ದೊಣ್ಣೆವರಸೆ ಸ್ಪರ್ಧೆಯಲ್ಲಿ ವಿಜಯನಗರದ ತೇಜಸ್ ವಿಜೇತ
ಮೈಸೂರು

ದೊಣ್ಣೆವರಸೆ ಸ್ಪರ್ಧೆಯಲ್ಲಿ ವಿಜಯನಗರದ ತೇಜಸ್ ವಿಜೇತ

December 24, 2018

ಮೈಸೂರು: ಮೈಸೂ ರಿನ ವಿನಾಯಕ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ‘ಕರ್ನಾಟಕ ಸ್ಪೋಟ್ರ್ಸ್ ಸಿಲಂಬಂ ಅಸೋಸಿಯೇಷನ್’ ವತಿಯಿಂದ ಆಯೋಜಿಸಿದ್ದ 4ನೇ ರಾಜ್ಯ ಮಟ್ಟದ ಸ್ಟಿಕ್ ಫೈಟಿಂಗ್ ಟೂರ್ನಿಯಲ್ಲಿ ಬೆಸ್ಟ್ ಸ್ಟಿಕ್ ಫೈಟರ್ ವಿಭಾಗದಲ್ಲಿ ವಿಜಯ ನಗರದ ಬಿ.ತೇಜಸ್ ವಿಜೇತರಾದರೆ, ಹೆಬ್ಬಾಳದ ಎಂ.ಡಿ. ಮುತ್ತಪ್ಪ ರನ್ನರ್ ಎನಿಸಿಕೊಂಡರು.
ಪಂದ್ಯಾವಳಿ ಉದ್ಘಾಟಿಸಿದ ಎಂಸಿಡಿ ಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಮಾತನಾಡಿ, ಗ್ರಾಮೀಣ ಕಲೆಗಳನ್ನು ಉಳಿ ಸುವ ನಿಟ್ಟಿನಲ್ಲಿ ದೊಣ್ಣೆ ವರಸೆಯಂತಹ ಕ್ರೀಡೆಗಳು ನಿರಂತರವಾಗಿ ನಡೆಯುತ್ತಿರ ಬೇಕು. ಈ ನಿಟ್ಟಿನಲ್ಲಿ ಅಸೋಸಿಯೇಷನ್ ನಲ್ಲಿ ಇಂತಹ ಕಾರ್ಯಕ್ರಮ ನಡೆಯು ತ್ತಿರುವುದು ಸ್ವಾಗತಾರ್ಹ ಎಂದರು.

ಮೈಸೂರು ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಸೋಸಲೆ ಸಿದ್ದರಾಜು ಮಾತ ನಾಡಿ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆ ಗಳಲ್ಲಿ ದೊಣ್ಣೆ ವರಸೆ ಕ್ರೀಡೆಯೂ ಒಂದಾ ಗಿದ್ದು, ಅದನ್ನು ಉಳಿಸಿ ಬೆಳೆಸುತ್ತಿರುವ ಮೈಸೂರಿನ ಏಕೈಕ ಸಂಸ್ಥೆ ಸ್ಪೋಟ್ರ್ಸ್ ಸಿಲಂಬಂ ಅಸೋಸಿಯೇಷನ್ ಆಗಿದೆ. ಮಕ್ಕಳು ಹಾಗೂ ಯುವಕರು ಹೆಚ್ಚಾಗಿ ಇದನ್ನು ಕಲಿಯಲು ಆಸಕ್ತಿ ತೋರಬೇಕಿದೆ ಎಂದು ಉತ್ತೇಜನದ ಮಾತನಾಡಿದರು.

ರಾಜ್ಯದ ವಿವಿಧೆಡೆಯ 120ಕ್ಕೂ ಹೆಚ್ಚು ಸ್ಫರ್ಧಿಗಳು ಭಾಗವಹಿಸಿ 60ಕ್ಕೂ ಹೆಚ್ಚು ಮಂದಿ ವಿಜೇತರಾಗಿ ಗಮನ ಸೆಳೆದರು. ಕರ್ನಾಟಕ ಸ್ಪೋಟ್ರ್ಸ್ ಸಿಲಂಬಂ ಅಸೋ ಸಿಯೇಷನ್ ಅಧ್ಯಕ್ಷ ಎನ್.ಎ.ಮಾಧವ್, ಕಾರ್ಯಕ್ರಮ ಆಯೋಜಕ ಎಂ.ಬಿ. ಚಿದಾನಂದ, ಸುಧಾಕರ್ ಉಪಸ್ಥಿತರಿದ್ದರು.

Translate »