾರದು. ಅಲ್ಲದೆ ಎಲ್ಲಾ ಹಣ್ಣುಗಳನ್ನೂ ಸ್ವಚ್ಛವಾಗಿ ಟ್ಟಿರಬೇಕೆಂದು ಎಚ್ಚರಿಸಲಾಗಿದೆ.

Translate »