ಹೆಬ್ಬಾಳದಲ್ಲಿ ಕನಕದಾಸರ ಜಯಂತಿ
ಮೈಸೂರು

ಹೆಬ್ಬಾಳದಲ್ಲಿ ಕನಕದಾಸರ ಜಯಂತಿ

December 24, 2018

ಮೈಸೂರು: ನಾವು ಆರ್ಥಿಕ ವಾಗಿ, ಶೈಕ್ಷಣಿಕವಾಗಿ, ಸ್ವಾವಲಂಬಿಗಳಾಗಿ, ಅದರ ಪ್ರಯೋಜನ ಸಮಾಜಕ್ಕೆ ದೊರೆಯ ದಿದ್ದರೆ ದಾರ್ಶನಿಕರ ಹೆಸರಲ್ಲಿ ಮಾಡುವ ಕಾರ್ಯಕ್ರಮಗಳು ಅರ್ಥಪೂರ್ಣ ವಾಗುವುದಿಲ್ಲ ಎಂದು ಮಾಜಿ ಸಚಿವ ಸಿ.ಎಚ್.ವಿಜಯ್ ಶಂಕರ್ ಹೇಳಿದರು.

ಮೈಸೂರಿನ ಹೆಬ್ಬಾಳದಲ್ಲಿರುವ ಶ್ರೀ ಕನಕ ದಾಸ ಹಿತರಕ್ಷಣಾ ಸಮಿತಿ ವತಿಯಿಂದ ಭಾನುವಾರ ಹೆಬ್ಬಾಳದಲ್ಲಿ ಆಯೋಜಿಸಿದ್ದ ಕನಕದಾಸರ 531ನೇ ಜಯಂತ್ಯೋತ್ಸವ ಹಾಗೂ ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳ ಇಲಾಖೆ ಸೇರಿ ದಂತೆ ವಿವಿಧ ಇಲಾಖೆಗಳಲ್ಲಿ ಹಲವಾರು ಯೋಜನೆಗಳಿವೆ. ಹಿಂದುಳಿದ ವರ್ಗಗಳ ಯುವಕರ ಹಾಗೂ ಮಹಿಳೆಯರ ಆರ್ಥಿ ಕಾಭಿವೃದ್ಧಿಗೆ ಅವುಗಳನ್ನು ಬಳಸಿ ಕೊಳ್ಳಲು ಸಂಘ ಸಂಸ್ಥೆಗಳು ನೆರವಾಗಬೇಕು ಎಂದು ಅವರು ಹೇಳಿದರು.

ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಕೊಡುವ, ಮಹಿಳೆಯರನ್ನು ಸ್ವಾವಲಂಬಿಯಾಗುವಂತೆ ಆರ್ಥಿಕ ಶಕ್ತಿ ತುಂಬಿವ ಕೆಲಸವನ್ನು ಸಮಿತಿ ಮಾಡಬೇಕು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ನೆರ ವನ್ನು ಪಡೆದುಕೊಳ್ಳಬೇಕು. ಯುವಕರಿಗೆ ಮಾಹಿತಿಯ ಕೊರತೆ ಇದೆ. ಹಿತ ರಕ್ಷಣಾ ಸಮಿತಿ ಈ ಸಮಸ್ಯೆ ನಿವಾರಣೆಗೆ ಕೆಲಸ ಮಾಡುವಂತೆ ಸಲಹೆ ನೀಡಿದರು.

ಶ್ರೀ ಕನಕದಾಸ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ವಿ. ಮಂಜೇಗೌಡ ಅವರು ಮಾತನಾಡಿ, ಶ್ರೀ ಕನಕದಾಸ ಹಿತರಕ್ಷಣಾ ಸಮಿತಿ ವತಿಯಿಂದ ಸಮಾಜಕ್ಕೆ ಪೂರಕ ವಾಗುವಂತಹ ಕೆಲಸಗಳನ್ನು ಮಾಡು ತ್ತಿದ್ದೇವೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವುದು, ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ ನೀಡುವುದು, ಸರ್ಕಾರದ ಸೌಲಭ್ಯ ಗಳ ಬಗ್ಗೆ ಸಮಾಜದ ನಿರುದ್ಯೋಗಿ ಯುವಕ ರಿಗೆ ಮಾಹಿತಿ ನೀಡುವುದು, ವಧುವರರ ಆನ್ವೇಷಣೆಗೆ ವೇದಿಕೆ ಕಲ್ಪಿಸುವುದು ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಸಮಿತಿಯ ಎಲ್ಲಾ ಪದಾಧಿಕಾರಿಗಳ ಹಾಗೂ ಸದಸ್ಯರ ಸಹಕಾರದೊಂದಿಗೆ ಮಾಡುತ್ತಿದ್ದೇವೆ ಎಂದರು.

ಮೈಸೂರು ಜಿಲ್ಲಾ ರೇಷ್ಮೆ ಉಪ ನಿರ್ದೇ ಶಕ ಜವರೇಗೌಡ, ಆರಕ್ಷಕ ವೃತ್ತ ನಿರೀಕ್ಷಕ ಧನರಾಜ್, ವಾರ್ತಾ ಇಲಾಖೆ ಸಹಾ ಯಕ ನಿರ್ದೇಶಕ ಆರ್.ರಾಜು ಅವರಿಗೆ ಸನ್ಮಾನ ಮಾಡಲಾಯಿತು. ಎಸ್.ಎಸ್. ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಮಾಜಿ ಪ್ರಧಾನ ಕಾರ್ಯ ದರ್ಶಿ ದೊಡ್ಡಸ್ವಾಮಿಗೌಡ, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಹಾಗೂ ನಗರಪಾಲಿಕೆ ಸದಸ್ಯರಾದ ಜೆ.ಗೋಪಿ, ಕೆ.ವಿ.ಶ್ರೀಧರ್, ಮಾಜಿ ಸದಸ್ಯ ಶಂಕರ್, ಚಿಕ್ಕಬಳ್ಳಾಪುರ ಉಪವಿಭಾಗಾ ಧಿಕಾರಿ ಬಿ.ಶಿವಸ್ವಾಮಿ, ಶ್ರೀ ಕನಕದಾಸ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಡಾ. ಬಸವರಾಜು ಎಸ್., ಜೆ.ಕೆ.ಟೈರ್ಸ್ ಶ್ರೀ ಕಾಳಿ ದಾಸ ಜಾಗೃತ ಸಮಿತಿ ಪ್ರಧಾನ ಕಾರ್ಯ ದರ್ಶಿ ಆರ್.ಕುಮಾರ್, ಮುಖಂಡರಾದ ಜೌಹಳ್ಳಿ ಪುಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Translate »