ಜೆ.ಪಿ.ನಗರ ಎ ಬ್ಲಾಕ್‍ನಲ್ಲಿ ಶಾಸಕ  ರಾಮದಾಸ್ ಸ್ವಚ್ಛತಾ ಅಭಿಯಾನ
ಮೈಸೂರು

ಜೆ.ಪಿ.ನಗರ ಎ ಬ್ಲಾಕ್‍ನಲ್ಲಿ ಶಾಸಕ ರಾಮದಾಸ್ ಸ್ವಚ್ಛತಾ ಅಭಿಯಾನ

December 24, 2018

ಮೈಸೂರು:  ಸ್ವಚ್ಛ ಭಾರತ ಅಭಿಯಾನದಡಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಭಾನುವಾರ ಮೈಸೂರಿನ 62ನೇ ವಾರ್ಡ್ ವ್ಯಾಪ್ತಿಯ ಜೆ.ಪಿ.ನಗರ ಎ ಬ್ಲಾಕ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.

`ಸ್ವಚ್ಛ ಭಾನುವಾರ – ಹಸಿರು ಭಾನು ವಾರ’ ಸಂದೇಶದೊಂದಿಗೆ ವಾರಕ್ಕೊಂದು ವಾರ್ಡ್‍ನಲ್ಲಿ ಸ್ವಚ್ಛತಾ ಅಭಿಯಾನ ನಡೆ ಸುತ್ತಿರುವ ಅವರು ಸ್ಥಳೀಯ ನಾಗರಿಕರಿಗೆ ಸ್ವಚ್ಛತೆಯ ಅರಿವು ಮೂಡಿಸುತ್ತಾ ಬರುತ್ತಿ ದ್ದಾರೆ. ಅಂತೆಯೇ ಇಂದು ಸಹ ಪೌರ ಕಾರ್ಮಿಕರು, ಸಂಘ ಸಂಸ್ಥೆಗಳು, ಯೋಗ ಪಟುಗಳು ಹಾಗೂ ಸಾರ್ವಜನಿಕರ ಸಹ ಕಾರದಲ್ಲಿ ಸ್ಚಚ್ಛತಾ ಕಾರ್ಯ ನಡೆಸಿದರು.

ಶ್ರೀ ವಿಶ್ವೇಶ್ವರ ತೀರ್ಥ ಪಾದಂಗಳವರ ಉದ್ಯಾನದಲ್ಲಿ ಒಂದು ಶೌಚಾಲಯ ನಿರ್ಮಿಸಿ ಕೊಡುವಂತೆ ಕೋರಿದ ಸ್ಥಳೀಯರ ಕೋರಿಕೆಗೆ ಪ್ರತಿಕ್ರಿಯಿಸಿದ ಶಾಸಕರು, ಶೀಘ್ರ ದಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಶೌಚಾ ಲಯ ನಿರ್ಮಿಸಿಕೊಡುವ ಭರವಸೆ ನೀಡಿ ದರು. ಇದೇ ಸಂದರ್ಭದಲ್ಲಿ ಸ್ಥಳೀಯರ ಮನವಿಯಂತೆ ಖಾಲಿ ನಿವೇಶನಗಳ ಸ್ವಚ್ಛತೆ ಕುರಿತು ಮಹಾನಗರಪಾಲಿಕೆ ಆಯುಕ್ತರಿಗೆ ಸೂಚನೆ ನೀಡುವ ಜೊತೆಗೆ ಕ್ಷೇತ್ರದ ಎಲ್ಲಾ ಖಾಲಿ ನಿವೇಶನಗಳ ಸ್ವಚ್ಛತೆಗೂ ಆದ್ಯತೆ ನೀಡಲಾಗುವುದು ಎಂದರು.
ಯೋಗಪಟುಗಳು ವಾರ್ಡ್‍ನ ಉದ್ಯಾನ ಗಳಲ್ಲಿ ಯೋಗ ಮಾಡಲು ಸೂಕ್ತ ಯೋಗ ಮಂದಿರ ನಿರ್ಮಿಸಿಕೊಡುವಂತೆ ಕೋರಿ ದರು. ಸದ್ಯದಲ್ಲಿಯೇ ಇದಕ್ಕೆ ಚಾಲನೆ ನೀಡು ವುದಾಗಿ ಶಾಸಕರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯ ರಾದ ಶಾಂತಮ್ಮ ವಡಿವೇಲು, ಪರಿಸರ ಅಭಿ ಯಂತರ ಸ್ಫೂರ್ತಿ, ಆರೋಗ್ಯ ಪರಿವೀಕ್ಷಕ ರಾದ ಶಿವಪ್ರಸಾದ್, ದೇವರಾಜೇಗೌಡ, ನಾಗೇಂದ್ರ, ಶೇಷಾದ್ರಿ, ಮುರುಗೇಶ್, ಶಬ್ಬೀರ್, ಶಿವಮ್ಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »