ಬಿಎಐ ಮಹಿಳಾ ಘಟಕದ `ಸ್ಫೂರ್ತಿ ಉತ್ಸವ’ದಲ್ಲಿ ಮಹಿಳೆಯರು, ಮಕ್ಕಳ ಸಂಭ್ರಮ
ಮೈಸೂರು

ಬಿಎಐ ಮಹಿಳಾ ಘಟಕದ `ಸ್ಫೂರ್ತಿ ಉತ್ಸವ’ದಲ್ಲಿ ಮಹಿಳೆಯರು, ಮಕ್ಕಳ ಸಂಭ್ರಮ

December 24, 2018

ಮೈಸೂರು: ಮೈಸೂರಿನ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿಯೂ ಇಂದು `ಸ್ಫೂರ್ತಿ ಉತ್ಸವ’ ಆಹಾರ ಮೇಳದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡು ಸಂಭ್ರಮಿಸಿದರು. ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಬಿಐ)ದ ಅಂಗ ಸಂಸ್ಥೆಯಾದ ಸ್ಫೂರ್ತಿ ಮಹಿಳಾ ಘಟಕದಿಂದ ಆಯೋಜಿಸಿದ್ದ `ಸ್ಪೂರ್ತಿ ಉತ್ಸವ’ದಲ್ಲಿ ಮುಖ್ಯವಾಗಿ ಗಮನ ಸೆಳೆದದ್ದು ಸಾವಯವ ಕೃಷಿ ಕುರಿತ ಅರಿವು ಮೂಡಿಸುವ ಮಳಿಗೆಗಳು.

ಇಲ್ಲಿ 40ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಸ್ತು ಪ್ರದರ್ಶನದ ಜೊತೆಗೆ ಮಹಿಳೆಯರೇ ತಯಾರಿಸಿದ ಬಗೆ ಬಗೆಯ ಆಹಾರ ಉತ್ಪನ್ನಗಳು, ಸಿಹಿ ಮತ್ತು ಖಾರದ ತಿಂಡಿಗಳು, ಸಾವಯವ ಹಣ್ಣು, ತರಕಾರಿ, ಸೊಪ್ಪುಗಳು, ಮಹಿಳಾ ಉದ್ಯಮಿಗಳೇ ತಯಾರಿಸಿದ ಬಟ್ಟೆ, ಅಲಂಕಾರಿಕ ವಸ್ತುಗಳು, ಸೀರೆ, ಉಪ್ಪಿನಕಾಯಿ, ಹಪ್ಪಳ ಇನ್ನಿತರೆ ವಸ್ತುಗಳು, ತಿನಿಸುಗಳು ಗಮನ ಸೆಳೆದವು. ಮೈಸೂರು, ಮಂಡ್ಯ, ಕೊಡಗು, ಹಾಸನ, ಮಂಡ್ಯ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳಾ ಉದ್ಯಮಿಗಳು, ಸ್ವಯಂ ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಉತ್ತಮವಾಗಿಯೇ ನಡೆಯಿತು. ಆಹಾರ ಮೇಳದಲ್ಲಿ ವಿವಿಧ ಖಾದ್ಯಗಳನ್ನು ಜನರು ತಿಂದು ಖುಷಿಪಟ್ಟರು.ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಸುಬ್ರಹ್ಮಣ್ಯರಾವ್, ಸ್ಫೂರ್ತಿ ಘಟಕದ ಅಧ್ಯಕ್ಷೆ ಶ್ವೇತಾ ದಿನೇಶ್, ಕಾರ್ಯದಶಿ ರೀನಾ, ಪದಾಧಿ ಕಾರಿಗಳಾದ ಮಂಜುಳಾ ಇನ್ನಿತರರು ಉಪಸ್ಥಿತರಿದ್ದರು.

Translate »