ಸ್ವಾವಲಂಬಿ ಕರ್ನಾಟಕದ ಸಂದೇಶ ಸಾರಿದ  ಕೌಟಿಲ್ಯ ವಿದ್ಯಾಲಯದ ವಾಣಿಜ್ಯ ಮೇಳ
ಮೈಸೂರು

ಸ್ವಾವಲಂಬಿ ಕರ್ನಾಟಕದ ಸಂದೇಶ ಸಾರಿದ  ಕೌಟಿಲ್ಯ ವಿದ್ಯಾಲಯದ ವಾಣಿಜ್ಯ ಮೇಳ

November 3, 2018

ಮೈಸೂರು: ಕರ್ನಾಟಕ ರಾಜ್ಯೋತ್ಸವವನ್ನು ಕೌಟಿಲ್ಯ ವಿದ್ಯಾಲಯದಲ್ಲಿ ವಿಭಿನ್ನ ರೀತಿ ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ, ವ್ಯವಹಾರಿಕ ಚತುರತೆ, ಮಾರುಕಟ್ಟೆ ಕೌಶಲ್ಯಗಳನ್ನು ಬೆಳೆಸುವ ಮೂಲಕ ಸ್ವಾವಲಂಬಿಗಳನ್ನಾಗಿ ರೂಪಿಸುವ ಉದ್ದೇಶದಿಂದ ವಾಣಿಜ್ಯ ಮೇಳ ವನ್ನು ಏರ್ಪಡಿಸಲಾಗಿತ್ತು.

ಶಾಲೆಯ ಆವರಣದಲ್ಲಿ ತೆರೆಯಲಾಗಿದ್ದ 36 ಮಳಿಗೆಗಳಲ್ಲಿ ಕನ್ನಡ ನಾಡಿನ ವಿಶೇಷತೆಗಳನ್ನು ಒಳಗೊಂಡ ಆಹಾರ, ಕರಕುಶಲ ವಸ್ತುಗಳು, ಉಡುಪುಗಳು ಮುಂತಾದವನ್ನುತಾವೇ ತಯಾರಿಸಿ ಪ್ರದರ್ಶಿಸಿದ ರಲ್ಲದೆ ಅವುಗಳನ್ನು ಮಾರಾಟ ಮಾಡಿ ವ್ಯಾಪಾರಿ ಕೌಶಲ್ಯವನ್ನು ಮೈಗೂಡಿಸಿ ಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿತ್ತು.

ಕರ್ನಾಟಕದಲ್ಲಿರುವ ಪ್ರಾಕೃತಿಕ ಸಂಪತ್ತನ್ನು ಬಳಸಿಕೊಂಡು, ದೇಶದ ಇತರ ರಾಜ್ಯಗಳ ವೈವಿಧ್ಯತೆಗಳನ್ನು ಅಳವಡಿಸಿಕೊಂಡು ವಿಶೇಷ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಕಲೆಯನ್ನು ವಿದ್ಯಾರ್ಥಿಗಳು ಮೆರೆದರು. ಭಾರತದ ಉದ್ಯಮ ಕ್ಷೇತ್ರದಲ್ಲಿ ರಾಜ್ಯವನ್ನು ಒಂದು ಶಕ್ತಿಶಾಲಿ ಕ್ಷೇತ್ರವ ನ್ನಾಗಿ ರೂಪಿಸುವ ಉದ್ದೇಶದಿಂದ ಎಲ್ಲಾ ರಾಜ್ಯಗಳ ವಿಶೇಷತೆಗಳು, ಆಹಾರ ಪದಾರ್ಥ ಗಳು, ಕರಕುಶಲ ವಸ್ತುಗಳನ್ನು ತಯಾ ರಿಸುವ ವಿಧಾನವನ್ನು ಪ್ರದರ್ಶಿಸಿದರು.

ಮೈಸೂರು ಪಾಕ್, ಧಾರವಾಡ ಪೇಡ ಸೇರಿದಂತೆ ಹಲವು ರುಚಿಕರ ಖಾದ್ಯಗಳ ಜೊತೆಗೆ ಮುಂಬೈನ ವಡಾಪಾವ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರಸಿದ್ಧವಾಗಿ ರುವ ಖಾದ್ಯಗಳನ್ನು ತಾವೇ ತಯಾರಿಸಿ ಮಾರಿದರು. ಆಯಾ ರಾಜ್ಯಗಳ ವಿಶೇಷತೆ ಗಳನ್ನು ಪರಿಚಯಿಸುವುದರ ಜೊತೆಗೆ ಅಲ್ಲಿನ ಸಾಂಪ್ರದಾಯಿಕ ಉಡುಗೆ-ತೊಡುಗೆ ಗಳನ್ನು ತೊಟ್ಟು ವ್ಯಾಪಾರ ಮಾಡಿದರು. ಅದರ ಜೊತೆಗೆ ಆ ರಾಜ್ಯಗಳ ಸಂಪ್ರದಾಯ, ಸಂಸ್ಕೃತಿ ಗಳನ್ನು ಸಹ ಪರಿಚಯಿಸಿದ್ದು ವಿಶೇಷ ವಾಗಿತ್ತು. ಜೊತೆಗೆ ಕನ್ನಡ ನೆಲದಲ್ಲಿ ಬಹು ಸಂಸ್ಕೃತಿಗೆ ಅವಕಾಶವಿದೆ. ಆದರೆ ಕನ್ನಡ ಸಂಸ್ಕೃತಿಗೆ ನಮ್ಮ ಆದ್ಯತೆ ಮತ್ತು ಕನ್ನಡದ ಉಳಿವಿಗೆ ನಮ್ಮ ಕೊಡುಗೆಯೂ ಇದೆ ಎಂಬ ಸಂದೇಶವನ್ನು ಸಾರಿದರು.

ಪೋಷಕರು ಮಾತ್ರವಲ್ಲದೆ ಸಾರ್ವಜನಿಕರೂ ಮೇಳಕ್ಕೆ ಆಗಮಿಸಿದ್ದು ಕನ್ನಡದ ವಾತಾವರಣದ ಜೊತೆಗೆ ರಾಜ್ಯೋತ್ಸವದ ಗುಂಗಿನಲ್ಲಿದ್ದ ಅವರು ಮಳಿಗೆಗಳಿಗೆ ಭೇಟಿ ನೀಡಿ ಅಲ್ಲಿನ ವೈವಿಧ್ಯತೆಯನ್ನು ಪರಿಚ ಯಿಸಿಕೊಂಡು ವಿವಿಧ ಖಾದ್ಯಗಳನ್ನು ಖರೀದಿಸಿ ಸೇವಿಸುವ ಮೂಲಕ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯ ಗುಣಗಳನ್ನು ಬೆಳೆಸಿ ಕೊಳ್ಳುವ ದಿಸೆಯಲ್ಲಿ ಪ್ರೋತ್ಸಾಹ ನೀಡಿದರು. ಇದರಿಂದ ಉತ್ತೇಜಿತರಾದ ವಿದ್ಯಾರ್ಥಿ ಗಳು ಉಲ್ಲಾಸ, ಉತ್ಸಾಹದಿಂದ ಕಾರ್ಯ ನಿರತರಾಗಿದ್ದರು. ಈ ವೈವಿಧ್ಯಮಯ ಮೇಳ ವನ್ನು ಮೈಸೂರಿನ ಕ್ರೆಡಾಯ್ ಸಂಸ್ಥೆಯ ಅಧ್ಯಕ್ಷರಾದ ವೈ.ಜಿ.ಚಿನ್ನಸ್ವಾಮಿ ಉದ್ಘಾಟಿಸಿದರು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸೃಜನ ಶೀಲತೆ ಮತ್ತು ನಾಯಕತ್ವದ ಗುಣ ಬೆಳೆಸಿ ಕೊಳ್ಳುವಲ್ಲಿ ಇಂದಿನ ಕಾರ್ಯಕ್ರಮ ಅತ್ಯು ತ್ತಮ ವೇದಿಕೆಯಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೌಟಿಲ್ಯ ವಿದ್ಯಾಲಯದ ಅಧ್ಯಕ್ಷರಾದ ಆರ್.ರಘು ಮಾತ ನಾಡಿ, ಕರ್ನಾಟಕದಲ್ಲಿ ಉದ್ಯಮ ಕ್ಷೇತ್ರ ಬೆಳೆದು ದೇಶದ ಸಮೃದ್ಧತೆಗೆ ಕೊಡುಗೆ ನೀಡುವ ಅನಿವಾರ್ಯತೆಯನ್ನು ಈ ಸಂದರ್ಭದಲ್ಲಿ ಮಕ್ಕಳ ಮೂಲಕ ಸಮಾಜಕ್ಕೆ ಸಂದೇಶವನ್ನು ರವಾನಿಸಿದ್ದೇವೆ. ಆ ಮೂಲಕ ದೇಶೀಯ ಉತ್ಪನ್ನಗಳು ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸಲು ಭವಿಷ್ಯತ್ತಿನ ಪೀಳಿಗೆಗೆ ಮಾರ್ಗ ದರ್ಶನದ ಅಗತ್ಯವಿದೆ ಎಂಬುದನ್ನು ಈ ಮೇಳ ತಿಳಿಸಿಕೊಟ್ಟಿದೆ. ಉದ್ಯಮ ಕ್ಷೇತ್ರದಲ್ಲಿ ನಮ್ಮ ದೇಶವನ್ನು ಇತರ ದೇಶಗಳೊಂದಿಗೆ ಸ್ಪರ್ಧಿಸುವ ಮಟ್ಟಕ್ಕೆ ಬೆಳೆಸುವ ದಿಸೆಯಲ್ಲಿ ವಿದ್ಯಾರ್ಥಿಗಳು ಉದ್ಯಮಶೀಲತಾ ಮನೋಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲರಾದ ಡಾ.ಎಲ್.ಸವಿತ, ವಿದ್ಯಾರ್ಥಿಗಳಲ್ಲಿ ವ್ಯಾಪಾರದ ಕ್ರಿಯಾ ಶೀಲತೆ ಮೂಡಿದ್ದು ಲಾಭ ನಷ್ಟಗಳನ್ನು ಸರಿದೂಗಿಸುವ ಕಲೆ ತಿಳಿದಿರುವುದನ್ನು ಕಂಡು ಅಚ್ಚರಿಯಾಗಿದೆ ಎಂದರು.

ಮಳಿಗೆ ತೆರೆದಿದ್ದ ಬಿಹಾರದ ವಿದ್ಯಾರ್ಥಿ ಸಾಯಿ, ಉತ್ತರ ಪ್ರದೇಶದ ವಿದ್ಯಾರ್ಥಿ ಆದರ್ಶ್ ತಮಗಾದ ವಿಶೇಷ ಅನುಭವ ವಿವರಿಸಿದರು. ಅತ್ಯುತ್ತಮ ವಹಿವಾಟು ನಡೆಸಿ ವಿಭಿನ್ನ ಹಾಗೂ ಆಕರ್ಷಕ ಮಳಿಗೆ ಜೋಡಿಸಿದ ವಿದ್ಯಾರ್ಥಿ ತಂಡಗಳಿಗೆ ಬಹು ಮಾನವನ್ನು ಈ ಸಂದರ್ಭದಲ್ಲಿ ವಿತರಿಸ ಲಾಯಿತು. ತೀರ್ಪುಗಾರರಾಗಿ ಡಾ. ಎಂ.ಪಿ. ವರ್ಷ ಹಾಗೂ ವೆಂಕಟೇಶ್ ಆಗಮಿ ಸಿದ್ದರು. ವಾಣಿಜ್ಯ ಮೇಳದಿಂದ ಅಂದಾಜು 3 ಲಕ್ಷ ರೂ.ಗಳ ಲಾಭಾಂಶವನ್ನು ನಿರೀ ಕ್ಷಿಸಲಾಗಿದ್ದು, ಈ ಮೊತ್ತವನ್ನು ರಚನಾತ್ಮಕ ಹಾಗೂ ಸಾಮಾಜಿಕ ಕಾಳ ಜಿಗೆ ದೇಣಿಗೆ ಕೊಡಲು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ ಎಂದು ಉಪ ಪ್ರಾಂಶುಪಾಲರಾದ ಬಿ.ಬಿ. ರಾಧಿಕ ತಿಳಿಸಿದರು.

Translate »