15 ದಿನದಿಂದ ಮುಚ್ಚಿರುವ ಬೆಳವಾಡಿಯ ಎಂ.ಕೆ. ಫ್ಯಾಷನ್ ವಲ್ರ್ಡ್ ಕಾರ್ಖಾನೆ ತೆರೆಯಲು ಆಗ್ರಹ
ಮೈಸೂರು

15 ದಿನದಿಂದ ಮುಚ್ಚಿರುವ ಬೆಳವಾಡಿಯ ಎಂ.ಕೆ. ಫ್ಯಾಷನ್ ವಲ್ರ್ಡ್ ಕಾರ್ಖಾನೆ ತೆರೆಯಲು ಆಗ್ರಹ

November 3, 2018

ದಲಿತ ವೆಲ್‍ಫೇರ್ ಟ್ರಸ್ಟ್‍ನಿಂದ ನವೆಂಬರ್‍ನಲ್ಲಿ ಟಿಪ್ಪು ಜಯಂತಿ; ಮಾಜಿ ಸಿಎಂ ಸಿದ್ದರಾಮಯ್ಯಗೆ ಅಭಿನಂದನಾ ಸಮಾರಂಭ
ಮೈಸೂರು:  ಮೈಸೂರಿನ ಇತರೆ ಸಂಘಟನೆಗಳ ಸಹಯೋಗದಲ್ಲಿ ದಲಿತ ವೆಲ್‍ಫೇರ್ ಟ್ರಸ್ಟ್ ನವೆಂಬರ್ ತಿಂಗಳಲ್ಲಿ ಮೈಸೂರಿನ ಕಲಾಮಂದಿರದಲ್ಲಿ ಅದ್ಧೂರಿ ಟಿಪ್ಪು ಜಯಂತಿ ಆಚರಣೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾವiಯ್ಯರಿಗೆ ಅಭಿ ನಂದನಾ ಸಮಾರಂಭ ಹಮ್ಮಿಕೊಳ್ಳಲಿದೆ ಎಂದು ಟ್ರಸ್ಟ್‍ನ ಅಧ್ಯಕ್ಷ ಶಾಂತರಾಜು ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಮಟ್ಟದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಆದೇಶ ಹೊರಡಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸನ್ಮಾನಿಸಲಾಗುವುದು ಎಂದರು. ಮೈಸೂರಿನ ವಿಮಾನ ನಿಲ್ದಾಣ ವನ್ನು ಮೇಲ್ದರ್ಜೆಗೇರಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಬೇಕು ಎಂದು ಒತ್ತಾಯಿ ಸಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮೈಸೂರು ವಿಶ್ವ ವಿದ್ಯಾ ನಿಲಯ ತನ್ನದೇ ಆದ ಹಿರಿಮೆ ಗರಿಮೆ ಹೊಂದಿದ್ದು, ಇದರ ಹೆಸರನ್ನು ಯಥಾ ರೀತಿ ಯಲ್ಲಿ ಮುಂದುವರೆಸಬೇಕು ಎಂದು ಆಗ್ರಹಿಸಿದರು. ಹಿಂಬಡ್ತಿ ಕಾನೂನು ರಚಿಸಿ, ರಾಜ್ಯ ಸರ್ಕಾರವು ದಲಿತರಿಗೆ ಅನ್ಯಾಯ ಮಾಡುತ್ತಿದ್ದು, ದಲಿತ ವರ್ಗದ ನೌಕರರಿಗೆ ಸುಪ್ರಿಂ ಕೋರ್ಟ್ ಜಾರಿಗೊಳಿಸಿರುವ ಹಿಂಬಡ್ತಿ ತೀರ್ಪು ಮಾರಕವಾಗಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು

ಪ್ರತಾಪ್‍ಸಿಂಹ ಹೇಳಿಕೆಗೆ ಖಂಡನೆ: ಸಂಸದ ಪ್ರತಾಪ್‍ಸಿಂಹ ಸ್ಥಳೀಯ ಚರಿತ್ರೆಯನ್ನು ಆಳವಾಗಿ ಅರಿಯದೆ ಟಿಪ್ಪುವಿನ ಬಗ್ಗೆ ನಾಡಹಬ್ಬ ದಸರಾ ಉದ್ಘಾಟನಾ ಸಮಾ ರಂಭದಲ್ಲಿ ನೀಡಿರುವ ಹೇಳಿಕೆಯನ್ನು ಖಂಡಿಸಿದ ಅವರು, ಈ ಬಗ್ಗೆ ಪ್ರತಾಪ್‍ಸಿಂಹ ಕ್ಷಮೆ ಕೇಳಬೇಕು. ಸ್ವತಂತ್ರ ಸೇನಾನಿಯಾಗಿರುವ ಟಿಪ್ಪುವಿನ ಇತಿಹಾಸವನ್ನು ತಿರುಚ ಲಾಗಿದೆ. ಇನ್ನು ಮುಂದೆ ಟಿಪ್ಪು ವಿಚಾರದಲ್ಲಿ ಹೇಳಿಕೆ ನೀಡುವುದನ್ನು ನಿಲ್ಲಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

Translate »