ಕನ್ನಡ-ಸರ್ಕಾರಿ ಶಾಲೆ ಉಳಿಸಿ-ಬೆಳೆಸಲು ಪ್ರತಿಜ್ಞೆ
ಮೈಸೂರು

ಕನ್ನಡ-ಸರ್ಕಾರಿ ಶಾಲೆ ಉಳಿಸಿ-ಬೆಳೆಸಲು ಪ್ರತಿಜ್ಞೆ

November 3, 2018

ಮೈಸೂರು: ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಗುರುವಾರ ಅರಮನೆಯ ಆವರಣದಲ್ಲಿರುವ ಭುವನೇ ಶ್ವರಿ ದೇವಾಲಯದ ಬಳಿ ಶಾಸಕ ಎಸ್.ಎ. ರಾಮದಾಸ್ ನೇತೃತ್ವದಲ್ಲಿ ಆರಂಭಿಸಿದ ‘ಸರ್ಕಾರಿ ಮತ್ತು ಕನ್ನಡ ಶಾಲೆ ಉಳಿಸಿ-ಬೆಳೆಸಿ’ ಅಭಿಯಾನದಲ್ಲಿ ನೂರಾರು ವಿದ್ಯಾರ್ಥಿ ಗಳು ಹಾಗೂ ಶಿಕ್ಷಕರು ಮತ್ತು ಪಾಲಿಕೆ ಸದ ಸ್ಯರು ಪಾಲ್ಗೊಂಡು ಪ್ರತಿಜ್ಞೆ ಸ್ವೀಕರಿಸಿದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಸಕ ಎಸ್.ಎ.ರಾಮದಾಸ್ ಅವರು ಭುವನೇ ಶ್ವರಿ ದೇವಿಯ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ‘ಕನ್ನಡ ಹಾಗೂ ಸರ್ಕಾರಿ ಶಾಲೆ ಉಳಿಸಿ, ಬೆಳೆಸಿ’ ಅಭಿಯಾನಕ್ಕೆ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಕನ್ನಡದಲ್ಲಿ 49 ಅಕ್ಷರಗಳಿದ್ದು, ಈ ಎಲ್ಲಾ ಅಕ್ಷರಗಳಿಗೆ ಒಂದೊಂದು ದೇವತೆ ಗಳಿದ್ದಾರೆ. ಭುವನೇಶ್ವರಿ ದೇವಾಲಯದ ಗೋಪುರಗಳ ಮೇಲೆ ಅಕ್ಷರ ದೇವತೆಗಳ ಮೂರ್ತಿಗಳನ್ನು ಕೆತ್ತಲಾಗಿದೆ. ಒಂದೊಂದು ದೇವತೆಗಳು ಆಶೀರ್ವಾದ ಮಾಡುವುದನ್ನು ನೋಡಿರುತ್ತೇವೆ. ಪ್ರಪಂಚದಲ್ಲಿ ಒಂದೊಂದು ಅಕ್ಷರಕ್ಕೂ ಒಂದೊಂದು ದೇವತೆಗಳಿರುವ ಏಕೈಕ ಭಾಷೆ ಕನ್ನಡ. ಇಂತಹ ವೈಶಿಷ್ಟ್ಯ ಪೂರ್ಣ ಭಾಷೆಯನ್ನು ನಾವೇ ಕಡೆಗಣಿಸುತ್ತಿರು ವುದು ನೋವಿನ ಸಂಗತಿ. ಆಂಗ್ಲ ಮಾಧ್ಯಮ ವ್ಯಾಮೋಹ ಮತ್ತು ವೃತ್ತಿ ಬದುಕಿನ ಅವ ಶ್ಯಕತೆ ಕಾರಣ ಎಲ್ಲರೂ ಇಂದು ಆಂಗ್ಲ ಮಾಧ್ಯಮದ ಕಡೆ ಒಲವು ತೋರುತ್ತಿ ದ್ದಾರೆ ಎಂದು ವಿಷಾದಿಸಿದರು.

ಯಾವುದೇ ಮಾಧ್ಯಮದಲ್ಲಿ ವಿದ್ಯಾ ಭ್ಯಾಸ ಮಾಡುತ್ತಿದ್ದರೂ ಕನ್ನಡ ಭಾಷೆ ಕಲಿಸುವುದಕ್ಕೆ ಹಾಗೂ ಮನೆ ಮತ್ತು ಹೊರಗೆ ಕನ್ನಡದಲ್ಲಿ ಸ್ಪಷ್ಟವಾಗಿ ಮಾತ ನಾಡುವುದನ್ನು ಮಕ್ಕಳಿಗೆ ಕಲಿಸಬೇಕು. ಆಂಗ್ಲ ಪದ ಉಪಯೋಗಿಸದೆ ಅಚ್ಚ ಕನ್ನಡದಲ್ಲಿ 2-3 ನಿಮಿಷ ಮಾತನಾಡು ವುದೇ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ನೆಲ, ಜಲ, ಭಾಷೆಯನ್ನು ತಾಯಿಯ ರೂಪದಲ್ಲಿ ಗೌರವಿಸಿ ಉಳಿಸುವ ಅವಶ್ಯ ಕತೆ ಇದೆ. ಅಚ್ಚ ಕನ್ನಡ ಭಾಷೆಯನ್ನ ಯಾರು ಹೆಚ್ಚು ಬಳಸುತ್ತಾರೆ ಅವರಿಗೆ ಬಹುಮಾನ ನೀಡುವ ಸ್ಪರ್ಧೆಯನ್ನು ಮುಂದಿನ ವರ್ಷ ಏರ್ಪಡಿಸಲು ಯೋಜನೆ ರೂಪಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಪಾಲಿಕೆ ವಾರ್ಡ್‍ಗಳ ಬಿಜೆಪಿ ಸದಸ್ಯರು, ಸರ್ಕಾರಿ ಶಾಲೆಗಳ ಮಕ್ಕಳು, ಶಿಕ್ಷ ಕರು, ಪ್ರಾಂಶುಪಾಲರು, ದಕ್ಷಿಣ ಕ್ಷೇತ್ರ ಶಿಕ್ಷ ಣಾಧಿಕಾರಿಗಳು, ಹಲವು ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Translate »