ಜಾನಪದ ಮನುಷ್ಯನ ಬದುಕಿನ ಪದ್ಧತಿ
ಮೈಸೂರು

ಜಾನಪದ ಮನುಷ್ಯನ ಬದುಕಿನ ಪದ್ಧತಿ

September 24, 2018

ಮೈಸೂರು: ಜಾನಪದ ಕೇವಲ ಗೆಜ್ಜೆ ಕಟ್ಟಿ ಕುಣಿಯುವುದಲ್ಲ. ಅದ ರಲ್ಲಿ ಮನುಷ್ಯ ಹೇಗೆ ಬದುಕಬೇಕು ಎಂದು ತಿಳಿಸುವ ಜೀವನ ಶೈಲಿ, ಆಹಾರ ಪದ್ದತಿ ಮತ್ತು ವೈದ್ಯ ಪದ್ದತಿಯಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಅಭಿಪ್ರಾಯಿಸಿದರು.

ಮೈಸೂರಿನ ರಂಗಾಯಣದ ವನರಂಗ ದಲ್ಲಿ ನಡೆದ ರಂಗಹೆಜ್ಜೆ ಕಲ್ಚರಲ್ ಟ್ರಸ್ಟ್‍ನ ಉದ್ಘಾಟನೆ ಹಾಗೂ ಜನಪದ ನೃತ್ಯೋ ತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಎಂಬುದು ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಎಲ್ಲೆಡೆ ಹರಡಬೇಕು ಎಂದರು.

ಜಾನಪದ ಕಾರ್ಯಕ್ರಮಗಳು ದಸರಾ ಸಂದರ್ಭದಲ್ಲಿ ಮಾತ್ರವಲ್ಲದೆ, ವರ್ಷ ಪೂರ್ತಿ ನಡೆಯಬೇಕು. ಬ್ರಿಟಿಷ್ ಅಧಿಕಾರಿ ಯಾದ ಮೆಕಾಲೆಯ ಇಂಗ್ಲೀಷ್ ಶಿಕ್ಷಣ ನೀತಿಯಿಂದ ನಾವು ಜಾನಪದ ಸಂಸ್ಕøತಿ ಯನ್ನು ಮರೆಯುತ್ತಿದ್ದೇವೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿವೆ. ನಾನು ಸಚಿವನಾಗಿದ್ದಾಗ ಜಾನಪದಕ್ಕೆ ಸಂಬಂ ಧಿಸಿದಂತೆ ಜಾನಪದ ವೈದ್ಯ, ಜಾನಪದ ವಿಜ್ಞಾನ ಎಂಬಂತಹ ಸುಮಾರು 40 ಪುಸ್ತಕ ಗಳನ್ನು ಹೊರ ತರುವಲ್ಲಿ ಪ್ರಯತ್ನ ಮಾಡಿ ದ್ದೇವೆ. ಸಾವಿರಾರು ವರ್ಷಗಳ ಹಿಂದೆ ಜಾನ ಪದ ಸಾಹಿತ್ಯ ಹೇಗಿತ್ತು ಎಂಬುದÀರ ಬಗ್ಗೆ ಸಂಶೋಧನೆಯಾಗಬೇಕು. ಜಾನ ಪದವು ಗ್ರಹಣ, ಅಮವಾಸ್ಯೆ ಮತ್ತು ಗ್ರಹಗಳ ಚಲನೆ ಯನ್ನು ತಿಳಿಸುತ್ತದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ದೇಶಕ್ಕೆ ಎದುರಾಗಿ ರುವ ದೊಡ್ಡ ಸಮಸ್ಯೆ ಎಂದರೆ ಯುವ ಕರು ಮಾದಕ ವ್ಯಸನಿಗಳಿಗೆ ಬಲಿಯಾಗು ತ್ತಿರುವುದು. ಪಂಜಾಬ್ ರಾಜ್ಯದ ಅಲ್ಲಿನ ಯುವತಿಯರು ಬೇರೆ ರಾಜ್ಯದ ಯುವಕ ರನ್ನು ಮದುವೆಯಾಗಲು ಬಯಸುತ್ತಿದ್ದಾರೆ. ಇದಕ್ಕೆ ಕಾರಣ ಆ ರಾಜ್ಯದ ಯುವಕರು ಮಾದಕ ವ್ಯಸನಿಯ ದಾಸರಾಗಿರುವುದಾ ಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲಿ ಆಗ ದಂತೆ ಎಚ್ಚರವಹಿಸಬೇಕು ಎಂದರು.

ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ಜಾನಪದ ಎಂಬುದು ತಾಯಿ ಬೇರು. ಸುಗಮ ಸಂಗೀತ, ನೃತ್ಯ, ಶಾಸ್ತ್ರೀಯ ಸಂಗೀತವೆಲ್ಲವು ಜಾನಪದದ ಪ್ರಕಾರಗಳಾ ಗಿವೆ. ಜಾನಪದ ಕಲಾವಿದರಿಗೆ ಸರಿಯಾದ ವೇದಿಕೆಗಳು ಸಿಗಬೇಕು. ದಸರಾ ಉತ್ಸವ ದಲ್ಲಿ ಜಾನಪದ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ರಂಗ ಕಲಾವಿದ ಮೈಮ್ ರಮೇಶ್, ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಅಂತರರಾಷ್ಟ್ರೀಯ ಹೃದಯ ಶಸ್ತ್ರ ಚಿಕಿತ್ಸಾ ತಜ್ಞೆ ಡಾ.ಜೆ.ವೀಣು, ಚಲನಚಿತ್ರ ನಟ ಜಯಪ್ರಕಾಶ್, ಬಿ.ಎಂ. ನಾಗೇಶ್‍ರಾಜ್, ರಂಗ ಹೆಜ್ಜೆ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಎಂ.ಚಿನ್ನಸ್ವಾಮಿ, ಎಂ.ಎಸ್. ಮನೋನ್ಮಣಿ ಮತ್ತಿತರರು ಇದ್ದರು.

Translate »