ಜ.28ಕ್ಕೆ ಮೈಸೂರಿನಲ್ಲಿ ಫೀ.ಮಾ.ಕೆ.ಎಂ.ಕಾರ್ಯಪ್ಪ 120ನೇ ಜನ್ಮದಿನಾಚರಣೆ
ಮೈಸೂರು

ಜ.28ಕ್ಕೆ ಮೈಸೂರಿನಲ್ಲಿ ಫೀ.ಮಾ.ಕೆ.ಎಂ.ಕಾರ್ಯಪ್ಪ 120ನೇ ಜನ್ಮದಿನಾಚರಣೆ

January 26, 2019

ಮೈಸೂರು: ದೇಶದ ಪ್ರಥಮ ಸೇನಾ ಮುಖ್ಯಸ್ಥರಾದ ಪೀಲ್ಡ್ ಮಾರ್ಷಲ್ ಕೊದಂಡೇರ ಎಂ.ಕಾರ್ಯಪ್ಪ (ಕೆ.ಎಂ. ಕಾರ್ಯಪ್ಪ) ಅವರ 120ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಕೊಡವ ಸಮಾಜ ಜ.28ರಂದು ಹಮ್ಮಿಕೊಂಡಿದೆ.
ನಗರದ ಫಿ.ಮಾ.ಕೆ.ಎಂ.ಕಾರ್ಯಪ್ಪ (ಮೆಟ್ರೊಪೋಲ್) ವೃತ್ತದಲ್ಲಿ ಸೋಮ ವಾರ ಬೆಳಿಗ್ಗೆ 9 ಗಂಟೆಗೆ ವೀರಸೇನಾನಿ, ಕೊಡಗಿನ ಸುಪುತ್ರನ ದೊಡ್ಡ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸ ಲಾಗುವುದು.

ರಕ್ಷಣಾ ಪಡೆಯ ಸೇನಾನಿಗಳು, ಮಾಜಿ ಯೋಧರು, ಸಾರ್ವಜನಿಕರು ಈ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಸಬೇಕು ಎಂದು ಕೊಡವ ಸಮಾಜದ ಕಾರ್ಯದರ್ಶಿ ಮಲಚಿರಾ ಎಂ.ಪೊನ್ನಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.

Translate »