ಮೈಸೂರಿನ ಜಯದೇವ ಆಸ್ಪತ್ರೆ ಸಿದ್ದರಾಮಯ್ಯ ಕೊಡುಗೆ: ಹೆಚ್.ಡಿ.ದೇವೇಗೌಡ
ಮೈಸೂರು

ಮೈಸೂರಿನ ಜಯದೇವ ಆಸ್ಪತ್ರೆ ಸಿದ್ದರಾಮಯ್ಯ ಕೊಡುಗೆ: ಹೆಚ್.ಡಿ.ದೇವೇಗೌಡ

September 24, 2018

ಮೈಸೂರು:  ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆ ಸ್ಥಾಪನೆಗೆ ಡಾ.ಮಂಜುನಾಥ್ ಪತ್ನಿ ಅನುಸೂಯ ಅವರೇ ಪ್ರ್ರಮುಖ ಕಾರಣ. ಇದನ್ನು ಮೈಸೂರಲ್ಲಿ ತೆರೆಯಲು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕೊಡುಗೆ ಕೂಡ ಇದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.

ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಯದೇವ ಹೃದ್ರೋಗ ಆಸ್ಪತ್ರೆ ಕರ್ನಾಟಕ ಮಾತ್ರವಲ್ಲದೆ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ಮತ್ತಿತರೆ ರಾಷ್ಟ್ರಗಳ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ನಾನು ಮಂಜುನಾಥ್ ಅವರ ಬಗ್ಗೆ ಮಾತನಾಡಿದರೆ ಉತ್ಪ್ರೇಕ್ಷೆ ಎನ್ನುತ್ತಾರೆ. ಡಾ.ಮಂಜುನಾಥ್ ಕಾರ್ಯ ವೈಖರಿ ಎಲ್ಲರಿಗೂ ಗೊತ್ತಿದ್ದು, ನಮ್ಮ ರಾಜ್ಯದ ಸರ್ಕಾರಿ ಸ್ವಾಮ್ಯದ ಜಯದೇವ ಆಸ್ಪತ್ರೆಗೆ ವಿಶ್ವದೆಲ್ಲೆಡೆ ಮನ್ನಣೆ ಗಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು, ಗುಲಬರ್ಗದಂತೆ ಶಿವಮೊಗ್ಗದಲ್ಲೂ ಜಯದೇವ ಆಸ್ಪತ್ರೆ ತೆರೆಯುವಂತೆ ಯಡಿಯೂರಪ್ಪರವರು ಮಂಜುನಾಥ್ ಅವರಿಗೆ ಹೇಳಿದ್ದರು. ಆದರೆ, ಸೂಕ್ತ ನಿರ್ವಹಣೆ ಮತ್ತು ಮೇಲ್ವಿಚಾರಕರು ಇಲ್ಲವೆಂದು ಕೈಬಿಟ್ಟಿದ್ದಾರೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದರು.

Translate »