Tag: SA Ramdas

ಮೈಸೂರಲ್ಲಿ ವಿದ್ಯಾರ್ಥಿಗಳ ಸ್ಥೈರ್ಯ ಹೆಚ್ಚಿಸಿದ   `ಪರೀಕ್ಷೆಯಲ್ಲ.. ಹಬ್ಬ’ ಕಾರ್ಯಕ್ರಮ
ಮೈಸೂರು

ಮೈಸೂರಲ್ಲಿ ವಿದ್ಯಾರ್ಥಿಗಳ ಸ್ಥೈರ್ಯ ಹೆಚ್ಚಿಸಿದ `ಪರೀಕ್ಷೆಯಲ್ಲ.. ಹಬ್ಬ’ ಕಾರ್ಯಕ್ರಮ

January 26, 2019

ಮೈಸೂರು: ನಾವು ಧೈರ್ಯದಿಂದ ಪರೀಕ್ಷೆ ಎದುರಿಸಿ ಎಸ್‍ಎಸ್ ಎಲ್‍ಸಿಯಲ್ಲಿ ಟಾಪರ್ ಆಗುತ್ತೇವೆಂದು ಶುಕ್ರವಾರ ಮೈಸೂರಿನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ನಡೆದ 1280 ವಿದ್ಯಾರ್ಥಿಗಳು ಸಂಕಲ್ಪ ತೊಟ್ಟಿದ್ದಾರೆ. ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಕಲ್ಪನೆಯ `ಪರೀಕ್ಷೆಯ.. ಹಬ್ಬ’ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಉತ್ತಮೀಕರಣಕ್ಕಾಗಿ ಪ್ರೇರೇಪಣಾ ಕಾರ್ಯ ಕ್ರಮದಲ್ಲಿ ಮೈಸೂರಿನ 80ಕ್ಕೂ ಹೆಚ್ಚು ಖಾಸಗಿ ಮತ್ತು ಸರ್ಕಾರಿ ಪ್ರೌಢಶಾಲೆಗಳ 1280 ವಿದ್ಯಾರ್ಥಿಗಳು ಭಾಗವಹಿಸಿ, ಎಸ್‍ಎಸ್ ಎಲ್‍ಸಿ ಪರೀಕ್ಷೆ ಎದುರಿಸುವ ಬಗ್ಗೆ ಇದ್ದ ಭಯ, ಆತಂಕದಿಂದ ದೂರವಾದರು. ಬೆಳಿಗ್ಗೆ 654 ಹಾಗೂ…

ಜೆ.ಪಿ.ನಗರ ಎ ಬ್ಲಾಕ್‍ನಲ್ಲಿ ಶಾಸಕ  ರಾಮದಾಸ್ ಸ್ವಚ್ಛತಾ ಅಭಿಯಾನ
ಮೈಸೂರು

ಜೆ.ಪಿ.ನಗರ ಎ ಬ್ಲಾಕ್‍ನಲ್ಲಿ ಶಾಸಕ ರಾಮದಾಸ್ ಸ್ವಚ್ಛತಾ ಅಭಿಯಾನ

December 24, 2018

ಮೈಸೂರು:  ಸ್ವಚ್ಛ ಭಾರತ ಅಭಿಯಾನದಡಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಭಾನುವಾರ ಮೈಸೂರಿನ 62ನೇ ವಾರ್ಡ್ ವ್ಯಾಪ್ತಿಯ ಜೆ.ಪಿ.ನಗರ ಎ ಬ್ಲಾಕ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. `ಸ್ವಚ್ಛ ಭಾನುವಾರ – ಹಸಿರು ಭಾನು ವಾರ’ ಸಂದೇಶದೊಂದಿಗೆ ವಾರಕ್ಕೊಂದು ವಾರ್ಡ್‍ನಲ್ಲಿ ಸ್ವಚ್ಛತಾ ಅಭಿಯಾನ ನಡೆ ಸುತ್ತಿರುವ ಅವರು ಸ್ಥಳೀಯ ನಾಗರಿಕರಿಗೆ ಸ್ವಚ್ಛತೆಯ ಅರಿವು ಮೂಡಿಸುತ್ತಾ ಬರುತ್ತಿ ದ್ದಾರೆ. ಅಂತೆಯೇ ಇಂದು ಸಹ ಪೌರ ಕಾರ್ಮಿಕರು, ಸಂಘ ಸಂಸ್ಥೆಗಳು, ಯೋಗ ಪಟುಗಳು ಹಾಗೂ ಸಾರ್ವಜನಿಕರ ಸಹ ಕಾರದಲ್ಲಿ…

ಬೆಂಗಳೂರು ಸೇರಿ ರಾಜ್ಯದ 4 ನಗರ  ಹೆಚ್ಚು ಮಾಲಿನ್ಯ ಹೊಂದಿದ ನಗರಗಳು
ಮೈಸೂರು

ಬೆಂಗಳೂರು ಸೇರಿ ರಾಜ್ಯದ 4 ನಗರ ಹೆಚ್ಚು ಮಾಲಿನ್ಯ ಹೊಂದಿದ ನಗರಗಳು

December 18, 2018

ಬೆಂಗಳೂರು: ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಹಾಗೂ ಗುಲ್ಬರ್ಗಾ ಹೆಚ್ಚು ವಾಯು ಮಾಲಿನ್ಯ ಹೊಂದಿರುವ ನಗರಗಳೆಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಗುರುತಿಸಿದೆ ಎಂದು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವ ಆರ್.ಶಂಕರ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮ ದಾಸ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ 4 ನಗರಗಳ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ಮೇರೆಗೆ ಕ್ರಿಯಾ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಲು ಇಲಾಖೆಯ ಪ್ರಧಾನ…

ಕನ್ನಡ-ಸರ್ಕಾರಿ ಶಾಲೆ ಉಳಿಸಿ-ಬೆಳೆಸಲು ಪ್ರತಿಜ್ಞೆ
ಮೈಸೂರು

ಕನ್ನಡ-ಸರ್ಕಾರಿ ಶಾಲೆ ಉಳಿಸಿ-ಬೆಳೆಸಲು ಪ್ರತಿಜ್ಞೆ

November 3, 2018

ಮೈಸೂರು: ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಗುರುವಾರ ಅರಮನೆಯ ಆವರಣದಲ್ಲಿರುವ ಭುವನೇ ಶ್ವರಿ ದೇವಾಲಯದ ಬಳಿ ಶಾಸಕ ಎಸ್.ಎ. ರಾಮದಾಸ್ ನೇತೃತ್ವದಲ್ಲಿ ಆರಂಭಿಸಿದ ‘ಸರ್ಕಾರಿ ಮತ್ತು ಕನ್ನಡ ಶಾಲೆ ಉಳಿಸಿ-ಬೆಳೆಸಿ’ ಅಭಿಯಾನದಲ್ಲಿ ನೂರಾರು ವಿದ್ಯಾರ್ಥಿ ಗಳು ಹಾಗೂ ಶಿಕ್ಷಕರು ಮತ್ತು ಪಾಲಿಕೆ ಸದ ಸ್ಯರು ಪಾಲ್ಗೊಂಡು ಪ್ರತಿಜ್ಞೆ ಸ್ವೀಕರಿಸಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಸಕ ಎಸ್.ಎ.ರಾಮದಾಸ್ ಅವರು ಭುವನೇ ಶ್ವರಿ ದೇವಿಯ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ‘ಕನ್ನಡ ಹಾಗೂ ಸರ್ಕಾರಿ ಶಾಲೆ ಉಳಿಸಿ, ಬೆಳೆಸಿ’ ಅಭಿಯಾನಕ್ಕೆ ಚಾಲನೆ ನೀಡಿದರು….

ಜಾನಪದ ಮನುಷ್ಯನ ಬದುಕಿನ ಪದ್ಧತಿ
ಮೈಸೂರು

ಜಾನಪದ ಮನುಷ್ಯನ ಬದುಕಿನ ಪದ್ಧತಿ

September 24, 2018

ಮೈಸೂರು: ಜಾನಪದ ಕೇವಲ ಗೆಜ್ಜೆ ಕಟ್ಟಿ ಕುಣಿಯುವುದಲ್ಲ. ಅದ ರಲ್ಲಿ ಮನುಷ್ಯ ಹೇಗೆ ಬದುಕಬೇಕು ಎಂದು ತಿಳಿಸುವ ಜೀವನ ಶೈಲಿ, ಆಹಾರ ಪದ್ದತಿ ಮತ್ತು ವೈದ್ಯ ಪದ್ದತಿಯಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಅಭಿಪ್ರಾಯಿಸಿದರು. ಮೈಸೂರಿನ ರಂಗಾಯಣದ ವನರಂಗ ದಲ್ಲಿ ನಡೆದ ರಂಗಹೆಜ್ಜೆ ಕಲ್ಚರಲ್ ಟ್ರಸ್ಟ್‍ನ ಉದ್ಘಾಟನೆ ಹಾಗೂ ಜನಪದ ನೃತ್ಯೋ ತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಎಂಬುದು ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಎಲ್ಲೆಡೆ ಹರಡಬೇಕು ಎಂದರು. ಜಾನಪದ ಕಾರ್ಯಕ್ರಮಗಳು ದಸರಾ…

ಶಾಸಕ ರಾಮದಾಸರ ‘ಜನಸ್ಪಂದನಾ ಕಚೇರಿ’ ಉದ್ಘಾಟನೆ: ಕೆ.ಆರ್. ಕ್ಷೇತ್ರ ಮಾದರಿ ಮಾಡುವ ಉದ್ದೇಶ
ಮೈಸೂರು

ಶಾಸಕ ರಾಮದಾಸರ ‘ಜನಸ್ಪಂದನಾ ಕಚೇರಿ’ ಉದ್ಘಾಟನೆ: ಕೆ.ಆರ್. ಕ್ಷೇತ್ರ ಮಾದರಿ ಮಾಡುವ ಉದ್ದೇಶ

September 9, 2018

ಮೈಸೂರು:  ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಕಾಡಾ ಕಚೇರಿ ಸಂಕೀರ್ಣದಲ್ಲಿ ಕೆಆರ್ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರ `ಜನಸ್ಪಂದನಾ ಕಚೇರಿ (ಶಾಸಕರ ಕಚೇರಿ)’ ಶನಿವಾರ ಉದ್ಘಾಟನೆಗೊಂಡಿತು. ತಳಿರು-ತೋರಣ ಹಾಗೂ ಹೂವಿನಿಂದ ಶೃಂಗರಿಸಿದ್ದ `ಜನಸ್ಪಂದನಾ ಕಚೇರಿ’ಯನ್ನು ಬಿಜೆಪಿ ಹಿರಿಯ ಮುಖಂಡರೂ ಆದ ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಉದ್ಘಾಟಿಸಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಹಾಗೂ ಮಾಜಿ ಸಚಿವರೂ ಆದ ಎಸ್.ಎ.ರಾಮದಾಸ್, ಎಲ್ಲಾ ಇಲಾಖೆಗಳ ನಿರಂತರ ಸಂಪರ್ಕಕ್ಕೆ ಕಚೇರಿ ವ್ಯವಸ್ಥೆಯಿಂದ ಅನುಕೂಲವಾಗಲಿದೆ. ಕೆಆರ್ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ…

ಮೈಸೂರು ಪಾಲಿಕೆಯಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರ ಹಿಡಿಯಲಿದೆ
ಮೈಸೂರು

ಮೈಸೂರು ಪಾಲಿಕೆಯಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರ ಹಿಡಿಯಲಿದೆ

August 26, 2018

ಮೈಸೂರು: ಪಾಲಿಕೆ ಚುನಾವಣೆಯಲ್ಲಿ ಕೆಆರ್ ಕ್ಷೇತ್ರದ ಒಟ್ಟು ಇರುವ 20 ವಾರ್ಡ್‍ಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ಹೊಂದಿದ್ದು, ಈ ಬಾರಿ ಪಾಲಿಕೆಯಲ್ಲಿ 38ರಿಂದ 40 ಸ್ಥಾನಗಳನ್ನು ಗಳಿಸಿ, ಬಿಜೆಪಿ ಸ್ವಂತ ಶಕ್ತಿ ಮೇಲೆ ಪಾಲಿಕೆ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಸಚಿವರೂ ಆದ ಕೆಆರ್ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ರಚನೆಯಾದ ಬಳಿಕ ಈವರೆಗೂ ಬಿಜೆಪಿ ಸ್ವಂತ ಶಕ್ತಿಯಿಂದ ಮೇಯರ್…

ಮೈಸೂರು ಪಾಲಿಕೆ ಚುನಾವಣೆ : ಕೆಆರ್ ಕ್ಷೇತ್ರದಲ್ಲಿ ಬಿಜೆಪಿ ಎಲ್ಲಾ ವಾರ್ಡ್ ಗೆಲುವಿನ ಟಾರ್ಗೆಟ್-20
ಮೈಸೂರು

ಮೈಸೂರು ಪಾಲಿಕೆ ಚುನಾವಣೆ : ಕೆಆರ್ ಕ್ಷೇತ್ರದಲ್ಲಿ ಬಿಜೆಪಿ ಎಲ್ಲಾ ವಾರ್ಡ್ ಗೆಲುವಿನ ಟಾರ್ಗೆಟ್-20

August 15, 2018

ಮೈಸೂರು:  ಬಿಜೆಪಿ ಭದ್ರಕೋಟೆಯಾಗಿರುವ ಕೃಷ್ಣರಾಜ ಕ್ಷೇತ್ರದಲ್ಲಿ ಮೈಸೂರು ಪಾಲಿಕೆ ಚುನಾವಣೆಯಲ್ಲಿ ಜಾತಿ ಮೀಸಲಾತಿಯ ಮೂಲಕ ಬಿಜೆಪಿಯನ್ನು ಕಟ್ಟಿ ಹಾಕಲು ಜೆಡಿಎಸ್ ಮತ್ತು ಕಾಂಗ್ರೆಸ್ ಸಂಚು ರೂಪಿಸಿದ್ದು, ಪಕ್ಷದ ಕಾರ್ಯಕರ್ತರು ಟಾರ್ಗೆಟ್-20 ಸೂತ್ರದೊಂದಿಗೆ ಅಭ್ಯರ್ಥಿಗಳ ಗೆಲುವಿಗೆ ಪಣ ತೊಡಬೇಕೆಂದು ಶಾಸಕ ಎಸ್.ಎ.ರಾಮದಾಸ್ ಸಲಹೆ ನೀಡಿದ್ದಾರೆ. ಮೈಸೂರು ನಗರ ಪಾಲಿಕೆಯ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಗನ್‍ಹೌಸ್ ವೃತ್ತದ ಬಳಿ ಇರುವ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ಕೃಷ್ಣರಾಜ ಕ್ಷೇತ್ರದ ವಿವಿಧ ವಾರ್ಡ್‍ಗಳಿಂದ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ…

ಜನೌಷಧ ಕೇಂದ್ರದಲ್ಲಿ ಔಷಧಿ ಕೊರತೆಯಾಗದಂತೆ ಕೇಂದ್ರ ಸರ್ಕಾರದಿಂದ ಕ್ರಮ ಶಾಸಕ ಎಸ್. ರಾಮದಾಸ್
ಮೈಸೂರು

ಜನೌಷಧ ಕೇಂದ್ರದಲ್ಲಿ ಔಷಧಿ ಕೊರತೆಯಾಗದಂತೆ ಕೇಂದ್ರ ಸರ್ಕಾರದಿಂದ ಕ್ರಮ ಶಾಸಕ ಎಸ್. ರಾಮದಾಸ್

August 13, 2018

ಮೈಸೂರು: ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ ವಿವಿಧೆಡೆಯಿರುವ 4400ಕ್ಕೂ ಹೆಚ್ಚು ಪ್ರಧಾನ ಮಂತ್ರಿ ಜನೌಷದ ಕೇಂದ್ರಗಳಲ್ಲಿ ಔಷಧಗಳ ಕೊರತೆ ಉಂಟಾಗದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ. ಜನೌಷಧ ಕೇಂದ್ರಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಅನಂತ್ ಕುಮಾರ್ ಅವರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿರುವ ಜನೌಷಧಿ ಕೇಂದ್ರಗಳ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಿ, ಇನ್ನಷ್ಟು ಔಷಧಿಗಳು ಲಭ್ಯವಾಗುವುದರೊಂದಿಗೆ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಔಷಧ ಪೂರೈಕೆಗೆ ಕ್ರಮ ಕೈಗೊಳ್ಳುವುದರೊಂದಿಗೆ ಅಗತ್ಯ…

Translate »