`ಸುಳಿ’ ಕೃತಿ ಬಿಡುಗಡೆ
ಮೈಸೂರು

`ಸುಳಿ’ ಕೃತಿ ಬಿಡುಗಡೆ

September 24, 2018

ಮೈಸೂರು:  ಕಲಾಮಂದಿರದ ಮನೆ ಯಂಗಳದಲ್ಲಿ ಹುಣಸೂರಿನ ಮಹಿಳಾ ಸರ್ಕಾರಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಬಿ.ನಂಜುಂಡಸ್ವಾಮಿ ಹರದನಹಳ್ಳಿ ಅವರು ರಚಿಸಿರುವ `ಸುಳಿ’ ಕೃತಿಯನ್ನು ಶನಿವಾರ ಲೋಕಾರ್ಪಣೆಗೊಳಿಸಲಾಯಿತು.

ಸ್ಪಂದನ ಸಾಂಸ್ಕøತಿಕ ಪರಿಷತ್ತು ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ. ನೀಲಗಿರಿ ಎಂ.ತಳವಾರ್ `ಸುಳಿ’ ಕೃತಿಯನ್ನು ಬಿಡುಗಡೆ ಗೊಳಿಸಿದರು. ಇದಕ್ಕೂ ಮುನ್ನ ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಡಿ.ಹರೀಶ್‍ಗೌಡ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ನಾನು ಪುಸ್ತಕ ಓದುವುದು ಕಡಿಮೆ. ಹಾಗಾಗಿ ಈ ಪುಸ್ತಕ ಹೇಗೆ ಮೂಡಿಬಂದಿದೆ ಎಂಬುದು ಗೊತ್ತಿಲ್ಲ. ನನ್ನ ತಂದೆ ಉನ್ನತ ಶಿಕ್ಷಣ ಸಚಿವರಾದ ಬಳಿಕ ಉನ್ನತ ಶಿಕ್ಷಣ ಎತ್ತ ಸಾಗುತ್ತಿದೆ ಎಂಬುದು ತಿಳಿದಿದೆ ಎಂದರು.

ಇಂದು ಅನೇಕ ಪ್ರಾಧ್ಯಾಪಕರು ಕೇವಲ ಪಾಠ, ಪ್ರವಚನ, ಮನೆ ಇಷ್ಟಕ್ಕೆ ಸೀಮಿತವಾಗಿದ್ದಾರೆ. ಜತೆಗೆ ಅನೇಕ ಮಂದಿ ಪಿಎಚ್.ಡಿ, ಸ್ನಾತಕೋತ್ತರ ಪದವಿ ಪಡೆದವರಿದ್ದರೂ ಕಲೆ, ಸಾಹಿತ್ಯ ಜತೆಗೆ ಸಂಶೋಧನೆಯಲ್ಲಿ ತೊಡಗುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಆದರೆ ಕೃತಿ ಕರ್ತೃ ನಂಜುಂಡಸ್ವಾಮಿ ಅವರು ಕಲೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಒಬ್ಬ ವ್ಯಕ್ತಿ ಯಾವುದೇ ಜಾತಿಗೆ ಸೇರಿದ್ದರೂ ಅವರು ಉನ್ನತ ಮಟ್ಟದಲ್ಲಿ ಬೆಳೆಯುವುದು ಬಹಳ ಮುಖ್ಯ. ಅದನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ಇಂದು ಸುಳಿ ಪುಸ್ತಕವನ್ನು ಬಿಡುಗಡೆ ಮಾಡಿದ್ದು, ನೆರೆದಿರುವ ಎಷ್ಟು ಮಂದಿ ಪುಸ್ತಕವನ್ನು ಓದುವ ಹವ್ಯಾಸ ಬೆಳೆಸಿಕೊಂಡಿ ದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ಯುವ ಬರಹಗಾರರು ಪ್ರೋತ್ಸಾಹಿಸಬೇಕು. ನಂಜುಂಡಸ್ವಾಮಿ ಅವರ ಬರಹ ಪ್ರವೃತ್ತಿ ಯಶಸ್ವಿಯಾಗಲೆಂದು ಹಾರೈಸುತ್ತೇನೆ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಹಾಸನ ಹೇಮಗಂಗೋತ್ರಿಯ ಸ್ನಾತ ಕೋತ್ತರ ಕೇಂದ್ರದ ನಿರ್ದೇಶಕ ಡಾ.ಮಧುವನ ಶಂಕರ್ ಅವರನ್ನು ಸನ್ಮಾನಿಸಲಾಯಿತು. ಸ್ಪಂದನಾ ಸಾಂಸ್ಕøತಿಕ ಪರಿಷತ್ತಿನ ಅಧ್ಯಕ್ಷ ಟಿ.ಸತೀಶ್ ಜವರೇಗೌಡ, ಕೆಎಸ್‍ಓಯು ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಮಣಿ, ಕೃತಿಕಾರ ಡಾ.ಬಿ.ನಂಜುಂಡಸ್ವಾಮಿ ಹರದನಹಳ್ಳಿ, ಸ್ಪಂದನಾ ಸಾಂಸ್ಕøತಿಕ ಪರಿಷತ್ ಹುಣಸೂರು ತಾಲೂಕು ಅಧ್ಯಕ್ಷ ಟಿ.ಲೋಕೇಶ್ ಹುಣಸೂರು ಮತ್ತಿತರರು ಉಪಸ್ಥಿತರಿದ್ದರು.

Translate »