`ಪರೀಕ್ಷಾ ಪೆ ಚರ್ಚೆ’ಗೆ ಚೇತನ ಮಾಲಂಗಿ ಸುರೇಶ್ ಆಯ್ಕೆ
ಮೈಸೂರು

`ಪರೀಕ್ಷಾ ಪೆ ಚರ್ಚೆ’ಗೆ ಚೇತನ ಮಾಲಂಗಿ ಸುರೇಶ್ ಆಯ್ಕೆ

January 26, 2019

ಮೈಸೂರು: ಪ್ರಧಾನಮಂತ್ರಿ ನರೇಂದ್ರಮೋದಿ ಅವರು ನಡೆಸಲಿರುವ `ಪರೀಕ್ಷಾ ಪೇ ಚರ್ಚೆ’ ಕಾರ್ಯಕ್ರಮಕ್ಕೆ ವಿದ್ಯಾರ್ಥಿನಿಯಾದ ಚೇತನ ಮಾಲಂಗಿ ಸುರೇಶ್ ಆಯ್ಕೆಯಾಗಿದ್ದಾರೆ.

ರಾಘವೇಂದ್ರ ನಗರದ ನಿವಾಸಿಗಳಾದ ಶಿಕ್ಷಕರಾದ ಮಾಲಂಗಿ ಸುರೇಶ್ ಹಾಗೂ ಮಂಜುಳಾ ದಂಪತಿಯ ಪುತ್ರಿಯಾದ ಇವರು, ಜೆಎಸ್‍ಎಸ್ ಫಾರ್ಮಸಿ ಕಾಲೇಜಿನ ದ್ವಿತೀಯ ವರ್ಷದ ಡಾಕ್ಟರ್ ಫಾರ್ಮಸಿ ವಿದ್ಯಾರ್ಥಿನಿ ಯಾಗಿದ್ದಾರೆ.ಜ.29ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಧಾನಮಂತ್ರಿ ಗಳೊಡನೆ ಸಂವಾದ ನಡೆಸಲಿದ್ದಾರೆ.

Translate »