ಮೈಸೂರಲ್ಲಿ ವಿದ್ಯಾರ್ಥಿಗಳ ಸ್ಥೈರ್ಯ ಹೆಚ್ಚಿಸಿದ   `ಪರೀಕ್ಷೆಯಲ್ಲ.. ಹಬ್ಬ’ ಕಾರ್ಯಕ್ರಮ
ಮೈಸೂರು

ಮೈಸೂರಲ್ಲಿ ವಿದ್ಯಾರ್ಥಿಗಳ ಸ್ಥೈರ್ಯ ಹೆಚ್ಚಿಸಿದ `ಪರೀಕ್ಷೆಯಲ್ಲ.. ಹಬ್ಬ’ ಕಾರ್ಯಕ್ರಮ

January 26, 2019

ಮೈಸೂರು: ನಾವು ಧೈರ್ಯದಿಂದ ಪರೀಕ್ಷೆ ಎದುರಿಸಿ ಎಸ್‍ಎಸ್ ಎಲ್‍ಸಿಯಲ್ಲಿ ಟಾಪರ್ ಆಗುತ್ತೇವೆಂದು ಶುಕ್ರವಾರ ಮೈಸೂರಿನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ನಡೆದ 1280 ವಿದ್ಯಾರ್ಥಿಗಳು ಸಂಕಲ್ಪ ತೊಟ್ಟಿದ್ದಾರೆ.

ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಕಲ್ಪನೆಯ `ಪರೀಕ್ಷೆಯ.. ಹಬ್ಬ’ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಉತ್ತಮೀಕರಣಕ್ಕಾಗಿ ಪ್ರೇರೇಪಣಾ ಕಾರ್ಯ ಕ್ರಮದಲ್ಲಿ ಮೈಸೂರಿನ 80ಕ್ಕೂ ಹೆಚ್ಚು ಖಾಸಗಿ ಮತ್ತು ಸರ್ಕಾರಿ ಪ್ರೌಢಶಾಲೆಗಳ 1280 ವಿದ್ಯಾರ್ಥಿಗಳು ಭಾಗವಹಿಸಿ, ಎಸ್‍ಎಸ್ ಎಲ್‍ಸಿ ಪರೀಕ್ಷೆ ಎದುರಿಸುವ ಬಗ್ಗೆ ಇದ್ದ ಭಯ, ಆತಂಕದಿಂದ ದೂರವಾದರು.

ಬೆಳಿಗ್ಗೆ 654 ಹಾಗೂ ಮಧ್ಯಾಹ್ನ 628 ಹೀಗೆ ಎರಡು ಹಂತದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಶಾಸಕ ಎಸ್.ಎ.ರಾಮದಾಸ್ ಇಡೀ ದಿನ ಉಪಸ್ಥಿತರಿದ್ದು, ವಿದ್ಯಾರ್ಥಿ ಗಳಿಗೆ ಉತ್ತೇಜನ ನೀಡುವಂತಹ ಮಾತು ಗಳನ್ನು ಆಡಿದರು. ಸಂಪನ್ಮೂಲ ವ್ಯಕ್ತಿಗ ಳಾಗಿದ್ದ ಜಿಎಸ್‍ಎಸ್‍ನ ಶ್ರೀಹರಿ, ವಿದ್ಯಾ ವರ್ಧಕ ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಾಬುರಾಜೇಂದ್ರ ಪ್ರಸಾದ್, ವಿವೇಕಾನಂದ ಯೂತ್ ಮೂವ್ ಮೆಂಟ್ ಕಾರ್ಯದರ್ಶಿ ಎಂ.ಎ.ಬಾಲಸುಬ್ರ ಹ್ಮಣ್ಯ ವಿದ್ಯಾರ್ಥಿಗಳ ಪ್ರಶ್ನೆ ಹಾಗೂ ಸಂದೇಹ ಗಳಿಗೆ ಅರ್ಥಸಹಿತ, ವಿಶ್ಲೇಷಣಾತ್ಮಕವಾಗಿ ವಿದ್ಯಾರ್ಥಿಗಳ ಮನ ಮುಟ್ಟಿಸುವಲ್ಲಿ ಸಫಲ ರಾದರು. ಪರೀಕ್ಷೆಗೆ ಸಿದ್ಧತೆ, ಪರೀಕ್ಷೆ ಎದುರಿ ಸುವ ಹಾಗೂ ಬರೆಯುವ ವಿಧಾನಗಳ ಬಗ್ಗೆ ತಿಳುವಳಿಕೆ ಮೂಡಿಸಿದರು. ನಾನು ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯಬಲ್ಲೆ, ಹೆಚ್ಚು ಅಂಕ ತೆಗೆಯಬಲ್ಲೆ ಎಂಬ ಆತ್ಮ ವಿಶ್ವಾಸ ಹೊಂದಬೇಕು ಎಂದು ಹೇಳುವ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಪರೀಕ್ಷೆಯ ಹಿಂದಿನ ದಿನ ಓದಿದ ರಾಯಿತು ಎಂಬ ಮನೋಭಾವ ಬಿಟ್ಟು ಆಯಾ ದಿನಗಳ ಪಾಠಗಳನ್ನು ಅಂದೇ ಮನನ ಮಾಡುವ ಮೂಲಕ ಓದಿನಲ್ಲಿ ಆಸಕ್ತಿ ಇಟ್ಟು ಕೊಳ್ಳಬೇಕು. ಪ್ರತಿದಿನದ ಚಟುವಟಿಕೆ ಗಳನ್ನು ಕುರಿತ ಡೈರಿ ಬರೆ ಯುವ ಅಭ್ಯಾಸ ಮಾಡಬೇಕು. ಪ್ರತಿದಿನ ಹೊಸದು ಎಂಬ ದೃಢತೆ ಬರಬೇಕು. ನಾವು ಪ್ರತಿದಿನ ಹೊಸ ಮನುಷ್ಯರಾಗಬೇಕು. ಪರೀಕ್ಷೆಗೆ ಉಳಿದಿರುವ ದಿನಗಳನ್ನು ಕಳೆಯುವುದು ಹೇಗೆ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಂಡು ಪರೀಕ್ಷೆಗೆ ಸಿದ್ದ ಪಡಿಸಿಕೊಳ್ಳಬೇಕು. ಪೂರ್ವಭಾವಿ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಅಧ್ಯಯನ ಮಾಡಬೇಕು. ಯಾವ ಪಾಠದಿಂದ ಎಷ್ಟು ಅಂಕ ಬರುತ್ತದೆ ಎಂದು ಮೊದಲೇ ಅರಿತು ಅದಕ್ಕೆ ತಕ್ಕಂತೆ ಪಾಠಗಳನ್ನು ಓದಿ ಮನನ ಮಾಡಿಕೊಳ್ಳಬೇಕು. ಓದಿದ ಬಳಿಕ ಅದನ್ನು ಬರೆಯುವ ಮೂಲಕ ಮನನ ಮಾಡಿಕೊಳ್ಳ ಬೇಕು. 5 ಪ್ರಶ್ನೆಗಳಿಗೆ ಪೂರಕವಾದ ಉತ್ತರಗಳನ್ನು ಓದಿಕೊಂದು ನಂತರ ಆ ಉತ್ತರಗಳನ್ನು ಬರೆದು ಅಭ್ಯಾಸ ಮಾಡಬೇಕು. ನಂತರ ನಾವು ಬರೆದ ಉತ್ತರವನ್ನು ನಾವೇ ಮೌಲ್ಯಮಾಪನ ಮಾಡಿ ನೋಡಬೇಕು ಎಂದು ವಿವರಿಸಿದರು.

ಶಾರದಾ ವಿಲಾಸ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿ, ಕ್ಷೇತ್ರ ಶಿಕ್ಷಣಾ ಧಿಕಾರಿ ಶಿವಕುಮಾರ್, ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ರಾಜಶೇಖರ್, ಸೇಫ್ ವೀಲ್ಸ್‍ನ ಪ್ರಶಾಂತ್, ಮೈಸೂರು ದಕ್ಷಿಣ ವಲಯ ಇಸಿಓ ಎಂ.ಮನೋಹರ, ಕುಮಾರ್, ಸಿಆರ್‍ಪಿ ಕಾವ್ಯಶ್ರೀ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »