ಬಸವ ಸಿದ್ಧಾಂತ ಒಪ್ಪುವವರಿಗೆ ಸಿಗದ ರಾಜಕೀಯ ಸ್ಥಾನಮಾನ
ಮೈಸೂರು

ಬಸವ ಸಿದ್ಧಾಂತ ಒಪ್ಪುವವರಿಗೆ ಸಿಗದ ರಾಜಕೀಯ ಸ್ಥಾನಮಾನ

December 24, 2018

ಮೈಸೂರು: ಪ್ರಸ್ತುತ ರಾಜಕೀಯದಲ್ಲಿ ಬಸವ ಸಿದ್ಧಾಂತ, ವೈಚಾರಿಕತೆ ಒಪ್ಪುವವರಿಗೆ ಸೂಕ್ತ ಸ್ಥಾನ ಮಾನ ದೊರಕುತ್ತಿಲ್ಲ. ಬದಲಾಗಿ ಗುಡಿ-ಗುಂಡಾರಗಳನ್ನು ಸುತ್ತುವವರು ಹಾಗೂ ಸಮಾಜಮುಖಿಯಾಗಿ ಮಾತನಾಡ ದವರು ಮಂತ್ರಿಗಳಾಗುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಬಸವರಾಜ ಸಬರದ ಬೇಸರ ವ್ಯಕ್ತಪಡಿಸಿದರು.ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವ ರಣದ ಶ್ರೀ ರಾಜೇಂದ್ರ ಭವನದಲ್ಲಿ ಶರಣ ಸಾಹಿತ್ಯ ಪರಿಷತ್ ನಗರ ಘಟಕದ ವತಿ ಯಿಂದ ಆಯೋಜಿಸಿದ್ದ ಆಂದೋಲನ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ `ಬಸವಣ್ಣ ಮತ್ತು ತಳ ಸಮುದಾಯದ ಶರಣರು’ ಕುರಿತು ಮಾತನಾಡಿದರು.

ಬಸವ ಧರ್ಮಕ್ಕಾಗಿ ಹೋರಾಟ ಮಾಡಿದ ಎಂ.ಬಿ.ಪಾಟೀಲರು, ಸರ್ಕಾರ ದಲ್ಲಿ ಸೂಕ್ತಸ್ಥಾನ ಪಡೆಯಲು 7 ತಿಂಗಳು ಪಡಿಪಾಡಲು ಪಟ್ಟರು. ಏಕೆಂದರೆ ವೈಚಾ ರಿಕತೆ, ಬಸವ ಸಿದ್ಧಾಂತ ಎನ್ನುವುದು ಅಷ್ಟೊಂದು ಕಟು ಸತ್ಯ. ಇದನ್ನು ಯಾರು ಮಾತನಾಡಿದರೂ ಅರಗಿಸಿಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. 12ನೇ ಶತ ಮಾನದಲ್ಲಿ ಮುಸ್ಲಿಂ ದಾಳಿಯಿಂದ ತಪ್ಪಿಸಿ ಕೊಳ್ಳಲು ನೂರಾರು ಶರಣರು ಒಗ್ಗೂಡಿ, ಬಸವ ಧರ್ಮವನ್ನು ಸ್ಥಾಪಿಸಿದ್ದರು ಎಂದರು.

ಈ ನೆಲದಲ್ಲಿ ಪ್ರತ್ಯೇಕವಾಗಿರುವ ಬೌದ್ಧ, ಸಿಖ್, ಪಾರ್ಸಿ, ಮುಸ್ಲಿಂ ಧರ್ಮಗಳು ಯಾವುದೇ ಗಲಾಟೆಯಿಲ್ಲದೆ, ಸಂವಿ ಧಾನದಲ್ಲಿ ತಮ್ಮ ಅಸ್ಥಿತ್ವವನ್ನು ಪಡೆದು ಕೊಂಡಿವೆ. ಆದರೆ, ಲಿಂಗಾಯತ ಧರ್ಮ ಸ್ಥಾಪನೆ ವಿಷಯ ಬಂದಾಗಲೆಲ್ಲ ಗಲಾಟೆ ಗಳು ಆರಂಭವಾಗುತ್ತವೆ. ಇದು ಕಳೆದ 900 ವರ್ಷಗಳಿಂದ ನಡೆದುಕೊಂಡು ಬಂದಿ ರುವ ವಿಚಾರ. 12ನೇ ಶತಮಾನದ ಶರಣ ಧರ್ಮವನ್ನು 13ನೇ ಶತಮಾನಕ್ಕೆ ಕಾಲಿಡ ದಂತೆ ಕೆಲ ಧರ್ಮ ನಿಷ್ಟರು ನೋಡಿ ಕೊಂಡರು. ಅದು ಇಂದಿಗೂ ಮುಂದುವರೆ ದಿದೆ. ಕಲ್ಯಾಣ ಕರ್ನಾಟಕದಲ್ಲಿ ಶರಣ ರನ್ನು ಕಂಡಕಂಡಲ್ಲಿ ಕೊಂದು ರಕ್ತಹರಿಸಿ ದರು. ಇದರ ಹಿಂದೆ ರಕ್ತ-ಸಿಕ್ತ ಅಧ್ಯಾಯ ವಿದೆ ಎಂದು ಕೆಲವು ಘಟನೆಗಳನ್ನು ವಿವ ರಿಸಿದರು. ವೇದಿಕೆಯಲ್ಲಿ ಕೆಪಿಸಿಟಿಎಲ್ ಮುಖ್ಯ ಇಂಜಿನಿಯರ್ ಡಾ.ಶಂಕರ ದೇವ ನೂರು ಅವರು ಅಧ್ಯಕ್ಷತೆ ವಹಿಸಿ ಮಾತ ನಾಡಿದರು. ಮಾಜಿ ಶಾಸಕ ತೋಂಟ ದಾರ್ಯ, ಮಹಿಳಾ ಚಿಂತಕಿ ರಶ್ಮಿ ಕೌಜಲಗಿ, ಗೋ.ರು.ಪರಮೇಶ್ವರಪ್ಪ, ಕಾರ್ಯದರ್ಶಿ ಮಹದೇವಪ್ಪ ಉಪಸ್ಥಿತರಿದ್ದರು.

Translate »