ಬಿಜೆಪಿ ವಿರುದ್ಧದ ಮಹಾ ಘಟಬಂಧನ್ ಜನತೆಗೆ ಆಶಾಭಾವನೆ ಮೂಡಿಸುತ್ತಿಲ್ಲ
ಮೈಸೂರು

ಬಿಜೆಪಿ ವಿರುದ್ಧದ ಮಹಾ ಘಟಬಂಧನ್ ಜನತೆಗೆ ಆಶಾಭಾವನೆ ಮೂಡಿಸುತ್ತಿಲ್ಲ

December 24, 2018

ಮೈಸೂರು: ಮುಂಬರುವ ಲೋಕಸಭಾ ಚುನಾವಣೆ ತುರ್ತು ಪರಿಸ್ಥಿತಿ ನಂತರ 1977ರಲ್ಲಿ ನಡೆದ ಚುನಾವಣೆಯಷ್ಟೆ ಪ್ರಮುಖವಾಗಿದ್ದು, ಪ್ರಜಾ ಪ್ರಭುತ್ವದ ವಿರೋಧಿಯಾಗಿರುವ ಬಿಜೆಪಿ ವಿರೋಧಿಸಿ ರೈತರ ಸಮಸ್ಯೆಗಳ ಈಡೇರಿಕೆಗೆ ಯಾವುದೇ ನಿಲುವು ಪ್ರಕಟಿಸದ ಮಹಾ ಘಟಬಂಧನ್‍ಗೆ ಸೇರದೆ ಸ್ವರಾಜ್ ಇಂಡಿಯಾ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತದೆ ಎಂದು ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಗಣತಂತ್ರದ ಶತ್ರುವಾಗಿ ಮಾರ್ಪಟ್ಟಿದೆ. ಮಹಾ ಘಟ ಬಂಧನ್ ದೇಶದ ಜನತೆಗೆ ಆಶಾಭಾವನೆ ಮೂಡಿಸುತ್ತಿಲ್ಲ. ಸ್ವರಾಜ್ ಇಂಡಿಯಾ ಮಹಾ ಘಟಬಂಧನ್‍ನ ಭಾಗವಾಗುವುದಿಲ್ಲ. ಬದಲಾಗಿ ಸಮಾನ ಮನಸ್ಕ ಪಕ್ಷಗಳಿಗೆ ಬೆಂಬಲ ನೀಡಲಿದೆ ಎಂದರು.

ಈ ಹಿಂದೆ ಮಂಡಲ್, ಬೋಫೋರ್ಸ್ ಅಯೋಧ್ಯೆ, ಮಂದಿರ ಸೇರಿದಂತೆ ಇನ್ನಿತರ ವಿಷಯಗಳ ಆಧರಿಸಿ ಚುನಾವಣೆ ನಡೆಯುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ಇಂತಹ ವಿಚಾರದಲ್ಲಿ ಚುನಾವಣೆ ನಡೆ ಯುವುದಿಲ್ಲ. ಈ ಕುರಿತು ಹೋರಾಟಗಳು ನಡೆದರೂ ರೈತರು, ಯುವ ಜನರ ಏಳಿಗೆಗೆ ಯಾವ ಪಕ್ಷಗಳೂ ಗಮನ ಹರಿಸಿಲ್ಲ. ಇದನ್ನೇ ಸ್ವರಾಜ್ ಇಂಡಿಯಾ ಈ ವಿಷಯಗಳನ್ನೇ ಪ್ರಮುಖವಾಗಿರಿಸಿಕೊಂಡು ಕಣಕ್ಕಿಳಿಯ ಲಿದೆ ಎಂದು ವಿವರಿಸಿದರು.

ರೈತರು ಸಾಲದಿಂದ ಮುಕ್ತರಾಗಬೇಕು. ಇದರಲ್ಲಿ ಖಾಸಗಿ ಸಾಲವೂ ಸೇರಿರಬೇಕು. ಅವರು ಮತ್ತೆ ಸಾಲದ ಸುಳಿಗೆ ಸಿಲುಕ ಬಾರದು. ಈ ಕುರಿತು ಸಮಗ್ರ ಚರ್ಚೆ ಆಗ ಬೇಕಾಗಿದೆ. ಆದರೆ ಇಂತಹ ಚರ್ಚೆ ಆಗು ತ್ತಿಲ್ಲ. ಬ್ಯಾಂಕ್‍ಗಳಿಗೆ ಮರು ಹೊಂದಾಣಿಕೆಗೆ 2 ಲಕ್ಷ ಕೋಟಿ ನೀಡಲಾಗುತ್ತದೆ. ಉದ್ಯಮಿ ಗಳು 5 ಸಾವಿರ ಕೋಟಿ ಸಾಲ ಪಡೆದು, ಮರು ಪಾವತಿಸಲಾಗದೆ ಸುಮ್ಮನಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ 1 ಲಕ್ಷ ಸಾಲ ಪಡೆದ ರೈತರಿಗೆ ಕಿರುಕುಳ ನೀಡುವ ಪರಿಸ್ಥಿತಿ ನಮ್ಮಲ್ಲಿದೆ ಎಂದು ವಿಷಾದಿಸಿದರು.

ಈ ಎಲ್ಲಾ ನ್ಯೂನತೆಗಳನ್ನು ಸರಿಪಡಿ ಸುವುದರೊಂದಿಗೆ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವುದಕ್ಕೆ ರಾಷ್ಟ್ರದ ಆರ್ಥಿಕ ಪರಿಸ್ಥಿತಿಯಲ್ಲಿ ರೈತರು ಪ್ರಮುಖ ಭಾಗವಾಗಬೇಕು. ಇವರಿಗೆ ಅಂಗಡಿ ಗಳಿಂದ ಶೇ.5ರಷ್ಟು ರಿಯಾಯಿತಿ ಬೇಕಾಗಿಲ್ಲ. ಬದಲಾಗಿ ಇವರ ಅಭಿವೃದ್ಧಿ ಕುರಿತ ಹೊಸ ಮಾದರಿ, ವಿಧಾನಗಳ ಬಗ್ಗೆ ಚಿಂತಿಸಬೇಕು. ಗ್ರಾಮೀಣ ಭಾರತ ದೇಶದ ಹೃದಯ ವಾಗಬೇಕೆಂದು ತಾಕೀತು ಮಾಡಿದರು.

ಇದೇ ಸಂದರ್ಭದಲ್ಲಿ ಮುಂದಿನ ಚುನಾ ವಣೆ ಹಿನ್ನೆಲೆಯಲ್ಲಿ ಸ್ವರಾಜ್ ಇಂಡಿಯಾ ರೈತರು, ಯುವಜನರಿಗೆ ವೇದಿಕೆ ಒದಗಿಸ ಲಿದ್ದು, ಅವರನ್ನು ಸ್ವಯಂ ಸೇವಕರನ್ನಾಗಿ ಸೇರ್ಪಡೆ ಮಾಡಿಕೊಳ್ಳಲಿದೆ. ಇವರೇ ದೇಶದ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದರ ಜೊತೆಗೆ, ಅಭ್ಯರ್ಥಿಗಳನ್ನೂ ಆಯ್ಕೆ ಮಾಡ ಲಿದ್ದಾರೆ. ಈ ವಿಧಾನದ ಮೂಲಕವೇ ತಮ್ಮ ಪಕ್ಷದ ಅಜೆಂಡಾ ರೂಪಿಸಿ ಎರಡು ತಿಂಗಳ ಕಾಲ ಅದನ್ನೇ ಆಧರಿಸಿ ಪ್ರಚಾರ ನಡೆಸಲಾಗುತ್ತದೆ ಎಂದರು.

ರಾಜ್ಯದಲ್ಲಿ ಆಡಳಿತ ಬದಲಾಗಿದ್ದರೂ ರೈತರ ಸಾಲ ಮನ್ನಾಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ. ಬಿಜೆಪಿ ಅಜೆಂಡಾ ವಿರೋಧಿಸಿ ಅಧಿಕಾರಕ್ಕೆ ಬಂದವರು ರೈತರಿ ಗಾಗಿ ಏನನ್ನೂ ಮಾಡಿಲ್ಲ. ತಮ್ಮ ಪಕ್ಷ ಇತ್ತೀ ಚೆಗಷ್ಟೇ ಈ ಕ್ಯಾನ್ ಕ್ಯಾಂಪೇನ್ ಆರಂಭಿ ಸಿದ್ದು, ಇಲ್ಲಿವರೆಗೆ ನೋಂದಣಿ ಮಾಡಿ ಕೊಂಡವರಲ್ಲಿ ಶೇ.75ಕ್ಕಿಂತ ಹೆಚ್ಚು ಭಾಗ ಯುವಜನರೇ ಆಗಿದ್ದಾರೆ ಎಂದರು. ಗೋಷ್ಠಿ ಯಲ್ಲಿ ಸ್ವರಾಜ್ ಇಂಡಿಯಾದ ಅಬಿಕ್ ಸಹಾ, ದರ್ಶನ್ ಪುಟ್ಟಣ್ಣಯ್ಯ, ಪ್ರೊ. ಶಬ್ಬೀರ್ ಮುಸ್ತಫಾ, ಚಾಮರಸ ಮಾಲಿ ಪಾಟೀಲ್, ನಂಜುಂಡಸ್ವಾಮಿ, ಅಮ್ಜದ್‍ಖಾನ್ ಇದ್ದರು.

Translate »