ಮೈಸೂರಲ್ಲಿ ವರ್ಜಿನ್ ಕೊಬ್ಬರಿ ಎಣ್ಣೆ ರಾಷ್ಟ್ರೀಯ ಸಮ್ಮೇಳನ
ಮೈಸೂರು

ಮೈಸೂರಲ್ಲಿ ವರ್ಜಿನ್ ಕೊಬ್ಬರಿ ಎಣ್ಣೆ ರಾಷ್ಟ್ರೀಯ ಸಮ್ಮೇಳನ

December 24, 2018

ಮೈಸೂರು: ಮೈಸೂರಿನ ಸಿಎಸ್‍ಐಆರ್- ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯವು (ಸಿಎಫ್ ಟಿಆರ್‍ಐ) ಡಿ.26ರಂದು ವರ್ಜಿನ್ ಕೊಬ್ಬರಿ ಎಣ್ಣೆ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ. ಸಮ್ಮೇಳನವು ತೆಂಗಿನ ಕಾಯಿಯಿಂದ ಪಡೆ ಯುವ ಮೌಲ್ಯವರ್ಧಿತ ಉತ್ಪನ್ನಗಳ ತಯಾ ರಕರಿಗೆ, ಅದರಲ್ಲೂ ವರ್ಜಿನ್‍ಕೊಬ್ಬರಿ ಎಣ್ಣೆಯ ತಯಾರಕರನ್ನು ಒಟ್ಟಾಗಿಸುವ ಸಭೆಯಾಗಲಿದೆ. ವರ್ಜಿನ್‍ಕೊಬ್ಬರಿ ಎಣ್ಣೆಯು ತಾಜಾ ತೆಂಗಿನ ಕಾಯಿಯಿಂದ ತಯಾರಿಸಲಾಗುವ ಅಧಿಕ ಮೌಲ್ಯದ ಉತ್ಪನ್ನವಾಗಿದ್ದು, ಈ ತಂತ್ರಜ್ಞಾನದಲ್ಲಿ ಸಿಎಸ್‍ಐಆರ್-ಸಿಎಫ್‍ಟಿಆರ್‍ಐಯು ಮುಂಚೂಣಿಯಲ್ಲಿದೆ.

ಈಗಾಗಲೇ ಅರವತ್ತಕ್ಕೂ ಹೆಚ್ಚು ವರ್ಜಿನ್‍ಕೊಬ್ಬರಿ ಎಣ್ಣೆಯ ತಯಾರಕರು ಸಂಸ್ಥೆಯ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ರಾಷ್ಟ್ರೀಯ ಸಮ್ಮೇಳನವನ್ನು ಭಾರತ ಸರಕಾರದ ತೆಂಗು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ. ರಾಜು ನಾರಾಯಣಸ್ವಾಮಿಯವರು ಉದ್ಘಾಟಿಸಲಿ ರುವರು. ಸಿಎಫ್‍ಟಿಆರ್‍ಐ ನಿರ್ದೇಶಕರಾದ ಡಾ. ಕೆ.ಎಸ್.ಎಂ.ಎಸ್.ರಾಘವ ರಾವ್ ಹಾಗೂ ಕಾಸರ ಗೋಡಿನ ಐಸಿಎಆರ್-ಸಿಪಿಸಿಆರ್‍ಐ ನಿರ್ದೇಶಕರಾದ ಡಾ.ಪಿ. ಚೌಡಪ್ಪ ಇದರಲ್ಲಿ ಪಾಲ್ಗೊಳ್ಳುವ ಪ್ರತಿಷ್ಠಿತ ವಿಜ್ಞಾನಿಗಳು.

ಭಾರತದಲ್ಲಿ ವರ್ಜಿನ್‍ಕೊಬ್ಬರಿ ಎಣ್ಣೆ ಉತ್ಪಾದನೆಯ ಸ್ಥಿತಿಗತಿ ಪರಿಶೀಲಿಸುವುದು, ಈ ಕ್ಷೇತ್ರದಲ್ಲಿ ತಂತ್ರಜ್ಞಾನದಲ್ಲಿ ಆಗಿರುವ ಸುಧಾರಣೆಗಳ ಬಗ್ಗೆ ಉತ್ಪಾದಕರಿಗೆ ತಿಳಿಸಿ ಕೊಡುವುದು ಈ ಸಮ್ಮೇಳನದ ಉದ್ದೇಶ. ವರ್ಜಿನ್ ಕೊಬ್ಬರಿ ಎಣ್ಣೆಯನ್ನು ತಯಾರಿಸುವಾಗ ಎದುರಾಗುವ ಅಡ್ಡಿಗಳಿಗೆ ಪರಿಹಾರಗಳನ್ನು ಹುಡುಕುವ ಹಾಗೂ ನಾಳಿನ ಸಾಧ್ಯತೆಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಈ ಸಮ್ಮೇಳನವು ಉತ್ಪಾದಕರು ಹಾಗೂ ತಂತ್ರಜ್ಞರ ನಡುವೆ ಚರ್ಚೆಗೆ ಅವಕಾಶವನ್ನು ಒದಗಿಸಲಿದೆ. ಅಲ್ಲದೆ ವರ್ಜಿನ್ ಕೊಬ್ಬರಿ ಎಣ್ಣೆ ಕ್ಷೇತ್ರದಲ್ಲಿನ ಸೂಕ್ಷ್ಮಗಳನ್ನು ನವ ಉದ್ಯಮ ಶೀಲರುಗಳಿಗೆ ಒದಗಿಸುವ ಸಂದರ್ಭವೂ ಇದಾಗಿದೆ. ಸಮ್ಮೇಳನದಲ್ಲಿ ವರ್ಜಿನ್ ಕೊಬ್ಬರಿ ಎಣ್ಣೆಯೇ ಮೊದಲಾದ ತೆಂಗಿನ ಉತ್ಪನ್ನ ಗಳು ಹಾಗೂ ಉತ್ಪಾದನಾ ಯಂತ್ರ ಗಳನ್ನೂ ಪ್ರದರ್ಶಿಸಲಾಗುವುದು. ಮೈಸೂರಿನ ಸಿಎಸ್ ಐಆರ್-ಸಿಎಫ್‍ಟಿ ಆರ್‍ಐ, ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋ ಧನಾಲಯದಂತಹ ಪ್ರತಿಷ್ಠಿತ ಸಂಶೋಧನಾಲಯ ಗಳ ವಿಜ್ಞಾನಿಗಳು, ತಂತ್ರಜ್ಞರು, ವರ್ಜಿನ್ ಕೊಬ್ಬರಿ ಎಣ್ಣೆ ಉತ್ಪಾದಕರು, ಯಂತ್ರೋಪಕರಣಗಳ ತಯಾ ರಕರು, ತೆಂಗು ಬೆಳೆಗಾರರು/ ಉತ್ಪನ್ನಗಳ ಸಹಕಾರಿ ಸಂಸ್ಥೆಗಳು, ಬೆಳೆಗಾರರು ಉತ್ಪನ್ನಗಳ ಸಹಕಾರಿ ಕಂಪೆನಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ನವ ಉದ್ಯಮಶೀಲರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಹ್ವಾನದ ಮೇರೆಗೆ ಸಮ್ಮೇಳನದಲ್ಲಿ ಪಾಲ್ಗೊ ಳ್ಳಲು ಇಚ್ಛಿಸುವವರು ಡಾ.ಗಿರಿಯಪ್ಪ. ಪ್ರಧಾನ ತಾಂತ್ರಿಕ ಅಧಿ ಕಾರಿ, ಸಿಎಸ್.ಐಆರ್-ಸಿಎಫ್‍ಟಿಆರ್‍ಐ ಇವರನ್ನು ದೂ. 0821-2514534, ಮೊ. 9444443009 ಇ-ಮೇಲ್-giಡಿiಥಿಚಿ ಠಿಠಿಚಿಞ@ ಛಿಜಿಣಡಿi.ಡಿes.iಟಿ ಮೂಲಕ ಸಂಪರ್ಕಿಸಿ ನೋಂದಾ ಯಿಸಿಕೊಳ್ಳಬಹುದು. ಮೊದಲು ಬಂದವರಿಗೆ ಆದ್ಯತೆ.

Translate »