ಮೋದಿ ಆಡಳಿತದಿಂದ ದೇಶದಲ್ಲಿ ಅಗೋಚರ ತುರ್ತು ಪರಿಸ್ಥಿತಿ
ಮೈಸೂರು

ಮೋದಿ ಆಡಳಿತದಿಂದ ದೇಶದಲ್ಲಿ ಅಗೋಚರ ತುರ್ತು ಪರಿಸ್ಥಿತಿ

September 18, 2018

ಮೈಸೂರು:  ಇಂದು ಅಪ್ರತ್ಯಕ್ಷ, ಕಣ್ಣಿಗೆ ಕಾಣದ ತುರ್ತು ಪರಿಸ್ಥಿತಿ ನಮ್ಮ ಮುಂದಿದ್ದು, ಇದು ಸಂವಿಧಾನವನ್ನು ನಾಶ ಮಾಡುವ ಪ್ರಯತ್ನವಾಗಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಪ್ರೊ.ಯೋಗೇಂದ್ರ ಯಾದವ್ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು.

ಮೈಸೂರಿನ ಪಡುವಾರಹಳ್ಳಿಯ ಲೀಲಾ ಚೆನ್ನಯ್ಯ ಕಲ್ಯಾಣ ಮಂಟಪದಲ್ಲಿ ಸ್ವರಾಜ್ ಇಂಡಿಯಾ ರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ದೇಶದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯ ಮಾನಗಳನ್ನು ನೋಡಿದರೆ ಆಡಳಿತದಲ್ಲಿ ರುವ ಸರ್ಕಾರವೇ ಸಂವಿಧಾನ ಮತ್ತು ಪ್ರಜಾ ತಂತ್ರವನ್ನು ನಾಶ ಮಾಡುವ ಕೆಲಸ ಮಾಡುತ್ತಿವೆ. ದೇಶದ ಇಡೀ ಆರ್ಥಿಕ ವ್ಯವಸ್ಥೆ ದೊಡ್ಡ ಉದ್ಯಮಿಗಳ ಕೈಯ್ಯಲ್ಲಿ ಸಿಲುಕಿದೆ. ಇದೇ ನರೇಂದ್ರ ಮೋದಿಯವರು ಹೇಳುತ್ತಿರುವ ಅಭಿವೃದ್ಧಿ ಎಂದು ಗೇಲಿ ಮಾಡಿದರು.

ಭ್ರಷ್ಟಾಚಾರ ಮತ್ತು ಕೋಮುವಾದ ಕರ್ನಾಟಕ ಬಿಜೆಪಿಯ ಇನ್ನೊಂದು ಮುಖ. ಕರ್ನಾಟಕದಲ್ಲಿ ರಾಜಕೀಯ ದೊಡ್ಡ ದಿವಾಳಿತನ ಕಾಣುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದು ಬಿಡುತ್ತದೆ, ಭ್ರಷ್ಟಾಚಾರ, ಕೋಮುಗಲಭೆ ಸೃಷ್ಟಿಯಾಗುತ್ತದೆ ಎಂಬ ಆತಂಕವಿತ್ತು. ಸುದೈವವಶಾತ್ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಅದು ತಪ್ಪಿತು. ಆ ವೇಳೆ ಕುಮಾರಸ್ವಾಮಿ ಪ್ರಮಾಣವಚನ ಸಂದರ್ಭದಲ್ಲಿ ಪರ್ಯಾಯ ರಾಜಕೀಯ ನೀಡುತ್ತಾರೆ ಎನ್ನಲಾಗಿತ್ತು. ಆದರೆ ಬರೀ ನಾಟಕ, ನಾಟಕೀಯ ಬೆಳವಣಿಗೆ ನಡೆಯುತ್ತಿದೆ. 2019ಕ್ಕೆ ಇಂಥದೇ ಪರ್ಯಾಯ ರಾಜಕೀಯ ನೀಡುವರೇನೋ ಎಂದು ವ್ಯಂಗ್ಯವಾಗಿ ಹೇಳಿದರು.

ದೇಶ ಮತ್ತು ರಾಜ್ಯಕ್ಕೆ ಪರ್ಯಾಯ ಇಲ್ಲವೇ ಎಂದು ಚಿಂತಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂದು ದೇಶ ಪರ್ಯಾಯ ರಾಜಕಾರಣವನ್ನು ನಿರೀಕ್ಷಿಸುತ್ತಿದೆ. ಈ ನಿಟ್ಟಿನಲ್ಲಿ ಸ್ವರಾಜ್ ಇಂಡಿಯಾದ ಮುಂದಿನ ಜವಾಬ್ದಾರಿ ಎಂದರೆ, ಅಭಿವೃದ್ಧಿ ಮತ್ತು ಬಡವರಿಗೆ ಸೌಲಭ್ಯಗಳನ್ನು ಕಲ್ಪಿಸುವುದು ಮಾತ್ರವಲ್ಲದೆ, ಪ್ರಜಾಪ್ರಭುತ್ವ ಮತ್ತು ದೇಶವನ್ನು ಉಳಿಸುವ ಹೊಣೆಯೂ ನಮ್ಮ ಮೇಲಿದೆ. ಆ ನಿಟ್ಟಿನಲ್ಲಿ ನಮ್ಮ ಪಕ್ಷದ ಪ್ರಯತ್ನ ಸಾಗಲಿದೆ ಎಂದು ತಿಳಿಸಿದರು.

ರೈತರ ಬಿಕ್ಕಟ್ಟು, ರೈತರ ಕೃಷಿ ವಿಚಾರ ಮತ್ತು ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಕಾಳಜಿ ತೆಗೆದುಕೊಂಡರೆ ಈ ದೇಶ ಮುಂದುವರೆಯುತ್ತದೆ. ಈ ಅಜೆಂಡಾ ಮುಂದೆ ತೆಗೆದುಕೊಂಡು ಹೋಗುವ ಜವಾ ಬ್ದಾರಿಯೂ ನಮ್ಮ ಮೇಲಿದೆ. ದೇಶದ ಜನರ ಮೇಲಿದೆ. ಚಿಂತಿಸಬಲ್ಲ ವ್ಯಕ್ತಿಗಳು ದೇಶಕ್ಕೆ ಪರ್ಯಾಯ ತರಲು ಯತ್ನಿಸಿದ್ದೇವೆ. ರೈತರು, ಕಾರ್ಮಿಕರು, ಮಹಿಳೆ ಯರ, ನಗರವಾಸಿಗಳ ಅಭಿವೃದ್ಧಿ ಮೂಲಕ ನಾವು ಭರವಸೆ ಮೂಡಿಸಬೇಕಿದೆ ಎಂದರು.

ಸಮಾರಂಭದಲ್ಲಿ ಹಿರಿಯ ಸಾಹಿತಿ ದೇವನೂರು ಮಹದೇವ, ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್, ಪ್ರಧಾನ ಕಾರ್ಯ ದರ್ಶಿ ಬಡಗಲಪುರ ನಾಗೇಂದ್ರ, ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಕೆ.ಪಿ.ಸಿಂಗ್, ಶಬ್ಬೀರ್ ಮಹಮದ್ ಮುಸ್ತಫಾ ಇನ್ನಿತರರು ಉಪಸ್ಥಿತರಿದ್ದರು.

Translate »